ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧದ (Vidhan soudha) ಆವರಣದಲ್ಲಿ ಬೀದಿ ನಾಯಿಗಳ (Street dogs) ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ತೊಂದರೆಯನ್ನು ತಪ್ಪಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ಮಂಗಳೂರಿನಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ (UT Khadar) ಪ್ರತಿಕ್ರಿಯಿಸಿದ್ದಾರೆ.

ವಿಧಾನ ಸೌಧದ ಆವರಣದ ನಾಯಿಗಳಿಗೆ ಪ್ರತ್ಯೇಕ ಜಾಗ ಹುಡುಕಿದ್ದಾರೆ.ಈಗಾಗಲೇ ವಿಧಾನ ಸೌಧ ಆವರಣದಲ್ಲಿ ಇರುವ ನಾಯಿಗಳ ಪಟ್ಟಿ ಮಾಡಲಾಗಿದೆ. ವಿಧಾನ ಸೌಧದ ಆವರಣದಲ್ಲಿ ಒಟ್ಟು 52 ಬೀದಿ ನಾಯಿಗಳಿವೆ ಎಂದಿದ್ದಾರೆ.

ಈ ನಾಯಿಗಳ ಸಂತಾನ ಹರಣ ಚಿಕಿತ್ಸೆ ನೀಡಿ ಆ ನಂತರ ಆಶ್ರಯ ನೀಡಲಾಗುವುದು. ಅದರ ನಿರ್ವಹಣೆಯನ್ನ ಒಂದು NGO ಗೆ ನೀಡಲಾಗುವುದು. ಆಶ್ರಯ ತಾಣವನ್ನ ಕಟ್ಟುವ ಜವಾಬ್ದಾರಿ PWDಗೆ ನೀಡಲಾಗಿದೆ. ಅದರ ಖರ್ಚು ವೆಚ್ಚ ಎಲ್ಲವೂ ಸರ್ಕಾರ ಭರಿಸಲಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.