Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌

ಪ್ರತಿಧ್ವನಿ

ಪ್ರತಿಧ್ವನಿ

November 27, 2022
Share on FacebookShare on Twitter

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಉಭಯ ರಾಜ್ಯದ ನಾಯಕರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಳಗಾವಿ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಉಭಯ ರಾಜ್ಯಗಳಲ್ಲಿ ಬಸ್ಸುಗಳ ಮಳೆ ಕಲ್ಲು ತೂರಾಟ ನಡೆಸುವುದು ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಇನು ಗಡಿ ವಿವಾದದ ಕುರಿತು ಮಹಾರಾಷ್ಟ್ರದ ಉದ್ದಂಟತನ ವಿರೋಧಿಸಿ ಮೈಸೂರಿನಲ್ಲಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ. ಬೆಳಗಾವಿ ನಮ್ಮದು, ಕರ್ನಾಟಕದ ಒಂದು ಅಡಿ ಜಾಗವನ್ನು ಬಿಡಲ್ಲ. ನಮ್ಮ ಬಸ್ಗಳಿಗೆ ಮಸಿ ಬಳಿದ್ರೆ, ಮಹಾರಾಷ್ಟ್ರದ ಮೇಲೆ ದೊಡ್ಡ ದಾಳಿ ಮಾಡಲಾಗುತ್ತದೆ. ಗಡಿಗಳನ್ನ ಬಂದ್ ಮಾಡಿ ಮಹಾರಾಷ್ಟ್ರದವರನ್ನ ಒಳಗೆ ಬರಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಿಗರ ಸ್ವಾಭಿಮಾನವನ್ನ ಕೆಣಕಲಾಗುತ್ತಿದೆ . ನಾಡು ನುಡಿ ನೆಲ ಜನ ಕಾಪಾಡೋದು ನಮ್ಮೆಲ್ರ ಹೊಣೆ . ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಪದೇ ಪದೇ MES ಖ್ಯಾತೆ ತೆಗೆಯುತ್ತಿರೋದು ಉತ್ತಮ ಬೆಳವಣಿಗೆಯಲ್ಲ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ರೀತಿಯ ವ್ಯಕ್ತಿಗಳು ರಾಜಕೀಯಕ್ಕೆ ಶೋಭೆಯಲ್ಲ. ಆತ ಸಿಎಂ ಆಗೋದಕ್ಕೆ ನಾಲಾಯಕ್ ಎಂದು ಹೇಳಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭಾವಚಿತ್ರ ಹರಿದು ಆಕ್ರೋಶ ಹೊರಹಾಕಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮರಾಠಿಗರನ್ನ ಎತ್ತಿಕಟ್ಟಿ ಅಶಾಂತಿ ಮೂಡಿಸೋ ಪ್ರಯತ್ನ ಮಾಡ್ತಿದ್ದಾರೆ . ಆತ ಸಮಾಜಘಾತುಕ ಅಖಂಡ ಕರ್ನಾಟಕವನ್ನ ಉಳಿಸಬೇಕಾಗಿದೆ. ಬೆಳಗಾವಿ ನಮ್ಮದು, ಕನ್ನಡದ ಒಂದು ಅಂಗುಲ ಜಾವನ್ನು ಸಹ ಬಿಟ್ಟುಕೊಡುವುದಿಲ್ಲ. ಮುಂಬೈ, ಸೊಲ್ಲಾಪುರ, ಅಂಕಲಕೋಟೆ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಕನ್ನಡ ಪ್ರದೇಶಗಳು ಕನ್ನಡಿಗರದ್ದು. ಕರ್ನಾಟಕದ ನೆಲಕ್ಕೆ ಸೇರಿದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಟ್ಟಿಯಾಗಬೇಕು. ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು. ಪಕ್ಷಾತೀತವಾಗಿ ನಾವೆಲ್ಲರೂ ನಾಡಿನ ಸಂರಕ್ಷಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಮೈಸೂರಿನಲ್ಲಿ ಗುಂಬಜ್ ಬಸ್ ನಿಲ್ದಾಣ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಇಬ್ಬರು ಅವಿವೇಕಿಗಳ ನಡುವಿನ ಜಗಳ. ಸಂಸದ ಪ್ರತಾಪ್ ಸಿಂಹಗೆ ತಲೇನೂ ಇಲ್ಲ ಬುದ್ಧೀನೂ ಇಲ್ಲ, ಆತ ಅತ್ಯಂತ ಸಣ್ಣ ವ್ಯಕ್ತಿ. ಕೆಲಸ ಮಾಡುವುದನ್ನು ಬಿಟ್ಟು ಒಂದಲ್ಲ ಒಂದು ರಗಳೆ ತೆಗೆಯುತ್ತಿದ್ದಾರೆ. ಇತ್ತೀಚಿಗೆ ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾಯಿಸದರು. ಬದಲಾಯಿಸಿದ ತಕ್ಷಣ ಮೈಸೂರು ಆಕಾಶಕ್ಕೆ ಹೊರಟು ಹೋಯ್ತಾ? ಎಂದು ಪೃಶ್ನಿಸಿದ್ದಾರೆ.

ಮೈಸೂರು ಹಾಗೂ ರೈಲ್ವೆ ನಿಲ್ದಾಣ ಹಾಗೆಯೇ ಉಳಿದಿದೆ. ಬಸ್ ನಿಲ್ದಾಣದ ಡೂಮ್ ತೆಗೆದಿದ್ದು ಸರಿಯಲ್ಲ. ತಲೆಗೊಂದು ಟೋಪಿ ಹಾಕಿ ಲಾಂಗ್ ಕೋಟ್ ಹಾಕೊಂಡ್ ಬಂದ್ರೆ ನಾನು ಮುಸಲ್ಮಾನ ಆಗ್ಬಿಡ್ತೀನಾ? ಇದು ಸಣ್ಣತನ, ಅವಿವೇಕತನ ಇದರಿಂದ ಮೈಸೂರಿಗೆ ಒಳ್ಳೆಯದಾಗುವುದಿಲ್ಲ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ರಾಮ್‌ದಾಸ್‌ ನಡುವಿನ ಸಮರಕ್ಕೆ ಚಾಟಿ ಬೀಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

| HOSAMANE PROPERTY EXPO | ಸಂಭ್ರಮ ಟಿವಿ ಪ್ರಸ್ತುತಪಡಿಸುವ ಹೊಸಮನೆ ಪ್ರಾಪರ್ಟಿ expo ಉದ್ಘಾಟಿಸಿದ ವಿ ಸೋಮಣ್ಣ
ರಾಜಕೀಯ

| HOSAMANE PROPERTY EXPO | ಸಂಭ್ರಮ ಟಿವಿ ಪ್ರಸ್ತುತಪಡಿಸುವ ಹೊಸಮನೆ ಪ್ರಾಪರ್ಟಿ expo ಉದ್ಘಾಟಿಸಿದ ವಿ ಸೋಮಣ್ಣ

by ಪ್ರತಿಧ್ವನಿ
January 28, 2023
PSI ನೇಮಕಾತಿ ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ..
ರಾಜಕೀಯ

PSI ನೇಮಕಾತಿ ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ..

by ಕೃಷ್ಣ ಮಣಿ
January 26, 2023
BJP ಯಲ್ಲಿ ಮತ್ತೆ ಶುರುವಾಯ್ತಾ ಮಾಜಿ ಸಿಎಂ ಯಡಿಯೂರಪ್ಪ ಹವಾ..?
Top Story

BJP ಯಲ್ಲಿ ಮತ್ತೆ ಶುರುವಾಯ್ತಾ ಮಾಜಿ ಸಿಎಂ ಯಡಿಯೂರಪ್ಪ ಹವಾ..?

by ಕೃಷ್ಣ ಮಣಿ
January 25, 2023
ಸಿದ್ದರಾಮಯ್ಯ ಕಂಡರೆ ಅಣ್ಣ ತಮ್ಮನಿಗೆ ಯಾಕೆ ಇಷ್ಟೊಂದು ಹೊಟ್ಟೆಹುರಿ..? 
ರಾಜಕೀಯ

ಸಿದ್ದರಾಮಯ್ಯ ಕಂಡರೆ ಅಣ್ಣ ತಮ್ಮನಿಗೆ ಯಾಕೆ ಇಷ್ಟೊಂದು ಹೊಟ್ಟೆಹುರಿ..? 

by ಕೃಷ್ಣ ಮಣಿ
January 27, 2023
ಮೈಕ್ ಕಿತ್ತುಕೊಂಡ ಸಿಎಂ ಮುಂದೆ SM Krishna ತುಂಬಾ ದೊಡ್ಡ ಸ್ಥಾನದಲ್ಲಿ ನಿಲ್ಲುತ್ತಾರೆ : H. Vishwanath
ರಾಜಕೀಯ

ಮೈಕ್ ಕಿತ್ತುಕೊಂಡ ಸಿಎಂ ಮುಂದೆ SM Krishna ತುಂಬಾ ದೊಡ್ಡ ಸ್ಥಾನದಲ್ಲಿ ನಿಲ್ಲುತ್ತಾರೆ : H. Vishwanath

by ಪ್ರತಿಧ್ವನಿ
January 28, 2023
Next Post
Puneethotsava : ಪುನೀತೋತ್ಸವದಲ್ಲಿ ಭರ್ಜರಿಯಾಗಿ ಮರೆಯಾಗುತ್ತಿರುವ ಮಲ್ಲಕಂಬ | Mallakhamba | Pratidhvani

Puneethotsava : ಪುನೀತೋತ್ಸವದಲ್ಲಿ ಭರ್ಜರಿಯಾಗಿ ಮರೆಯಾಗುತ್ತಿರುವ ಮಲ್ಲಕಂಬ | Mallakhamba | Pratidhvani

Vatal Nagaraj: ನಿಮ್‌ ತೀಟೆಗೆ ಪುಸ್ತಕ, ನಾಟಕ ಮಾಡ್ತೀರಾ? | Pratidhvani

Vatal Nagaraj: ನಿಮ್‌ ತೀಟೆಗೆ ಪುಸ್ತಕ, ನಾಟಕ ಮಾಡ್ತೀರಾ? | Pratidhvani

ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌

ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist