ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ʻವೀರಂʼ ಸಿನಿಮಾ, ಇದೇ ಏಪ್ರಿಲ್ 7ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಈಗಾಗಲೇ ಸಾಂಗ್, ಟೀಸರ್, ಟ್ರೈಲರ್‌ಗಳ ಮೂಲಕ ʻವೀರಂʼ ಸಿನಿಮಾ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ನಿನ್ನೆಯಷ್ಟೇ ಚಿತ್ರತಂಡ, ಈ ಸಿನಿಮಾದ ಸ್ಪೆಷಲ್ ಹಾಡೊಂದನ್ನ ರಿಲೀಸ್ ಮಾಡಿದೆ. ಈ ಗೀತೆಗೆ ವಿ.ನಾಗೇಂದ್ರ ಪ್ರಸಾದ್‌ರವರ ಸಾಹಿತ್ಯವಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳನ್ ಹಾಗೂ ಸುಪ್ರಿಯಾರಾಮ್ ದನಿಯಾಗಿದ್ದಾರೆ.
ಕೆ.ಎಂ. ಶಶಿಧರ್ ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ʻವೀರಂʼ ಸಿನಿಮಾವನ್ನ ನಿರ್ಮಿಸಿದ್ದು, ಖದರ್‌ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಮಿಲಿ ಎಮೋಷನ್, ಲವ್, ಆಕ್ಷನ್, ಥ್ರಿಲ್ಲರ್ ಡ್ರಾಮಾದಂಥ ಎಲ್ಲಾ ರೀತಿಯ ಎಂಟರ್‌ಟೈನಿಂಗ್ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ.