• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಅಪ್ಪು ಇಷ್ಟ ಪಟ್ಟಿದ್ದ ಕಥೆಗೆ ವಿನಯ್ ರಾಜ್ ಕುಮಾರ್ ನಾಯಕ: “ಒಂದು ಸರಳ ಪ್ರೇಮ ಕತೆ” ಪೋಸ್ಟರ್ ರಿಲೀಸ್

ಪ್ರತಿಧ್ವನಿ by ಪ್ರತಿಧ್ವನಿ
March 9, 2023
in ಸಿನಿಮಾ
0
ಅಪ್ಪು ಇಷ್ಟ ಪಟ್ಟಿದ್ದ ಕಥೆಗೆ ವಿನಯ್ ರಾಜ್ ಕುಮಾರ್ ನಾಯಕ: “ಒಂದು ಸರಳ ಪ್ರೇಮ ಕತೆ” ಪೋಸ್ಟರ್ ರಿಲೀಸ್
Share on WhatsAppShare on FacebookShare on Telegram

ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರಿನ ನಟ ಡಾ.ಪುನೀತ್ ರಾಜ್​ಕುಮಾರ್ ಕೇಳಿ ಇಷ್ಟಪಟ್ಟಿದ್ದ ಕಥೆಗೆ ಈಗ ಅದೇ ವಂಶದ ಮೂರನೇ ಕುಡಿ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್​ಕುಮಾರ್ ಕಥೆಗೆ ಜೀವ ತುಂಬಲು ನಾಯಕನಾಗಿ ನಟಿಸುತ್ತಿದ್ದು ಚಿತ್ರಕ್ಕೆ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ADVERTISEMENT

ನಿರ್ದೇಶಕ ಸಿಂಪಲ್ ಸುನಿ, ಪುನೀತ್ ರಾಜ್​ಕುಮಾರ್​ಗಾಗಿ ಕಥೆ ಹೇಳಿದ್ರೂ ಆ ಕಥೆಯನ್ನು ಪುನೀತ್ ರಾಜ್​ಕುಮಾರ್ ಕೇಳಿ​ ಇಷ್ಟವನ್ನು ಪಟ್ಟಿದ್ರೂ,ಸಿನಿಮಾ ತೆಗೆಯಬೇಕು ಎನ್ನುವಷ್ಟರಲ್ಲಿ ಅಪ್ಪು ನಿಧನ ಹೊಂದಿದರು. ಈಗ ಅದೇ ಕಥೆಯನ್ನು ಒಂದು ಸರಳ ಪ್ರೇಮಕಥೆ ಹೆಸರಿನಲ್ಲಿ ತೆರೆ ಮೇಲೆ ಬರಲು ಸಿಂಪಲ್ ಸುನಿ ಸೆಟ್ಟಾಕಿ ಸಿನಿಮಾದಲ್ಲಿ ವಿನಯ್ ರಾಜ್​ಕುಮಾರ್ ನಾಯಕನ ಪಾತ್ರ ನೀಡಿದ್ದಾರೆ.

ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, (8 ಮಾರ್ಚ್ 2023) ರಂದು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಒಂದು ಸರಳ ಪ್ರೇಮ ಕತೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ವಿಕ್ರಮ್ ಬೆಡಗಿ ಧಾರವಾಡದ ಸ್ವಾತಿಷ್ಠ ಹಾಗೂ ರಾಧಾ ಕೃಷ್ಣ ಧಾರಾವಾಹಿ ರಾಧೆ ಖ್ಯಾತಿಯ ನಟಿ ಮಲ್ಲಿಕಾ ಸಿಂಗ್ ನಟ ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಟ ವಿನಯ್ ರಾಜ್​ಕುಮಾರ್ ಮಾತನಾಡಿ ಸಿಂಪಲ್ ಸುನಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಬಿನ್ ಹುಡ್, ಸ್ಟೋರಿ ಆಫ್ ರಾಯಘಡ, ಗತವೈಭವ ಜೊತೆಗೆ ಅವತಾರ ಪುರುಷ 2 ಸಿನಿಮಾವನ್ನು ಘೋಷಿಸಿದ್ದಾರೆ. ಇದರ ನಡುವೆ ಒಂದು ಸರಳ ಪ್ರೇಮಕತೆ ಸಿನಿಮಾ ಸಹ ಪ್ರಾರಂಭಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾವನ್ನು ಸಿಂಪಲ್ ಸುನಿ ತೆರೆಗೆ ತರಲು ಹೊರಟಿದ್ದಾರೆ.ಮೊದಲಿನಿಂದಲೂ ನನಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳೆಂದರೆ ಬಹಳ ಇಷ್ಷ.ಸಂಗೀತ ನಿರ್ದೇಶಕ ಆಗುವ ಕನಸು ಹೊತ್ತಿರುವ ಯುವಕನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.ಅಪ್ಪು ರವರು ಒಪ್ಪಿದ್ದ ಕಥೆ ಇದಾಗಿದ್ದು ನನಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು.

