ಹಮಾಸ್‌ಗೆ ಇರಾನ್‌ನಿಂದ ಬೆಂಬಲವಿತ್ತು ಎಂಬುದು ಹೊಸ ವಿಚಾರವೇನಲ್ಲ. ಆದರೆ, ಈಗಿನ ಹಠಾತ್ ದಾಳಿಗೆ ಅಮೆರಿಕ – ಇರಾನ್ ನಡುವಿನ 6 ಬಿಲಿಯನ್ ಡಾಲರ್ ಹಣ ಕಾರಣವಾಯ್ತಾ ಎಂಬ ಚರ್ಚೆ ಶುರುವಾಗಿದೆ.
ಶನಿವಾರ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನಲ್ಲಿರೋ ಹಮಾಸ್ ಉಗ್ರರ ಗುಂಪು ಅನಿರೀಕ್ಷಿತ ದಾಳಿ ಮತ್ತು ಇಸ್ರೇಲ್‌ನ ಪ್ರತೀಕಾರವು 1,100 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ಇದರಿಂದ ಇರಾನ್ ಬೆಂಬಲಿತ ಇಸ್ಲಾಮಿಸ್ಟ್ ಗುಂಪಿನತ್ತ ಗಮನ ಹೆಚ್ಚಾಗಿದೆ. ಹಮಾಸ್‌ಗೆ ಇರಾನ್‌ನಿಂದ ಬೆಂಬಲವಿತ್ತು ಎಂಬುದು ಹೊಸ ವಿಚಾರವೇನಲ್ಲ. ಆದರೆ, ಈಗಿನ ಹಠಾತ್ ದಾಳಿಗೆ ಅಮೆರಿಕ – ಇರಾನ್ ನಡುವಿನ 6 ಬಿಲಿಯನ್ ಡಾಲರ್ ಹಣ ಕಾರಣವಾಯ್ತಾ ಎಂಬ ಚರ್ಚೆ ಶುರುವಾಗಿದೆ.
ಆದರೆ, ಏನಿದು 6 ಬಿಲಿಯನ್ ಡಾಲರ್ ಡೀಲ್? ಅಮೆರಿಕ – ಇರಾನ್ ನಡುವಣ ಒಪ್ಪಂದವೇನು? ಈ ಹಣದಿಂದ್ಲೇ ಇರಾನ್, ಹಮಾಸ್ ಉಗ್ರರಿಗೆ ದುಡ್ಡು ಕಳಿಸಿದ ಬಳಿಕ ಇಸ್ರೇಲ್ ಮೇಲೆ ದಾಳಿಯಾಗಿದ್ಯಾ? ಇದರ ಅಸಲಿಯತ್ತಿನ ಬಗ್ಗೆ ತಿಳಿದುಕೊಳ್ಳೋದು ಮುಖ್ಯವಾಗಿದೆ.