
ಬಿಜೆಪಿ ರೆಬೆಲ್ ನಾಯಕರು ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ಬಂಡಾಯ ಟೀಕೆಗೆ ಉತ್ತರ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದು ಯಾರು..? ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಎಂ ವಿರುದ್ಧ ಹೋರಾಟ ಮಾಡಿದ್ದು, ನಮ್ಮ ಕಾರ್ಯಕರ್ತರು. ಈಗಾಗಲೇ ಈ ರೀತಿಯ ಹೇಳಿಕೆಯಿಂದ ಕಾರ್ಯಕರ್ತರೆಲ್ಲರೂ ನೊಂದಿದ್ದಾರೆ. ಅವರು ದೆಹಲಿ ನಾಯಕರ ಮುಂದೆ ಏನು ಅಭಿಪ್ರಾಯ ತಿಳಿಸಬೇಕೋ ತಿಳಿಸಲಿ. ನಾನು ಸಹ ದೆಹಲಿ ನಾಯಕರ ಸಂಪರ್ಕದಲ್ಲಿದ್ದೇನೆ ಏನು ಮಾಹಿತಿ ಕೊಡಬೇಕೋ ಕೊಟ್ಟಿದ್ದೇನೆ ಎಂದಿದ್ದಾರೆ. ಶಿವಮೊಗ್ಗದಿಂದ ಕೆಂಪೇಗೌಡ ಏರ್ಪೋರ್ಟ್‌ಗೆ ಬಂದಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತುಂಬಾ ಸಮಾಧಾನದಿಂದ ಹೇಳಿಕೆ ಕೊಟ್ಟಿದ್ದಾರೆ.
ಭಿನ್ನಮತೀಯ ನಾಯಕರು ದೆಹಲಿ ದಂಡಯಾತ್ರೆ ಮಾಡಿದ್ರು, ವಿಜಯೇಂದ್ರ ಏನು ಅಂತ ದೆಹಲಿ ನಾಯಕರಿಗೆ ಗೊತ್ತಿದೆ ಎಂದಿದ್ದಾರೆ ರೇಣುಕಾಚಾರ್ಯ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸವನ್ನ ಬಿಜೆಪಿ ರಾಜ್ಯಾಧ್ಯಕ್ಚ ಬಿ ವೈ ವಿಜಯೇಂದ್ರ ಮಾಡಿದ್ದಾರೆ ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಆದರೂ ಇನ್ನೂ ಟೇಕಾಫ್ ಆಗಿಲ್ಲ. ಇವರು ಕಾಂಗ್ರೆಸ್ ವಿರುದ್ಧ ಮಾತನಾಡದೆ ಬಿಜೆಪಿ ವಿರುದ್ಧ ಮಾತನಾಡುತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇವಲ ನಾಲ್ಕೈದು ಜನರು ದೆಹಲಿ ಓಡಾಡುತಿದ್ದಾರೆ. ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟಾಗ ಬಿಜೆಪಿ ಯಾವ ಸ್ಥಿತಿಗೆ ಬಂತು..? ಭಿನ್ನಮತೀಯರು ಹಾದಿ ಬೀದಿಯಲ್ಲಿ ಮಾತನಾಡ್ತಾರೆ, ಇವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆವುದು ಅಷ್ಟೆ ಸತ್ಯ. ಕಾಂಗ್ರೆಸ್ ವಿರುದ್ಧ ಭಿನ್ನಮತೀಯರು ಕಾಂಗ್ರೆಸ್ ವಿರುದ್ಧ ಮಾತನಾಡ್ತಾ ಇಲ್ಲ. ನಿಮಗೆ ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ಎಂದು ಸವಾಲು ಎಸೆದಿದ್ದಾರೆ.
ಒಬ್ಬ ನಾಯಕ ಎಲ್ಲ ಬಿಚ್ಚಿಡ್ತೀನಿ ಅಂತ ಹೇಳ್ತೀಯಾ ಅಲ್ವಾ..? ಮಾಡಬಾರದ ಭ್ರಷ್ಟಾಚಾರ ನೀನು ಮಾಡಿದೀಯಾ..? ಇಷ್ಟೆಲ್ಲ ಮಾತನಾಡೋದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ನಮಗೂ ಡೆಲ್ಲಿಗೆ ಹೋಗುದು ಗೊತ್ತು, ಸಭೆ ಮಾಡೋದು ಗೊತ್ತು. ಬಿಜೆಪಿ ಹಾಳು ಮಾಡೋಕೆ ಈ ರೀತಿ ಹೇಳಿಕೆಯನ್ನ ಕೊಡುತಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಲಿ ಯಾರ ಯೋಗ್ಯತೆ ಏನು ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಮುಲು ಎತ್ತಿಕಟ್ಟಲು ಹೋದರು ಆದರೆ ಅವರು ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ, ಬೊಮ್ಮಾಯಿ, ಸೋಮಣ್ಣ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಮ್ಮನೆ ಎಳೆದು ತರುತಿದ್ದಾರೆ. ನಾವು ಎಲ್ಲರೂ ಕೂಡ ಸೇರಿಕೊಂಡು ದೆಹಲಿಗೆ ಹೋಗಲು ಸಿದ್ಧ ನಮಗೇನು ದೆಹಲಿ ದಾರಿ ಗೊತ್ತಿಲ್ವಾ..? ಇವರ ತಲೆ ಹರಟೆ ಜಾಸ್ತಿ ಆಗಿದೆ ಇವರಿಂದ ಪಕ್ಚದ ವರ್ಚಸ್ಸು ಕಡಿಮೆ ಆಗ್ತಾ ಇದೆ. ವಿಜಯೇಂದ್ರ ಪಕ್ಷದ ಸಂಘಟನೆಗೆ ಶ್ರಮಿಸುತಿದ್ದಾರೆ. ಭಿನ್ನರ ವಿರುದ್ಧ ನಾಳೆ ನಾವು ಕೂಡ ಬೆಂಗಳೂರಿನ ಕಟ್ಟಾ ಸುಬ್ರಮಣ್ಯ ನಾಯ್ಡು ಮನೆಯಲ್ಲಿ ಸಭೆ ಸೇರುತ್ತೇವೆ ಎಂದಿದ್ದಾರೆ.

ನಾಳಿನ ಸಭೆಯಲ್ಲಿ ಇವರ ವಿರುದ್ಧ ಹೇಗೆ ಹೋರಾಟ ಮಾಡಬೇಕು ಅನ್ನೋದನ್ನು ತೀರ್ಮಾನ ಮಾಡ್ತೀವಿ. ನಾವೆಲ್ಲ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನಿಗೆ ನೀಲ್ತಿವಿ, ಭಿನ್ನಮತೀಯರ ವಿರುದ್ಧ ಕ್ರಮ ಆಗಲೇ ಬೇಕು ಇವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲೇಬೇಕು ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ.