ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಾಜ್ಯ ಕಾಂಗ್ರೆಸ್ ರಚನೆ ಮಾಡಿದೆ. ಪ್ರೊ ಎಂ.ಬಿ ರಾಜೀವ್ ಗೌಡ ಅವರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಲಾಗಿದೆ.
ಚುನಾವಣಾ ಪ್ರಣಾಳಿಕೆ ಸಮಿತಿ:
ಪ್ರೊ ಎಂ.ಬಿ ರಾಜೀವ್ ಗೌಡ ( ಅದ್ಯಕ್ಷರು), ಮಂಸೂರ್ ಅಲಿ ಖಾನ್ (ಕನ್ವೈನರ್), ಸಿದ್ದಯ್ಯ ನಿವೃತ್ತ ಐಎಎಸ್ ಅಧಿಕಾರಿ, ಪ್ರೊ. ರಾಮಕೃಷ್ಣ ,ಭವ್ಯ ನರಸಿಂಹಮೂರ್ತಿ ಸೇರಿ 33 ಮಂದಿಯನ್ನು ಸಮಿತಿಯಲ್ಲಿ ಹೆಸರಿಸಲಾಗಿದೆ.

ಇಂದು ಕೆಪಿಸಿಸಿ ಕಛೇರಿ ಕ್ವೀನ್ಸ್ ರೋಡ್ನಲ್ಲಿ ಸಂಜೆ ಆರು ಗಂಟೆಗೆ ಸಭೆ ನಡೆಯಲಿದ್ದು ಪ್ರಣಾಳಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.

