ಮನೆಗಳಲ್ಲಿ ಪಾತ್ರೆಗಳು ಸಾಕಷ್ಟು ಇದ್ದರೂ ಕೂಡ ಟಿ ಅಥವಾ ಕಾಫಿಯನ್ನು ಮಾಡಲು ಪ್ರತಿದಿನ ಒಂದೇ ಪಾತ್ರೆಯನ್ನ ಬಳಸುತ್ತೇವೆ ಅದಲು ಟೀ ಮಾಡಿದ ಪಾತ್ರೆಯನ್ನು ತೊಳೆಯಲು ಸ್ವಲ್ಪ ಕಷ್ಟ ಯಾಕೆಂದರೆ ಕಲೆಗಳು ಹೆಚ್ಚಿರುತ್ತದೆ. ಹಾಗೂ ಕೆಲವು ಬಾರಿ ಯಾವುದಾದರು ಒಂದು ಪದಾರ್ಥವನ್ನು ನೋಡದೆ ಅಥವಾ ಅದರ ಮೇಲೆ ಗಮನಹರಿಸದೆ ಅದು ಅತಿಯಾಗಿ ಬಿಸಿಯಾಗಿ ಹೊತ್ತಿ ಹೋಗಬಹುದು. ಇದರಿಂದ ಪದಾರ್ಥ ಹಾಳಾಗುವುದಲ್ಲದೆ ಪಾತ್ರೆ ಕೂಡ ಸುಟ್ಟು ಹೋಗುತ್ತದೆ. ಚಹಾ ಮಾಡಿದ ಪಾತ್ರೆಯಲ್ಲಿ ಇರುವಂತಹ ಕಲೆಗಳನ್ನ ಹಾಗೂ ಸುಟ್ಟು ಕರಕಲು ಆದಂತ ಕಲೆಗಳಲ್ಲೂ ಶಮನ ಮಾಡಲು ಸ್ವಲ್ಪ ಕಷ್ಟ.. ಹಾಗಾಗಿ ಈ ಬೆಸ್ಟ್ ಟಿಪ್ಸ್ ಬಳಸಿ ಕಲೆಗಳನ್ನ ಹೋಗಲಾಡಿಸಿ.
ಬೇಕಿಂಗ್ ಸೋಡಾ
ಯಾವುದೇ ಗಾಢವಾದ ಕಲೆಗಳನ್ನ ಶಮನ ಮಾಡಲು ಬೇಕಿಂಗ್ ಸೋಡಾ ಬೆಸ್ಟ್. ಟೀ ಸ್ಪೂನ್ ನಷ್ಟು ಬೇಕಿಂಗ್ ಸೋಡಾ ಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನ ಬೆರೆಸಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ ನಂತರ ಒಂದು ಸ್ಪಾಂಜ್ ಅಥವಾ ಸ್ಕ್ರಬ್ಬರ್ ನಿಂದ ಕಲೆಯಾದ ಪಾತ್ರೆಯನ್ನು ಉಜ್ಜುವುದರಿಂದ ಕಲಿಗಳು ನಿವಾರಣೆ ಆಗುತ್ತದೆ.
ನಿಂಬೆರಸ
ಪಾತ್ರೆ ಹಾಗೂ ಬಟ್ಟೆ ತೊಳೆಯುವ ಸೋಪ್ ನಲ್ಲಿ ನಿಂಬೆಹಣ್ಣನ್ನು ಬಳಸಿರ್ತಾರೆ ಕಾರಣ ಕಲೆಗಳನ್ನ ಶಮನ ಮಾಡಲು ಸುಲಭ ಹಾಗೂ ಪರಿಮಳಕ್ಕೋಸ್ಕರ.. ಇನ್ನು ಪಾತ್ರೆಗಳಲ್ಲಾಗಿರುವಂತಹ ಕಲೆಗಳನ್ನ ಬೇಗನೆ ಕಡಿಮೆ ಮಾಡಲು ಒಂದೆರಡು ಟೇಬಲ್ ಸ್ಪೂನಷ್ಟು ನಿಂಬೆರಸಕ್ಕೆ, ಅರ್ಧ ಟೀ ಸ್ಪೂನ್ ನಷ್ಟು ಉಪ್ಪನ್ನ ಬೆರೆಸಿ ಆ ಮಿಶ್ರಣವನ್ನ ಸ್ಕ್ರಬ್ ಗೆ ಹಾಕಿ, ನಂತರ ಪಾತ್ರೆಯನ್ನು ಉಚ್ಚುವುದರಿಂದ ಕಲೆಗಳು ತಕ್ಷಣಕ್ಕೆ ಮಾಯ.
ವೈಟ್ ವಿನಿಗರ್
ಎರಡು ಟೇಬಲ್ ಸ್ಪೂನ್ ನಷ್ಟು ವೈಟ್ ವಿನೆಗರ್ ಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಸ್ಪಾಂಜ್ ಗೆ ಮಿಶ್ರಣವನ್ನು ಹಾಕಿ ಪಾತ್ರಗಳನ್ನ ಉಜ್ಜುವುದರಿಂದ ಕಲೆಗಳು ಕಡಿಮೆಯಾಗುತ್ತದೆ.