ವೀರಪ್ಪನ್ ಎಂದರೆ ಕ್ಷಣಕಾಲ ಎದೆ ಝಲ್ ಎನ್ನುವ ಕಾಲವೊಂದಿತ್ತು. ಅದೇ ರೀತಿ 1993 ರಲ್ಲಿ ನಡೆದಿದ್ದ ಪಾಲಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಕಾಲವಾಗಿದ್ದಾರೆ. 39 ವರ್ಷದವನಾಗಿದ್ದ ಜ್ಞಾನಪ್ರಕಾಶ್ ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಂತೆ ಇರುವ ಪಾಲಾರ್ ಎನ್ನುವ ಗ್ರಾಮದಲ್ಲಿ ಬಾಂಬ್ ಇಟ್ಟು 22 ಜನರ ಜೀವನವನ್ನು ಬಲಿ ತೆಗೆದುಕೊಂಡಿದ್ದ. ಇದಕ್ಕಾಗಿ ಕೋರ್ಟ್ ಗಲ್ಲು ಶಿಕ್ಷೆಯನ್ನೂ ವಿಧಿಸಿತ್ತು. ಇದೀಗ ಕಾಲವೇ ಜ್ಞಾನಪ್ರಕಾಶ್ ಅವರನ್ನು ಗಲ್ಲಿಗೆ ಏರಿಸಿದೆ.
1993ರ ಏಪ್ರಿಲ್ 9ರಂದು ತಮಿಳುನಾಡು ಎಸ್‌ಟಿಎಫ್ ಮುಖ್ಯಸ್ಥ ಗೋಪಾಲಕೃಷ್ಣ ಮತ್ತು ಅವರ ತಂಡ ಕಾರ್ಯಾಚರಣೆಗೆ ಆಗಮಿಸುತ್ತಿದ್ದಾರೆ, ಭೂಮಿಯೊಳಗೆ ಬಾಂಬ್ ಅಡಗಿಸಿಟ್ಟು ಭೀಕರ ಹತ್ಯೆ ಮಾಡಲಾಗಿತ್ತು. ಸೈಮನ್ ಎಂಬಾತ ಸಿಡಿಸಿದ ಬಾಂಭ್ ದಾಳಿಯಲ್ಲಿ ಬರೋಬ್ಬರಿ 22 ಜನರು ಪ್ರಾಣ ಕಳೆದುಕೊಂಡಿದ್ದರು. ಜ್ಞಾನಪ್ರಕಾಶ್‌ಗೆ 1997 ರಲ್ಲಿ ಟಾಡಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. 2014ರಲ್ಲಿ ಗಲ್ಲು ಶಿಕ್ಷೆ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬರೋಬ್ಬರಿ 29 ವರ್ಷಗಳ ಕಾಲ ಬೆಳಗಾವಿ ಹಾಗೂ ಮೈಸೂರು ಜೈಲಿನಲ್ಲಿದ್ದ ಜ್ಞಾನಪ್ರಕಾಶ್, ಇತ್ತೀಚಿಗೆ ಜೈಲಿನಿಂದ ಬಿಡುಗಡೆ ಆಗಿದ್ದರು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದಲ್ಲೇ ಇರುವ ಸಂದನಪಾಳ್ಯದ ಜ್ಞಾನಪ್ರಕಾಶ್, ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಸುಪ್ರೀಂಕೋರ್ಟ್, ಜ್ಞಾನಪ್ರಕಾಶ್ ಅವರನ್ನು 2022 ರ ಡಿಸೆಂಬರ್ 20 ರಂದು ಮಾನವೀಯತೆ ಆಧಾರದಲ್ಲಿ ಬಿಡುಗಡೆಗೆ ಸೂಚನೆ ಕೊಟ್ಟಿತ್ತು. ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಆದ ವರ್ಷದ ಬಳಿಕ ಹುಟ್ಟೂರಿನಲ್ಲೇ ಜ್ಞಾನಪ್ರಕಾಶ್ ನಿಧನರಾಗಿದ್ದಾರೆ. ಪಾಲರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರು 124 ಜನರನ್ನು ಬಂಧಿಸಿ ಟಾಡಾ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಕೋರ್ಟ್ 117ರ ಜನರನ್ನು ಖುಲಾಸೆ ಮಾಡಿ ಉಳಿದವರಿಗೆ ಶಿಕ್ಷೆರ ವಿಧಿಸಿತ್ತು.







