ಮಿರ್ಝಾಪುರ(ಉತ್ತರ ಪ್ರದೇಶ): ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ಉತ್ತರ ಪ್ರದೇಶದ ಮಿರ್ಝಾಪುರ ಜಿಲ್ಲಾಡಳಿತವು ಚರ್ಚ್ ಒಂದನ್ನು ನೆಲಸಮಗೊಳಿಸಿರುವ ಘಟನೆ ವರದಿಯಾಗಿದೆ.ವರದಿಗಳ ಪ್ರಕಾರ, ಈ ಚರ್ಚ್ ಅನ್ನು ವಿನೋದ್ ಕುಮಾರ್ ಹಾಗೂ ರಮಾಕಾಂತ್ ಎಂಬ ಇಬ್ಬರು ವ್ಯಕ್ತಿಗಳು ಅಹಿರುರ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ್ದರು ಎಂದು ಹೇಳಲಾಗಿದೆ.
In #UttarPradesh’s #Mirzapur, authorities have demolished an allegedly illegal church built on forest department land. This action is part of a larger crackdown on alleged religious conversion activities in marginalized tribal areas.
— Hate Detector 🔍 (@HateDetectors) August 12, 2024
According to the report, the demolition was… pic.twitter.com/8SQ4dZzw8F
ಈ ಇಬ್ಬರು ಆದಿವಾಸಿ ಜನರ ಮತಾಂತರ ನಡೆಸುತ್ತಿದ್ದರು ಎಂದೂ ವರದಿಯಾಗಿದೆ. ಈ ಚರ್ಚ್ ಅನ್ನು ಪೊಲೀಸರ ಸಮ್ಮುಖದಲ್ಲಿ ನೆಲಸಮಗೊಳಿಸಲಾಗಿದೆ.ಧಾರ್ಮಿಕ ಮತಾಂತರ ನಡೆಸಲಾಗುತ್ತಿದೆ ಎಂಬ ಹಲವಾರು ದೂರುಗಳ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಚರ್ಚ್ ಅನ್ನು ಅಕ್ರಮವಾಗಿ ನಿರ್ಮಿಸಿರುವುದು ಕಂಡು ಬಂದಿದೆ.
ಈ ಪ್ರಕರಣವು ಕೂಡಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿನೋದ್ ಕುಮಾರ್ ಹಾಗೂ ರಮಾಕಾಂತ್ ಇಬ್ಬರಿಗೂ ನ್ಯಾಯಾಲಯದೆದುರು ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ. ಆದರೆ, ಅವರಿಬ್ಬರೂ ನ್ಯಾಯಾಲಯದೆದುರು ಹಾಜರಾಗಿಲ್ಲ ಎಂದು ಹೇಳಲಾಗಿದೆ.ಹೀಗಾಗಿ, ಭಾರಿ ಪೊಲೀಸ್ ಭದ್ರತೆಯಲ್ಲಿ ಈ ಚರ್ಚ್ ಅನ್ನು ನೆಲಸಮಗೊಳಿಸಲಾಗಿದೆ.