ಅಮೆರಿಕದ ಅಧ್ಯಕ್ಷ ಜೋ ಬಿಡೈನ್ ಮನೆಯ ಸಮೀಪದ ಬೀಚ್ ಬಳಸಿ ಸೈಕ್ಲಿಂಗ್ ಮಾಡುತ್ತಿದ್ದಾಗ ಸೈಕಲ್ ನಿಂದ ಕೆಳಗೆ ಬಿದ್ದಿದ್ದಾರೆ.
79 ವರ್ಷದ ಜೋ ಬಿಡೈನ್ ಶನಿವಾರ ದೆಲವಾರೆಯಲ್ಲಿ ಸೈಕ್ಲಿಂಗ್ ಮಾಡುವಾಗ ಕೆಳಗೆ ಬಿದ್ದಿದ್ದಾರೆ. ಆದರೆ ಕೂಡಲೇ ಮೇಲೆ ಎದ್ದ ಅವರು ನಾನು ಚೆನ್ನಾಗಿದ್ದೇನೆ. ಏನೂ ಆಗಿಲ್ಲ ಎಂದು ಹೇಳಿದರು.
ಪತ್ನಿ ಹಾಗೂ ಸ್ನೇಹಿತರೊಂದಿಗೆ ಸೈಕ್ಲಿಂಗ್ ಮಾಡಿ ಹಿಂತಿರುಗಿದ ನಂತರ ಸೈಕಲ್ ನಿಲ್ಲಿಸುತ್ತಿದ್ದಂತೆ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.