ಲೋಕಸಭೆ ಚುನಾವಣೆ (parliment election) ಕಾವು ಜೋರಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುತ್ತಿದ್ದಂತೆ ವಿಭಿನ್ನ ರೀತಿಯಲ್ಲಿ ಪ್ರಚಾರ ಕೂಡ ಆರಂಭಗೊಂಡಿದೆ. ಇಂಡಿಯಾ (I.N.D.I.A) ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ (bjp) ಸಖತ್ತಾಗಿ ಮೈತ್ರಿಕೂಟದ ಕಾಲೆಳೆದಿದೆ.
ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಗೊಂದಲ ಎದ್ದಿದೆ. ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಒಂದೇ ಒಂದು ಸ್ಪಷ್ಟ ಹೆಸರು ಅಂತಿಮವಾಗಿಲ್ಲ. ಇದನ್ನೇ ನೆಪ ಮಾಡಿಕೊಂಡ ಬಿಜೆಪಿ ಜಾಹೀರಾತು (Advertisment) ಮೂಲಕ ಇಂಡಿ ಅಲಯನ್ಸ್ ಲೇವಡಿ ಮಾಡಿದೆ.ಈ ಕುರಿತು ಬಿಜೆಪಿ ಪಕ್ಷದ ಎಕ್ಸ್ ಖಾತೆಯಲ್ಲಿ ಎರಡುವರೆ ನಿಮಿಷದ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಇಂಡಿಯಾ ಕೂಟದ ಪ್ರಮುಖ ನಾಯಕರು ಮದುವೆ ವಿಚಾರವಾಗಿ ವಧುವಿನಂತೆ ರೆಡಿಯಾಗಿರುವ ಮಹಿಳೆ ಜೊತೆ ಸಭೆ ಸೇರಿದ್ದಾರೆ. ಆಗ ಯುವತಿ ವರನ ಬಗ್ಗೆ ಪ್ರಶ್ನಿಸುವಾಗ ನಡೆಸುವ ಸಂಭಾಷಣೆ ಬಾರಿ ಮಜಾವಾಗಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(rahul gandhi), ಸೋನಿಯಾ ಗಾಂಧಿ(sonia gandhi), ಆರ್ಜೆಡಿ ನಾಯಕ ಲಾಲು ಯಾದವ್(lalu yadav), ತೇಜಸ್ವಿ ಯಾದವ್ (tejaswi yadav), ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ(mamata banarji), ಉದ್ಧವ್ ಠಾಕ್ರೆ (uddav takre), ಅರವಿಂದ್ ಕೇಜ್ರವಾಲ್ (arvind Kejriwal) ಸೇರಿದಂತೆ ಹಲವು ಪ್ರತಿಪಕ್ಷ ನಾಯಕರ ಪಾತ್ರದಲ್ಲಿ ನಟಿಸಿದ್ದಾರೆ. ವಧು ವರನಿಗಾಗಿ ಹುಡುಕುತ್ತಾಳೆ. ಆದರೆ ಅವಳ ಮುಂದೆ ಅನೇಕರು ಇದ್ದಾರೆ. ಈ ವಿಡಿಯೋ ಮೂಲಕ ಬಿಜೆಪಿಯು ವಿರೋಧ ಪಕ್ಷದ ಇಂಡಿ ಕೂಟದಲ್ಲಿ ನಡೆಯುತ್ತಿರುವ ಪ್ರಧಾನಿ ಅಭ್ಯರ್ಥಿಯ ಕಿತ್ತಾಟವನ್ನು ವ್ಯಂಗ್ಯಭರಿತವಾಗಿ ಬಿಂಬಿಸಿದೆ.