• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ ಶತಾವಧಾನಿ-ಸಹಸ್ರಾವಧಾನಿಗಳು

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
January 12, 2023
in Top Story, ಅಂಕಣ
0
ಸಿದ್ದೇಶ್ವರ ಸ್ವಾಮಿಗಳ ವಿದ್ವತ್ತಿಗೆ ಸಮಬಾರದ ವೈದಿಕ ಶತಾವಧಾನಿ-ಸಹಸ್ರಾವಧಾನಿಗಳು
Share on WhatsAppShare on FacebookShare on Telegram

ADVERTISEMENT

ಕಳೆದ ವಾರ ವಿಜಯಪುರದ ಆರೂಢ ಸಂಪ್ರದಾಯಕ್ಕೆ ಸೇರಿರುವ ಜ್ಞಾನಯೋಗಾಶ್ರಮದ ಜನಪ್ರೀಯ ಪ್ರವಚನಕಾರರಾಗಿದ್ದ ಸಿದ್ದೇಶ್ವರ ಸ್ವಾಮಿಗಳು ಈ ಲೋಕ ತ್ಯಜಿಸಿದರು. ದೀರ್ಘಕಾಲದ ಅನಾರೋಗ್ಯದಿಂದ ಸ್ವಾಮಿಗಳು ತಮ್ಮ ೮೨ ನೇ ಯವಸ್ಸಿನಲ್ಲಿ ತೀರಿಹೋದರು. ಸ್ವಾಮಿಗಳು ಯಾವುದೇ ಒಂದು ನಿರ್ಧಿಷ್ಟ ಪೀಠದ ಅಧ್ಯಕ್ಷರಾಗಿಲಿಲ್ಲ ˌ ತಮ್ಮ ವೈಯಕ್ತಿಕ ಬದುಕಿನದಲ್ಲಿ ಅಪ್ರತಿಮ ಸರಳತೆಯನ್ನು ಅಳವಡಿಸಿಕೊಂಡ ಮಹಾನ್ ಪ್ರವಚಕಾರರಾಗಿದ್ದರು.

ಅವರು ತಮ್ಮ ಯವ್ವನದ ದಿನಗಳಲ್ಲಿ ವೇದಾಂತ ಕೇಸರಿ ಬಿರುದಾಂಕಿತ ಮಲ್ಲಿಕಾರ್ಜುನಸ್ವಾಮಿಗಳ ವೇದಾಂತ ಹಾಗು ಗೀತೆಯ ಮೇಲಿನ ಪ್ರವಚಕ್ಕೆ ಮಾರುಹೋಗಿ ತಮ್ಮ ತತ್ವಶಾಸ್ತ್ರದಲ್ಲಿನ ಉನ್ನತ ಶಿಕ್ಷಣ ಮುಗಿಸಿಕೊಂಡು ನೇರವಾಗಿ ಮಲ್ಲಿಕಾರ್ಜುನಸ್ವಾಮಿಗಳ ಶಿಷ್ಯತ್ವ ಸ್ವೀಕರಿಸಿ ಮಾಯಾತತ್ವದ ಪ್ರವಚನಕಾರರಾಗಿ ಬಹಳ ದೊಡ್ಡ ಹೆಸರು ಮಾಡಿದರು. ರಾಜಕೀಯದಿಂದ ದೂರವಿದ್ದರೆನ್ನಲಾಗುವ ಸ್ವಾಮಿಗಳಿಗೆ ಪ್ರಚಂಡ ರಾಜಕಾರಣಿ ಪ್ರಧಾನಿ ಮೋದಿಯವರ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಅದನ್ನು ಅವರು ಇತ್ತೀಚಿಗೆ ಮೈಸೂರಿನ ಒಂದು ಸಭೆಯಲ್ಲಿ ಸಾಂದರ್ಭಿಕವಾಗಿ ವ್ಯಕ್ತಪಡಿಸಿದ್ದರು ಕೂಡ.

