ಈಗಾಗಲೇ ಪರಪ್ಪನ ಅಗ್ರಹಾರದ (paralana agrahara) ಪಾಲಾಗಿರುವ ರೇವಣ್ಣ (Revanna) ವಿರುದ್ಧ ಆರೋಪವಿರುವ ಕಿಡ್ನ್ಯಾಪ್ ಕೇಸ್ (Kidnap case) ನಲ್ಲಿ ಬಿಗ್ ಟ್ರಸ್ಟ್ (Big twist) ಸಿಕ್ಕಿದೆ ಖುದ್ದು ಸಂತ್ರಸ್ತ ಮಹಿಳೆ ಮಾತನಾಡಿರುವ ವಿಡಿಯೋ (video)ಒಂದು ವೈರಲ್ ಆಗ್ತಿದೆ . ಈ ವಿಡಿಯೋದಲ್ಲಿ ರೇವಣ್ಣ ಅವರಿಂದ ತನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆ ಹೇಳಿರುವ ಪ್ರಕಾರ ರೇವಣ್ಣ ,ಪ್ರಜ್ವಲ್ ರೇವಣ್ಣ(prajwal revanna) ,ಸತೀಶ್ ಬಾಬಣ್ಣ (Sathish babanna) ಈ ಯಾರೊಬ್ಬರಿಂದಲೂ ತಮಗೆ ಏನು ತೊಂದರೆಯಾಗಿಲ್ಲ . ತಮ್ಮನ ಯಾರೂ ಕೂಡ ಅಪಹರಣ ಮಾಡಿಲ್ಲ ತಾನು 4 ದಿನ ಸಂಬಂಧಿಕರ ಮನೆಯಲ್ಲಿ ಇದ್ದು ಬರಲು ಬಂದಿದ್ದ ಸಂದರ್ಭದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾಗಿದೆ . ತಮ್ಮ ಮಗನಿಗೆ ತಿಳುವಳಿಕೆ ಇಲ್ಲದೆ ದೂರು ನೀಡಿರುವುದಾಗಿ ಮಹಿಳೆ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಆದರೆ ಈ ಮುಂಚೆ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಎಸ್ಐಟಿ (SIT) ಅಧಿಕಾರಿಗಳ ತಂಡ ಹೇಳಿಕೊಂಡಿತ್ತು ಮತ್ತು ಮಹಿಳೆಯಿಂದ ಅಪಹರಣಕ್ಕೆ ಸಂಬಂಧ ಪಟ್ಟಂತೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು ಇದೀಗ ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಎಸ್ಐಟಿ ತನಿಖೆಯ ಮೇಲು ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
ಇಷ್ಟೆಲ್ಲದರ ಮಧ್ಯೆ ನಾಳೆ ರೇವಣ್ಣ ಜಾಮೀನು ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ ನ್ಯಾಯಾಧೀಶರು ಈ ಮಹಿಳೆಯ ವಿಡಿಯೋ ಹೇಳಿಕೆಯನ್ನು ಯಾವ ರೀತಿ ಪರಿಗಣಿಸಲಿದ್ದಾರೆ ಎಂಬುದು ಪ್ರಕರಣದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ನಿರ್ಧರಿಸಲಿದೆ.