ರಾಜ್ಯಕ್ಕೆ ಇನ್ನೇನು ಮಾನ್ಸೂನ್ ಆಗಮಿಸಲಿದ್ದು, ಸಿಲಿಕಾನ್ ಸಿಟಿಯಲ್ಲಿ ಜೂನ್ ಮೊದಲ ದಿನವೇ ಭರ್ಜರಿ ಮಳೆಯಾಗಿದೆ.
ಮಳೆ ಹೊಡೆತಕ್ಕೆ ಸಿಲಿಕಾನ್ ಸಿಟಿ ನಲುಗಿ ಹೋಗಿದೆ. ನಗರದಲ್ಲಿ ಸುಮಾರು 40ರಷ್ಟು ಮರಗಳು ಉರುಳಿ ಬಿದ್ದಿರುವ ಕುರಿತು ವರದಿಯಾಗಿದೆ.
ಕಳೆದ ಒಂದು ವಾರದಿಂದ ರಜೆ ಪಡೆದಿದ್ದ ಮಳೆರಾಯ ಇಂದು ಭರ್ಜರಿಯಾಗಿಯೇ ಸುರಿದಿದ್ದಾನೆ. ವಾಹನ ಸವಾರರಂತೂ ಮಳೆ ನಡುವೆ ಸಿಲುಕಿ ಪರದಾಡಿ ಹೋಗಿದ್ದಾರೆ.
ಮಳೆಯ ಆರ್ಭಟಕ್ಕೆ ನಗರದ ವಿವಿಧೆಡೆ ಸುಮಾರು ಗರಿಷ್ಠ 40ರಷ್ಟು ಮರಗಳು ಉರುಳಿ ಬಿದ್ದಿವೆ ಎನ್ನಲಾಗಿದೆ. ಹಲವೆಡೆ ರಸ್ತೆಗಳೆಲ್ಲ ಕೆರೆಗಳಂತಾಗಿವೆ. ಇದರಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.
ಸಂಜೆಯಿಂದಲೇ ಬೆಂಗಳೂರಲ್ಲಿ ಮಳೆ ಅಬ್ಬರಿಸಿದೆ. ಗಾಳಿ ಸಹಿತ ಭಾರಿ ಮಳೆಗೆ ನಗರದೆಲ್ಲೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೋರು ಮಳೆ ಹಿನ್ನೆಲೆಯಲ್ಲಿ ಜನರು ಹಾಗೂ ವಾಹನ ಸವಾರರು ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದರು. ನಗರದಲ್ಲಿ ಇನ್ನೂ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.