ಈ ನೆಲ ೩೬೦೦ ವರ್ಷಗಳಿಂದ ಈಚೆಗೆ ಆರ್ಯಪ್ರಣೀತ ವೈದಿಕ ಋಷಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದೆ. ಸಿದ್ದೇಶ್ವರಸ್ವಾಮಿಗಳು ಋಷಿ ಸಂಸ್ಕೃತಿಯ ಅಧುನಿಕ ಯುಗದ ದಂತಕತೆಯಾಗಿˌ ನಡೆದಾಡುವ ದೇವರೆಂದೇ ನಾಡಿನ ಗಮನ ಸೆಳೆದಿದ್ದರು. ಜಗತ್ತಿನ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸದೆ ತನ್ನ ಪಾಡಿಗೆ ತಾನು ಈ ಪ್ರಾಪಂಚಿಕ ಐಭೋಗಗಳನ್ನು ತೊರೆದು ನಿರ್ಲಿಪ್ತತೆಯಿಂದ ಮೋಕ್ಷಕ್ಕಾಗಿ ಸಾಧನೆಯಲ್ಲಿ ತೊಡಗಿಕೊಳ್ಳುವುದೇ ಪ್ರಾಚೀನ ಋಷಿ ಸಂಸ್ಕೃತಿ. ಸಿದ್ದೇಶ್ವರಸ್ವಾಮಿಗಳು ಎಂದಿಗೂ ಹೆಸರುˌ ಹುದ್ದೆ ˌ ಖ್ಯಾತಿ ˌ ಹಣˌ ಪ್ರಶಸ್ತಿಗಳನ್ನು ಅಪೇಕ್ಷಿಸಲಿಲ್ಲ. ಅಷ್ಟೇ ಅಲ್ಲದೆ ಅವನ್ನೆಲ್ಲ ಅವರು ನಿರಾಕರಿಸಿದ್ದರು ಕೂಡ. ಅವರದೊಂದು ಬಗೆಯ ದೀರ್ಘ ಹಾಗು ಪರಿಶುದ್ಧ ನಿರ್ಲಿಪ್ತ ಭಾವ. ಆದರೆ ಅವರ ತತ್ವಶಾಸ್ತ್ರ ˌ ವೇದಾಂತ ಮತ್ತು ಗೀತೆಯ ಬಗೆಗಿನ ಆಳವಾದ ಜ್ಞಾನˌ ವಿದ್ವತ್ತು ಮತ್ತು ಅದನ್ನು ತಮ್ಮದೆ ಶೈಲಿಯಲ್ಲಿ ಅದಕ್ಕೆ ಪೂರಕವಾದ ಕತೆˌ ಉಪಕತೆಗಳ ಮೂಲಕ ಭಕ್ತರಿಗೆ ಹೇಳುವ ವಿನೂತನ ಶೈಲಿ ಅನನ್ಯವಾಗಿತ್ತು. ಈ ವಿಷಯದಲ್ಲಿ ಅವರನ್ನು ಸರಿಗಟ್ಟುವ ಇನ್ನೊಬ್ಬ ವೈದಿಕ ಪ್ರವಚನಕಾರ ಈ ಮಣ್ಣಿನಲ್ಲಿ ಹಿಂದೆ ಇರಲಿಲ್ಲ ˌ ಇಂದು ಇಲ್ಲ ˌ ಮುಂದೆಯೂ ಹುಟ್ಟಲಾರ.