ನಿರ್ದೇಶಕ ಸಿಂಪಲ್ ಸುನಿರವರು ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾ 10 ವರ್ಷ ಹಿನ್ನಲೆ ಕೇಕ್ ಕಟ್ ಮಾಡುವುದರ ಮೂಲಕ ಸಂಭ್ರಮಿಸಿದರು.

ಸಿನಿಮಾದಲ್ಲಿ ಮಲ್ಲಿಕಾ ಹಾಗೂ ಸ್ವಾತಿಷ್ಟಾ ಹೆಸರಿನ ಇಬ್ಬರು ನಾಯಕಿಯರಿದ್ದಾರೆ.ಈ ಸಿನಿಮಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ 50% ಚಿತ್ರೀಕರಣವಾಗಿದೆ.ಇದೀಗ ಮೈಸೂರಿನಲ್ಲಿ ಸೆಟ್ ಹಾಕಿದ್ದೇವೆ.ಈ ವರ್ಷವೇ ಚಿತ್ರ ತೆರೆ ಮೇಲೆ ಬರಲಿದೆ ಎಂದರು.

ರಾಧಾ ಕೃಷ್ಣ ಧಾರಾವಾಹಿ ರಾಧೆ ಖ್ಯಾತಿಯ ನಟಿ ಮಲ್ಲಿಕಾ ಸಿಂಗ್ ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತು ಆರಂಭಿಸಿ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.ಈ ಬಾರಿ ಕಪ್ ನಮ್ದೆ ಎಂದು ಹರ್ಷವ್ಯಕ್ತಪಡಿಸಿದರು.

ತದನಂತರ ಮಾತನಾಡಿದ ಮೈಸೂರು ರಮೇಶ್,  ಮಲ್ಲಿಕಾ ಸಿಂಗ್ ರವರಿಗೆ ಸ್ವಲ್ಪ ಕನ್ನಡ ಬರಲ್ಲ. ಸುನಿ ಅವರು ನಟಿಯನ್ನ ಕನ್ನಡದಲ್ಲಿಯೇ ಮಾತನಾಡಿಸುವ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮುಗಿಯುವವರೆಗೆ ಸುನಿರವರು ಮಲ್ಲಿಕಾರವರಿಗೆ ಕನ್ನಡ ಕಲಿಸಿಬಿಡಿತ್ತಾರೆ ಎಂದರಲ್ಲದೇ ನಮ್ಮ ಸಿನಿಮಾಕ್ಕೆ ಸಿನಿಪ್ರೀಯರು ಆಶೀರ್ವಾದಿಸುವಂತೆ ಮನವಿ ಮಾಡಿದರು.

Tags: CinemaNewspuneeth rajkumarvinay rajkumar
Previous Post

150 ಸ್ಥಾನ ಗೆಲ್ಲಲು ವಿ ಸೋಮಣ್ಣರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಿ: ಅಭಿಮಾನಿಗಳ ಒತ್ತಾಯ

Next Post

ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಗುಂಡು-ತುಂಡು ಪಾರ್ಟಿ: ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಮತದಾರರು

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
ಸಿನಿಮಾ

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

by ಪ್ರತಿಧ್ವನಿ
May 25, 2026
0

ಕನ್ನಡದ ಸೂಪರ್‌ಹಿಟ್‌ಗೆ ಮತ್ತೊಂದು ಗರಿ; ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿಗೆ ಎಂಟ್ರಿ. ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಸು ಫ್ರಮ್‌ ಸೋ’ ಇದೀಗ ಮರಾಠಿ ಭಾಷೆಗೆ ರಿಮೇಕ್‌...

Read moreDetails
ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

May 21, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
Next Post
ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಗುಂಡು-ತುಂಡು ಪಾರ್ಟಿ: ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಮತದಾರರು

ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಗುಂಡು-ತುಂಡು ಪಾರ್ಟಿ: ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಮತದಾರರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada