ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಇನ್ನೇನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯೋದಕ್ಕೆ ಇಡೀ ತಂಡ ಭರ್ಜರಿ ಪ್ರಚಾರ ಮಾಡುತ್ತಿದೆ.
ಟಾಲಿವುಡ್ ರೌಡಿ ಅಂತಲೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಇನ್ನೇನು ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಬಾಹುಬಲಿ, ಕೆಜಿಎಫ್, ಪುಷ್ಪ, ವಿಕ್ರಾಂತ್ ರೋಣ ನಂತರ ದಕ್ಷಿಣ ಭಾರತ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎಲ್ಲೆಡೆ ಸದ್ದು ಮಾಡಿ ದಾಖಲೆ ಬರೆಯಲು ಇದ್ದವಾಗಿದೆ.
ಸ್ಟಾರ್ ನಟರ ಬಿಗ್ ಬಜೇಟ್ ಮೂವಿಗಳನ್ನು ಆಕ್ಷನ್ ಕಟ್ ಹೇಳೊದ್ರಲ್ಲಿ ಪೂರಿ ಜಗನ್ನಾಥ್ ಫೇಮಸ್. ಅಂತಹ ಅದ್ಭುತ ನಿರ್ದೇಶಕರು ನಿರ್ದೇಶಿಸಿರುವ ಲೈಗರ್ ಮೂವಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾದರೂ. ಸಿನಿಮಾ ಬಾಯ್‌ಕಟ್ ಬಿಸಿಗೆ ತಗುಲಿಕೊಂಡಿದೆ. ಇದರ ನಡುವೆ ಎಷ್ಟು ಪ್ರಮಾಣದ ಸದ್ದು ಮಾಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳಲಿದೆ ಎಂಬುದೇ ಪ್ರಶ್ನೆ.

ಸಿನಿಮಾ ಪ್ರಕಾರಕ್ಕೆಂದು ಎಲ್ಲೆಲ್ಲಿಗೆ ತಂಡ ಹೋಗಿತ್ತೋ ಅಲ್ಲೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಸುಮಾರು 87.70 ಕೋಟಿ ರೂ. ದಾಟಿದೆ ಎನ್ನಲಾಗಿದೆ.
‘ಅಯೋಗ್ಯ’ ಚಿತ್ರದ ನಿರ್ಮಾಪಕ ಚಂದ್ರಶೇಖರ್. ‘ಪೊಗರು’ ಸಿನಿಮಾದ ನಿರ್ಮಾಪಕ ಗಂಗಾಧರ್ ಇಬ್ಬರೂ ಸೇರಿ ಕರ್ನಾಟಕದಾದ್ಯಂತ ಸಿನಿಮಾ ವಿತರಣೆ ಹಕ್ಕನ್ನು ಪಡೆದಿದ್ದಾರೆ.