ಸ್ವಾಮಿಗಳು ವೈದಿಕ ಸಂಪ್ರದಾಯಕ್ಕೆ ತೊಡೆತಟ್ಟಿ ಹುಟ್ಟಿಕೊಂಡ ಲಿಂಗಾಯತವೆಂಬ ಜೀವಪರ ಧರ್ಮದಲ್ಲಿ ಹುಟ್ಟಿದ್ದರೂ ಕೂಡ ಆಶ್ಚರ್ಯವೆನ್ನುವಂತೆ ವೈದಿಕ ಧರ್ಮದ ಪವಿತ್ರ ಗ್ರಂಥಗಳಾದ ಭಗವದ್ಗೀತೆ ಮತ್ತು ಆಗಮಿಕ ಆರಾಧ್ಯರ ಧರ್ಮಗ್ರಂಥವೆನ್ನಲಾಗುವ ಸಿದ್ಧಾಂತಶಿಖಾಮಣಿಗಳ ಮೇಲೆ ಆಳವಾದ ಪ್ರಭುತ್ವ ಹೊಂದಿದ್ದರು. ಅಂದಿನ ವೈದಿಕ ವ್ಯವಸ್ಥೆಯನ್ನು ಪ್ರಶ್ನಿಸಿ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿದ್ದ ಲಿಂಗಾಯತ ಚಳುವಳಿಯ ಶರಣ ಸಿದ್ಧಾಂತ ಅವರನ್ನು ಯಾಕೊ ಸೆಳೆಯಲಿಲ್ಲ. ವ್ಯವಸ್ಥೆಯ ಆಗುಹೋಗುಗಳ ಕುರಿತು ಅವರು ನಿರ್ಲಿಪ್ತತೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದರು. ಆಗಾಗ ಸಾಂದರ್ಭಿಕವಾಗಿ ಶರಣರ ವಚನಗಳನ್ನು ತಮ್ಮ ಪ್ರವಚನದಲ್ಲಿ ಬಳಸುತ್ತಿದ್ದರೆ ಹೊರತು ಸಂಪೂರ್ಣವಾಗಿ ಚಲನಶೀಲ ಶರಣ ಸಂಸ್ಕೃತಿಯನ್ನು ಅಪ್ಪಿಕೊಂಡಿರಲಿಲ್ಲ. ಈ ಜಗತ್ತು ಕಂಡ ಸರ್ವಶ್ರೇಷ್ಟ ದಾರ್ಶನಿಕˌ ಲಿಂಗಾಯತ ಧರ್ಮದ ಮಹಾನ್ ಚಿಂತಕˌ ಹಾಗು ಲಿಂಗತತ್ವ/ಬಯಲು/ಶೂನ್ಯ ಸಿದ್ಧಾಂತದ ಜಗದ್ಗುರು ಅಲ್ಲಮರ ಬೆಡಗಿನ ವಚನಗಳನ್ನು ನಿರ್ವಚಿಸಿ ಒಂದು ಮೌಲಿಕ ಗ್ರಂಥವನ್ನು ಕೂಡ ರಚಿಸಿದ್ದರು. 

ಅವರು ತಮ್ಮ ಗುರುಗಳು ಮಾಡಿದ ಪ್ರವಚನದ ವಿಷಯಗಳನ್ನು ಆಯ್ದುಕೊಂಡು ಸಿದ್ಧಾಂತಶಿಖಾಮಣಿಯ ಮೇಲೆ ವ್ಯಾಖ್ಯಾನವನ್ನು ಬರೆದಿದ್ದರು. ಸ್ವಾಮಿಗಳು ಪ್ರವಚನದಲ್ಲಿ ಎಷ್ಟೊಂದು ಪಳಗಿದ್ದರೊ ಅಷ್ಟೆ ಬರವಣಿಗೆಯಲ್ಲೂ ನುರಿತ ಸಾಹಿತಿಗಳಿಗಿಂತ ಹೆಚ್ಚಿನ ಪಾಂಡಿತ್ಯ ಹೊಂದಿದ್ದರು. ಅವರು ಯಾವುದೇ ಧರ್ಮˌ ಸಿದ್ಧಾಂತಗಳೊಂದಿಗೆ ಗುರುತಿಸಿಕೊಂಡಿರಲಿಲ್ಲ ಎಂದು ಅವರ ಶಿಷ್ಯರು ಎಷ್ಟೆ ವಾದಿಸಿದರೂ ಕೂಡ ಅವರ ಒಲವು ಮತ್ತು ಒಡನಾಟ ವೈದಿಕ ಸಾಹಿತ್ಯ ಮತ್ತು ತತ್ವಶಾಸ್ತ್ರದೊಂದಿಗೆ ಅವಿನಾಭಾವದಿಂದ ಬೆಸೆದುಕೊಂಡಿದ್ದನ್ನು ಅಲ್ಲಗಳೆಯಲಾಗದು. ವೈದಿಕ ಸಾಹಿತ್ಯವನ್ನು ಪ್ರಚಾರ ಮಾಡುವಲ್ಲಿ ಸ್ವತಃ ವೈದಿಕ ವಿದ್ವಾಂಸರಿಗಿಂತ ಸ್ವಾಮಿಗಳ ವಿದ್ವತ್ತು ಮತ್ತು ಕೊಡುಗೆ ಅಪಾರವಾದದ್ದು. ಕರ್ನಾಟಕದಲ್ಲಿ ವೇದಾಂತ ಹಾಗು ಗೀತೆಯ ಮೇಲೆ ಅವೈದಿಕ ಮೂಲದವರಾಗಿದ್ದ ಸಿದ್ದೇಶ್ವರಸ್ವಾಮಿಗಳು ಹೊಂದಿದ್ದ ಪ್ರಭುತ್ವ ಬೇರಾವುದೇ ವೈದಿಕ ಮೂಲದ ವಿದ್ವಾಂಸರು ಹೊಂದಿರಲಿಲ್ಲ ಎನ್ನುವದು ವೈದಿಕ ತತ್ಪ ಆರಾಧಕರಿಗೆ ಅಷ್ಟೇ ಹೆಮ್ಮೆಯ ಸಂಗತಿಯಾಗಬೇಕು.

