ಅಭಿನಯ ಚಕ್ರವರ್ತಿ ಕಿಚ್ಚ ಸುದೀಪದದ ನಟನೆಯ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಕಮಾಯಿ ಮಾಡಿ ಮುನ್ನುಗುತ್ತಿರುವ ಬೆನ್ನಲ್ಲೇ ಕಿಚ್ಚನ ಅಬೀಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ಒಂದನ್ನು ನೀಡಿದೆ.
ಸೆಪ್ಟೆಂಬರ್ 2ರಂದು ಕಿಚ್ಚನ ಜನ್ಮದಿನದ ಪ್ರಯುಕ್ತ ಜೀ5 ಒಟಿಟಿಯಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗುತ್ತಿದೆ. ಜುಲೈ 28ರಂದು ವಿಶವದಾದ್ಯಂತ ತೆರೆಕಂಡಿದ್ದ ವಿಕ್ರಾಂತ್ ರೋಣಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದರು. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು.
ಇನ್ನು ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡಿದಹಾಸ್ಯ ಪ್ರಧಾನ ಚಿತ್ರ ಪೆಟ್ರೋಮ್ಯಾಕ್ಸ್ ವೂಟ್ ಸೆಲೆಕ್ಟ್ ಒಟಿಟಿಯಲ್ಲಿ ಆಗಸ್ಟ್ 26ರಂದು ಬಿಡುಗಡೆಯಾಗಿದ್ದು ಚಿತ್ರವು ನಾಲ್ಕು ಅನಾಥರ ಜೀವನದ ಸುತ್ತ ಸಾಗುತ್ತದೆ.
ಚಿತ್ರಕ್ಕೆ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದು ಮಾನವ ಸಂಬಂದ ಹಾಗು ಒಗ್ಗಟ್ಟಿನ ಸಾರವನ್ನ ಚಿತ್ರದಲ್ಲಿ ತೋರಿಸಲಾಗಿದೆ.