ಧರ್ಮಸ್ಥಳದ (Dharmasthala case) ತನಿಖೆ ವಿಚಾರದಲ್ಲಿ ಬಿಜೆಪಿ (Bjp) ನಾಯಕರು ರಾಜ್ಯದಲ್ಲಿ ಚಳುವಳಿ ಮಾಡ್ತಿದ್ದಾರೆ. ಆದ್ರೆ ನಮ್ಮ ಸರ್ಕಾರ ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತು ಎಸ್.ಐ.ಟಿ (SIT) ರಚನೆ ಮಾಡಿದ ವೇಳೆ ಹೆಗ್ಗಡೆಯವರೇ ಈ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಆದರೆ ಇವರು ಹಿಡ್ಕೊಂಡು ಅಳ್ಳಾಡಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Cm Siddaramaiah) ವಾಗ್ದಾಳಿ ನಡೆಸಿದ್ದಾರೆ.

ನಾವು ಎಸ್ಐಟಿ ರಚನೆ ಮಾಡಿದಾಗ ಇವರು ಯಾರೊಬ್ಬರೂ ಆ ಬಗ್ಗೆ ಮಾತನಾಡಲಿಲ್ಲ.ಬಿಜೆಪಿಯವರು ತನಿಖೆ ಆರಂಭವಾಗಿ ಹನ್ನೆರಡು ದಿನಗಳಾದ ಮೇಲೆ ಈಗ ಮಾತಾಡ್ತಿದಾರೆ. ಅಲ್ಲಿಯವರೆಗೂ ಏಕೆ ಯಾರೂ ಮಾತನ್ನಾಡಲೇ ಇಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಎಸ್.ಐ.ಟಿ ಟೀಮ್ ಒಟ್ಟು ಹದಿಮೂರು ಕಡೆ ಜಾಗ ಅಗೆದಿದ್ದರು, ಈ ಪೈಕಿ ಎರಡು ಕಡೆ ಮಾತ್ರ ಮೂಳೆ ಸಿಗುತ್ತೆ. ಇನ್ನು ಉಳಿದಂತೆ ಎಲ್ಲೂ ಏನೂ ಸಿಗದ ವಿಚಾರ ಗೊತ್ತಾಗ್ತಿದಂತೆ ಬಿಜೆಪಿ ನಾಯಕರು ಧಿಡೀರ್ ಅಂತ ಎದ್ದಬಿಟ್ಟರು. ಮೂಳೆ ಸಿಗ್ತಿಲ್ಲಾ ಅಂತಾ ಗೊತ್ತಿಗ್ತಿದಂತೆ ಎದ್ದುಬಿಟ್ಟರು, ಈಗ ಹೋರಾಟ ಮಾಡುತ್ತಿದ್ದಾರೆ ಎಂದು ತಿವಿದಿದ್ದಾರೆ.
ಹೀಗಾಗಿ ಬಿಜೆಪಿ ಧರ್ಮಸ್ಥಳದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ನಾವು ನ್ಯಾಯ ಸಮ್ಮತವಾದ ತನಿಖೆ ನಡೆಸಿದ್ದೇವೆ, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.