ಭಾರೀ ನಿರೀಕ್ಷೆ ಮೂಡಿಸಿದ್ದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ನಟ ವಿಜಯ್ ದೇವರಕೊಂಡ ನಿರ್ಮಾಪಕರಿಗೆ 6 ಕೋಟಿ ರೂ. ಸಂಭಾವನೆ ಹಿಂತಿರುಗಿಸಲಿದ್ದಾರೆ ಎನ್ನಲಾಗಿದೆ.
ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ನಟಿಸಿದ ಲೈಗರ್ ಸಿನಿಮಾ ಭಾರೀ ಕುತೂಹಲ ಮೂಡಿಸಿತ್ತು. ಆದರೆ ಚಿತ್ರ ಈ ಸಾಲಿನ ಅತ್ಯಂತ ಫ್ಲಾಪ್ ಚಿತ್ರಗಳಲ್ಲಿ ಒಂದಾಗಿದ್ದು, ಚಿತ್ರ ಬಿಡುಗಡೆ ಆದ ಮೊದಲ ವಾರವೇ ಹಲವಾರು ಥಿಯೇಟರ್ ಗಳಿಂದ ಎತ್ತಂಗಡಿ ಆಗಿತ್ತು.

ನಿರ್ಮಾಪಕ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಶೀಘ್ರದಲ್ಲೇ ವಿತರಕರನ್ನು ಭೇಟಿ ಮಾಡಲಿದ್ದು, ಚಿತ್ರದಿಂದ ಆದ ನಷ್ಟದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.












