ಮುಂಬೈ- ಬಾಲಿವುಡ್ ನಟಿ ರಾಖಿ ಸಾವಂತ್ ಸಾಂಸ್ಕೃತಿಕ ನಗರಿ ಮೈಸೂರು ಹುಡುಗನನ್ನು ಮದುವೆ ಆಗಿದ್ದಾರೆ. ರಿಜಿಸ್ಟರ್ ಆಫೀಸ್ ನಲ್ಲಿ ರಾಖಿ ಸಾವಂತ್ ಹಾಗೂ ಅದಿಲ್ ಖಾನ್ ದುರ್ರಾನಿಯನ್ನು ಮದುವೆಯಾಗಿದ್ದಾರೆ. ಮ್ಯಾರೇಜ್ ರಿಜಿಸ್ಟರ್ ಬುಕ್ ಗೆ ಇಬ್ಬರು ಸಹಿ ಮಾಡುತ್ತಿರುವುದು ಪೋಟೋ ಈಗ ಇದನ್ನು ಸಾಬೀತು ಮಾಡಿದೆ.
ಅದಿಲ್ ಮೈಸೂರಿನ ಹುಡುಗನಾಗಿದ್ದು, ಮುಂಬೈನಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದಾನೆ. ಅದಿಲ್ ತಂದೆ- ತಾಯಿ ಮತ್ತು ಸಂಬಂಧಿಕರು ಮೈಸೂರಿನಲ್ಲೆ ಇದ್ದು, ಈಗಾಗಲೇ ರಾಖಿ ಸಾವಂತ್ ಮೈಸೂರಿಗೆ ಬಂದು ಅವರನ್ನೆಲ್ಲಾ ಭೇಟಿಯಾಗಿ ಹೋಗಿದ್ದಾರೆ.

ರಾಖಿ ಸಾವಂತ್ ಗೆ ಇದು ಎರಡನೇ ಮದುವೆಯಾದರೆ, ಅದಿಲ್ ಗೆ ಮೊದಲ ಮದುವೆ. ರಾಖಿ ಸಾವಂತ್ ಮರಾಠಿ ಬಿಗ್ ಬಾಸ್ ನಲ್ಲಿದ್ದರು. ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಬಿಗ್ ಬಾಸ್ ಮನೆ ಬಿಟ್ಟು ಬಂದಿದ್ದರು. ತಾಯಿ ಬದುಕಿರುವಾಗಲೆ ಮದುವೆಯಾಗಿ ಅವರ ಆಶೀರ್ವಾದ ಪಡೆಯಲು ರಾಖಿ ಸಾವಂತ್ ಆತುರದಲ್ಲಿ ಮದುವೆ ಆಗಿದ್ದಾರೆ. ಮದುವೆ ನಂತರ ತಾಯಿ ಆಶೀರ್ವಾದ ಪಡೆದಿದ್ದಾರೆ.