ಭಾರತೀಯ ಬ್ಯಾಂಕುಗಳಿಂದ (Indian banks) ಸಾವಿರಾರು ಕೋಟಿ ಸಾಲ ಪಡೆದು ಮರು ಪಾವತಿ ಮಾಡದೇ ದೇಶ ಬಿಟ್ಟು ವಿದೇಶದಲ್ಲಿ ತಲೆ ಮರಿಸಿಕೊಂಡಿರುವ ಉದ್ಯಮಿ, ಮದ್ಯದ ದೊರೆ ವಿಜಯಮಲ್ಯ (Vijay malya) ಇದೀಗ ಹೊಸ ದಾಳ ಉರುಳಿಸಿದ್ದಾರೆ. ಬ್ಯಾಂಕ್ ಗಳಿಂದ ಲೆಕ್ಕ ಕೋರಿ ವಿಜಯ ಮಲ್ಯ ಅರ್ಜಿ ಹಾಕಿದ್ದಾರೆ.
![](https://pratidhvani.com/wp-content/uploads/2025/02/IMG_7673.jpeg)
ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಮಲ್ಯ ಬ್ಯಾಂಕ್ ಗಳಿಗೆ 6,200 ಕೋಟಿ ಸಾಲ (6,200 crores) ಪಾವತಿ ಮಾಡಬೇಕಿತ್ತು. ಆದ್ರೆ ಸದ್ಯ 14,000 ಕೋಟಿ ಸಾಲ (14,000 crores) ವಸೂಲಾತಿಯಾಗಿದೆ ಎಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ (Nirmala sitaraman) ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಸಾಲ ವಸೂಲಾತಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ 10,200 ಕೋಟಿ ಸಾಲ ವಸೂಲಾಗಿದೆ ಎಂದು ಮಾಹಿತಿ ನೀಡಿದ್ದಾರೆ . ಹೀಗಾಗಿ ಸಾಲಕ್ಕೂ ಎರಡು ಪಟ್ಟು ವಸೂಲಾತಿಯಾಗಿದೆ ಎಂಬ ಲೆಕ್ಕವನ್ನು ಈ ಇಬ್ಬರು ಮಂಡಿಸಿದ್ದು ಈ ಬಗ್ಗೆ ಸರಿಯಾದ ಲೆಕ್ಕ ತಿಳಿಸಬೇಕೆಂದು ವಿಜಯ್ ಮಲ್ಯ ಅರ್ಜಿ ಹಾಕಿದ್ದಾರೆ.