ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ವೇದ ಚಿತ್ರೀಕರಣ ಮುಗಿಸಿ ಕುಮಭಳಕಾಯಿ ಹೊಡೆದಿದೆ.
ಮೈಸೂರು ಸುತ್ತಮುತ್ತ ನಡೆದ ಚಿತ್ರೀಕರಣದಲ್ಲಿ 1960ರ ದಶಕದ ಸುತ್ತ ಕಥೆ ಸಾಗಲಿದ್ದು ಬೃಹತ್ ಹತ್ಯಾಕಾಂಡದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ಇನ್ನು ಚಿತ್ರವು ಶಿವಣ್ಣ ಅಭಿನಯದ 125ನೇ ಚಿತ್ರವಾಗಿದ್ದು ಅಭಿಮಾನಿಗಳ ನಿರೀಕ್ಷೆಗಳು ಗರಿಗೆದರಿವೆ.
ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳಿದ್ದು ಗೀತಾ ಶಿವರಾಜ್‌ಕುಮಾರ್ ಮತ್ತು ZEE ಸ್ಟುಡಿಯೋಸ್ ಜಂಟಿಯಾಗಿ ಚಿತ್ರವನ್ನ ನಿರ್ಮಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು ಶಿವಣ್ಣನಿಗೆ ಜೋಡಿಯಾಗಿ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಬಹು ಮುಖ್ಯ ಪಾತ್ರದಲ್ಲಿ ಅದಿತಿ ಸಾಗರ್, ಕುರಿ ಪ್ರತಾಪ್, ಜಗ್ಗಪ್ಪ ಮುಂತಾದವರು ನಟಿಸಿದ್ದಾರೆ.







