ಉತ್ತರಾಖಂಡ್ (Uttarakhand) ಧರಾಲಿಯಲ್ಲಿ ಮೇಘ ಸ್ಪೋಟ (Cloud burst) ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಿಗ್ಗೆಯಿಂದಲೆ ರಕ್ಷಣಾ ಕಾರ್ಯ (Rescue operation) ಮುಂದುವರೆದಿದೆ. ಇನ್ನು ರಕ್ಷಣಾ ಕಾರ್ಯದಲ್ಲಿ ನಿನ್ನೆ ತಡರಾತ್ರಿ ಒಬ್ಬನ ಮೃತದೇಹ ಪತ್ತೆ ಪತ್ತೆಯಾಗಿದ್ದು, ಆ ಮೂಲಕ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಇಲ್ಲಿಯವರೆಗೆ 190 ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದ್ದು, ಇನ್ನೂ 50-60 ಜನ ಸಿಲುಕಿಕೊಂಡಿರೋ ಮಾಹಿತಿಯಿದೆ. ಆದ್ರೆ ಹವಾಮಾನ ಪ್ರತಿಕೂಲದ ಕಾರಣ ರಕ್ಷಣಾ ಕಾರ್ಯಕ್ಕೆ ಮಳೆ ಮತ್ತು ಕೆಸರು ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಮೇಘಸ್ಪೋಟದಿಂದ ಕೊಚ್ಚಿಬಂದಿದ್ದ ಮಣ್ಣು, ಬಂಡೆ, ಕೆಸರು ಹಿನ್ನಲೆ, ನಾಲ್ಕರಿಂದ ಐದು ಅಡಿ ಕೆಸರು ಸಿಲುಕಿ ಕಣ್ಮರೆಯಾದವರ ಹುಡುಕಾಟ ಕಷ್ಟವಾಗುತ್ತಿದೆ.

ಇದರ ಜೊತೆಗೆ ಇಂದು ಮತ್ತೆ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚುವರಿ 200 ಜನರನ್ನ ನಿಯೋಜನೆ ಮಾಡುವ ಸಾದ್ಯತೆಯಿದೆ. ಇದರ ಜೊತೆಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ನಿಫರ್ ನಾಯಿಗಳನ್ನು ಬಳಸಲು ಮುಂದಾಗಿದ್ದಾರೆ.ಈ ವರ್ಷದ ಫೆಬ್ರವರಿಯಲ್ಲಿ ಮಾನಾದಲ್ಲಿ ಸಂಭವಿಸಿದ ಹಿಮಪಾತದಲ್ಲಿ,ಆಗಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ಐಬೆಕ್ಸ್ ಬ್ರಿಗೇಡ್ ಸಹಾಯ ಮಾಡಿತ್ತು.

ಈ ರೀತಿಯ ಪರಿಸ್ಥಿತಿಯಲ್ಲಿ ಕಾಣೆಯಾದ ಜನರನ್ನು ಪತ್ತೆಹಚ್ಚಲು ರಾಡಾರ್ ಮತ್ತು ಸ್ನಿಫರ್ ನಾಯಿಗಳ ಸಹಾಯ ಪಡೆಯಲಾಗಿತ್ತು.ಅದೆ ರೀತಿ ಉತ್ತರಕಾಶಿಯಲ್ಲೂ ಕಣ್ಮರೆಯಾದವರ ಹುಡುಕಾಟಕ್ಕೆ ಯೋಜನೆ ರೂಪಿಸಲಾಗುತ್ತಿದೆ.