ಭಾರತದ ನೆಲದಲ್ಲಿ ಹೊರಗಿನಿಂದ ವಲಸೆ ಬಂದ ವೈದಿಕ ಸಂಸ್ಕೃತಿಗೆ ಸಂಬಂಧಿಸಿದ ಸಾಹಿತ್ಯ ಮತ್ತು ಸಂಸ್ಕೃತಿಗೆ ವೈದಿಕ ಮೂಲದ ಆಳರಸರುˌ ಪಂಡಿತರು ಹಾಗು ವಿದ್ವಾಂಸರಿಗಿಂತ ನೆಲಮೂಲದ ಅವೈದಿಕ ಆಳರಸರುˌ ಪಂಡಿತರು ಹಾಗು ವಿದ್ವಾಂಸರು ನೀಡಿದ ಕೊಡುಗೆಯ ಪಾಲೇ ಹೆಚ್ಚು. ಇದರಿಂದ ಸ್ಪಷ್ಟವಾಗುವುದೇನೆಂದರೆ ಅವೈದಿಕ ಮೂಲದ ಜನರಿಗಿರುವ ವಿದ್ವತ್ತು ˌ ಪ್ರತಿಭೆˌ ಪಾಂಡಿತ್ಯ ವೈದಿಕ ಮೂಲದ ಜನರಿಗೆ ಯಾವತ್ತೂ ಇರಲಿಲ್ಲ ಎನ್ನುವುದು. ಇದಕ್ಕೆ ಉದಾಹರಣೆಗಳೆಂದರೆ ಮಹಾಭಾರತದ ಕಾಲ್ಪನಿಕ ಪಾತ್ರವಾದ ಕೃಷ್ಣ ˌ ಅದನ್ನ ಬರೆದ ವ್ಯಾಸ ˌ ಇನ್ನೊಂದು ಕಾಲ್ಪನಿಕ ಮಹಾಕಾವ್ಯ ರಾಮಾಯಣ ಬರೆದ ವಾಲ್ಮಿಕಿˌ ಮಹಾಕವಿ ಕಾಳಿದಾಸˌ ಕನಕದಾಸರಿಂದ ಹಿಡಿದು ಇಂದಿನ ಸಿದ್ದೇಶ್ವರಸ್ವಾಮಿಯವರು. ಇವರೆಲ್ಲರೂ ಯಾವ ವೈದಿಕ ವಿದ್ವಾಂಸರು ಕೊಡದ ಅವಿಸ್ಮರಣೀಯ ಕೊಡುಗೆಯನ್ನು ವೈದಿಕ ಸಾಹಿತ್ಯಕ್ಕೆ ಹಾಗು ಸಂಸ್ಕೃತಿಗೆ ಕೊಟ್ಟಿದ್ದಾರೆ.

ಸಿದ್ದೇಶ್ವರಸ್ವಾಮಿಗಳ ವೈಯಕ್ತಿಕ ಬದುಕು ಸ್ವಚ್ಛ ˌ ಪಾರದರ್ಶಕ ಹಾಗು ಪರಿಶುದ್ಧವಾಗಿತ್ತು. ಯಾವ ವೈದಿಕ ಮಠಾಧೀಶರಿಗೂ ಸ್ವಾಮಿಗಳಿದ್ದಂತಹ ಪರಿಶುದ್ಧತೆ ಇರಲಿಲ್ಲ ಎಂದೇ ಹೇಳಬೇಕು. ಅವರು ಎಂದಿಗೂ ಯಾವುದನ್ನೂ ಅಪೇಕ್ಷೆ ಪಡುತ್ತಿರಲಿಲ್ಲ. ಆದರೆ ಅವರ ಶಿಷ್ಯರೆಂದು ಹೇಳಿಕೊಳ್ಳುವ ಅನೇಕರು ಆರೂಢ ಸಂಪ್ರದಾಯಕ್ಕೆ ಸೇರಿದವರಾಗಿದ್ದರೂ ಕೂಡ ಒಂದೇ ಒಂದು ದಿನ ತಪ್ಪಿಯೂ ಆ ತತ್ವವನ್ನು ಪ್ರಚಾರ ಮಾಡಲಿಲ್ಲ. ಸ್ವಾಮಿಗಳ ಶಿಷ್ಯರೆಂದು ಹೇಳಿಕೊಳ್ಳುವ ಬಹುತೇಕರು ರಾಜಕೀಯ ಪ್ರೇರಿತ ಉಗ್ರ ಹಿಂದುತ್ವದ ಪ್ರಚಾರಕರಾಗಿರುವದು ದುರಂತದ ಸಂಗತಿ. ಅವರು ಕರ್ನಾಟಕದ ಅನೇಕ ಭಾಗಗಳಲ್ಲಿ ಹಿಂದುತ್ವ ಸಂಘಟನೆಗಳ ಅಜೆಂಡಾದನ್ವಯ ಯುವಜನರನ್ನು ದಾರಿ ತಪ್ಪಿಸುವ ತ್ರೀಶೂಲ ದೀಕ್ಷೆ ಮುಂತಾದ ಕೋಮುವಾದಿ ಚಟುವಟಿಕೆಗಳಲ್ಲಿ ತೊಡಗಿದ್ದನ್ನು ನಾವು ನೋಡಬಹುದು. ಇದು ಸ್ವಾಮಿಯವರ ಹೆಸರಿಗೆ ಕಳಂಕ ತರುವ ಕಾರ್ಯ ಎಂದು ಬೇರೆ ಹೇಳಬೇಕಿಲ್ಲ. ಸ್ವಾಮಿಗಳ ಶಿಷ್ಯಂದಿರ ನಾಡಿನ ಸೌಹಾರ್ದತೆ ಹಾಳುಮಾಡುವ ಭಾಷಣಗಳನ್ನು ಹಿಂದುತ್ವವಾದಿ ಸಾಮಾಜಿಕ ಜಾಲತಾಣಗಳ ಅನೇಕ ಪೇಜುಗಳಲ್ಲಿ ನಿರಂತರ ಪ್ರಸಾರ ಮಾಡಲಾಗುತ್ತದೆ. ಅವರಲ್ಲಿ ಬಹುತೇಕ ಶಿಷ್ಯಂದಿರ ಹೆಸರುಗಳು ‘ಆನಂದ’ ಶಬ್ಧದಿಂದ ಕೊನೆಗೊಳ್ಳುವುದು ವಿಶೇಷ.

ಸ್ವಾಮಿಗಳ ಬದುಕಿನಷ್ಟೆ ಅವರ ಸಾವು ಕೂಡ ಪರಿಶುದ್ಧ ಹಾಗು ಅರ್ಥಪೂರ್ಣ. ಅವರು ತಮ್ಮ ಬದುಕಿನ ಆಚೆಗೆ ತಮ್ಮದಾವುದೇ ಕುರುಹುಗಳು ಉಳಿಯಬಾರದು ಎನ್ನುವ ಉದಾತ್ ಉದ್ದೇಶದಿಂದ ತಮ್ಮ ಮೃತ ಶರೀರವನ್ನು ಚಿತೆಗೆ ಒಡ್ಡಿ ˌ ಬೂದಿಯನ್ನು ನದಿಗಳಲ್ಲಿ ವಿಸರ್ಜಿಸುವಂತೆ ಮರಣಪತ್ರ ಬರೆದಿದ್ದರು. ತಮ್ಮ ಸಂಸ್ಕಾರವನ್ನು ಯಾವುದೇ ಧರ್ಮದ ವಿಧಿ ವಿಧಾನಗಳಿಲ್ಲದಂತೆ ನೆರವೇರಿಸಲು ಅವರು ಬಯಸಿದ್ದರು. ಆದರೆ ಅವರ ಶಿಷ್ಯರು ಗುರುವಿನ ಆಶಯದ ಹಿಂದಿನ ಮರ್ಮವನ್ನು ಅರಿಯುವಲ್ಲಿ ಸೋತರೆ ಎನ್ನುವ ಸಂಶಯ ಮೂಡುತ್ತದೆ. ಅವೈದಿಕರಾಗಿದ್ದ ಸ್ವಾಮಿಗಳ ಮೃತ ಶರೀರಕ್ಕೆ ವೈದಿಕ ವಿದಿವಿಧಾನಗಳಂತೆ ಸಂಸ್ಕಾರ ಮಾಡಲಾಯಿತು. ಅವರ ಚಿತಾಭಸ್ಮವನ್ನು ಅದೇ ವೈದಿಕ ಸಾಂಪ್ರದಾಯದಂತೆ ಪವಿತ್ರವೆಂದು ನಂಬಿಸಲಾಗಿರುವ ನದಿˌ ಸಮುದ್ರಗಳಲ್ಲಿ ವಿಸರ್ಜಿಸಲಾಯಿತು. 

ಸ್ವಾಮಿಗಳ ಅಂತ್ಯ ಸಂಸ್ಕಾರ ಮುಗಿದು ಮಾರನೆ ದಿನವೆ ಆಶ್ರಮದ ಆವರಣದಲ್ಲಿ ಅವರನ್ನು ದಹಿಸಿದ ಸ್ಥಳದಲ್ಲಿ ವಿಭೂತಿಗಳನ್ನಿಟ್ಟು ಹತ್ತು ರೂಪಾಯಿ ದರದಲ್ಲಿ ಮಾರಾಟ ಮಾಡುವ ಕಾರ್ಯ ಆಶ್ರಮದಲ್ಲಿ ಆರಂಭಗೊಂಡಿತ್ತು. ಅವರ ಚಿತಾಭಸ್ಮ ವಿಸರ್ಜನೆಯ ದಿನದಿಂದಲೆ ಆಶ್ರಮದ ಆವರಣದಲ್ಲಿ ಸ್ವಾಮಿಗಳ ಫೋಟೊ ಮತ್ತು ಅದರೆದುರಿಗೆ ಒಂದು ದೊಡ್ಡ ಕಾಣಿಕೆ ಪೆಟ್ಟಿಗೆ ಪ್ರತ್ಯಕ್ಷವಾಗಿತ್ತು. ಸ್ವಾಮಿಗಳ ಭಕ್ತರು ತಕರಾರು ಮಾಡಿದ ಕಾರಣ ಅದನ್ನು ಈಗ ಅಲ್ಲಿಂದ ತೆಗೆಯಲಾಗಿದೆಯಂತೆ. ಸ್ವಾಮಿಗಳು ತಮ್ಮನ್ನು ದಹಿಸಿದ ಸ್ಥಳದಲ್ಲಿ ತಮ್ಮ ಯಾವುದೇ ಸ್ಮಾರಕ ನಿರ್ಮಿಸಬಾರದು ಎಂದು ತಮ್ಮ ಮರಣ ಪತ್ರದಲ್ಲಿ ಬರೆದಿದ್ದಾರೆ. ಅದರಂತೆ ಅವರ ಶಿಷ್ಯಂದಿರು ಅಲ್ಲಿ ಯಾವುದೇ ಸ್ಮಾರಕ ನಿರ್ಮಿಸದೆ ತಮ್ಮ ಗುರುವಿನ ಕೊನೆಯ ಆಶೆಯನ್ನು ಪೂರೈಸಬೇಕೆಂದು ಸ್ವಾಮಿಗಳ ನೈಜ ಭಕ್ತರು ಅಪೇಕ್ಷಿಸುತ್ತಿದ್ದಾರೆ.

ಸ್ವಾಮಿಗಳು ಯಾವುದೇ ರಾಜಕೀಯ ಪಕ್ಷದ ಬಗ್ಗೆ ಒಲವನ್ನು ಹೊಂದಿರಲಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಅದರಂತೆ ಯಾವುದೇ ನಿರ್ಧಿಷ್ಟ ರಾಜಕೀಯ ಪಕ್ಷವಾಗಲಿ ಅಥವಾ ರಾಜಕಾರಣಿಗಳಾಗಲಿ ಸ್ವಾಮಿಗಳ ಜನಪ್ರೀಯತೆಯನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದನ್ನು ಸ್ವಾಮಿಗಳ ನೈಜ ಶಿಷ್ಯರು ತಡೆಯಬೇಕಾದ ತುರ್ತು ಅಗತ್ಯವಿದೆ. ಏಕೆಂದರೆ ಅವರು ಅಸ್ತಂಗತರಾದ ದಿನ ಅಲ್ಲಿ ರಾಜಕಾರಣಿಗಳು ಪ್ರಚಾರ ಪಡೆಯಲು ಹವಣಿಸುತ್ತಿದ್ದದ್ದನ್ನು ನಾವೆಲ್ಲ ನೋಡಿದ್ದೇವೆ. ಅದರಂತೆˌ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಳ್ಳುವವರು ಒಂದು ನಿರ್ಧಿಷ್ಟ ಧರ್ಮದ ಸಿದ್ಧಾಂತಕ್ಕೆ ಜೋತು ಬಿದ್ದು ಸ್ವಾಮಿಗಳ ಹೆಸರಿಗೆ ಕಳಂಕ ತರಬಾರದು ಎನ್ನುವ ಮಾತು ಕೂಡ ಅಷ್ಟೇ ಅಗತ್ಯವಾಗಿ ಹೇಳಬೇಕಿದೆ. ಆಶ್ರಮದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಮುಖವಾಡ ಧರಿಸಿರುವˌ ಹಾಗು ಒಂದು ನಿರ್ಧಿಷ್ಟ ಧರ್ಮವನ್ನು ವೈಭವೀಕರಿಸುವ ಭಾಷಣಕಾರರುˌ ಅಂತಹ ಸಂಘ/ಸಂಸ್ಥೆಗಳ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವ ಮೂಲಕ ಸ್ವಾಮಿಗಳಿಗೆ ನೈಜ ಶ್ರಂದ್ದಾಂಜಲಿಯನ್ನು ಅವರ ಶಿಷ್ಯರು ಅರ್ಪಿಸಬೇಕಿದೆ. ಕೊನೆಯದಾಗಿ ನಾನು ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ ಸಿದ್ದೇಶ್ವರ ಸ್ವಾಮಿಗಳು ಹೊಂದಿದ್ದ ಭಾಷಾ ಪ್ರೌಢಿಮೆˌ ವೈದಿಕ ಅಥವಾ ಗೀತಾ ಸಾಹಿತ್ಯದ ಬಗೆಗಿದ್ದ ಅವರಿದ್ದ ಅನನ್ಯ ವಿದ್ವತ್ತು ˌ ಅಪರಿಮಿತ ಜ್ಞಾನˌ ಸುಂದರ ವಾಕ್ಪಟುತ್ವ ˌ ಮತ್ತು ವಿನೂತನ ಪ್ರವಚನ ಶೈಲಿ ಮತ್ತಾವುದೇ ಸ್ವಯಂಘೋಷಿತ ವೈದಿಕ ಶತಾವಧಾನಿˌ ಸಹಸ್ರಾವಧಾನಿಗಳಿಗೂ ಭೂತˌ ವರ್ತಮಾನ ಹಾಗು ಭವಿಷ್ಯತ್ತಿನಲ್ಲಿ ಸಾಧ್ಯವಿಲ್ಲ ಎನ್ನುವುದು ಅಷ್ಟೆ ಸತ್ಯ.

Tags: ಸಿದ್ದೇಶ್ವರ ಸ್ವಾಮಿ
Previous Post

ಆಫ್ರಿಕನ್ ಹಂದಿ ಜ್ವರ ಪತ್ತೆ, ಹಂದಿ ಸಾಗಾಟ, ಮಾಂಸಕ್ಕೆ ನಿಷೇಧ

Next Post

ಮೈಸೂರು ಹುಡುಗನನ್ನು ಮದುವೆಯಾದ ಬಾಲಿವುಡ್ ನಟಿ ರಾಖಿ ಸಾವಂತ್

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
0

https://youtube.com/live/zK_8kusfh_Q

Read moreDetails
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

July 12, 2025
Next Post
ಮೈಸೂರು ಹುಡುಗನನ್ನು ಮದುವೆಯಾದ ಬಾಲಿವುಡ್ ನಟಿ ರಾಖಿ ಸಾವಂತ್

ಮೈಸೂರು ಹುಡುಗನನ್ನು ಮದುವೆಯಾದ ಬಾಲಿವುಡ್ ನಟಿ ರಾಖಿ ಸಾವಂತ್

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada