• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯಪ್ರಾಚ್ಯದಲ್ಲಿ ಕವಿದ ಯುದ್ಧದ ಕಾರ್ಮೋಡ : ಇರಾನ್‌ ಮೇಲೆ ದಾಳಿ ಮಾಡಿದ ಅಮೆರಿಕ :‌ ದೊಡ್ಡಣ್ಣನ ಮಿಲಿಟರಿ ನೆಲೆಗಳು ಉಡೀಸ್..

ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್‌ ನಡೆಸಿದ ದಾಳಿಗಳು ಕದನ ವಿರಾಮದ ಕಲ್ಪನೆಗೆ ವಿರುದ್ಧವಾಗಿವೆ : ಟ್ರಂಪ್‌ ಆಕ್ರೋಶ.̤!

ಪ್ರತಿಧ್ವನಿ by ಪ್ರತಿಧ್ವನಿ
July 9, 2026
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
US Vs Iran War

US Vs Iran War

Share on WhatsAppShare on FacebookShare on Telegram
ADVERTISEMENT

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಸ್ವಲ್ಪದಿನಗಳ ಕಾಳ ತಣ್ಣಗಾಗಿದ್ದ ಯುದ್ಧದ ಭೀತಿ ಇದೀಗ ಮತ್ತೆ ಶುರುವಾಗಿದ್ದು, ಅರಬ್‌ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಇಂದು ಬೆಳಗಿನ ಜಾವ ಅಮೆರಿಕವು ಇರಾನ್ ವಿರುದ್ಧ ವೈಮಾನಿಕ ದಾಳಿಯನ್ನು ನಡೆಸಿದೆ.  ಅಲ್ಲದೆ ಇದಕ್ಕೆ ಪ್ರತಿಕಾರವಾಗಿ ಇರಾನ್‌ ಕೂಡ, ಬಹ್ರೇನ್, ಕುವೈತ್ ಮತ್ತು ಕತಾರ್‌ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆಗರೆದಿದೆ. ಇದು ಪರ್ಷಿಯನ್ ಕೊಲ್ಲಿಯಲ್ಲಿ ಮತ್ತೊಂದು ರೀತಿಯ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.

Mamata Banerjee :  ಟಿಎಂಸಿ ನಾಯಕರನ್ನು ಕ್ಷಮಿಸಬಾರದು.! #pratidhvani

ಪ್ರಮುಖವಾಗಿ ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್‌ ನಡೆಸಿದ ದಾಳಿಗಳು ಕದನ ವಿರಾಮದ ಕಲ್ಪನೆಗೆ ವಿರುದ್ಧವಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಕೆಲವೇ ಗಂಟೆಗಳಲ್ಲಿ ಈ ರೀತಿಯ ಯುದ್ಧೋನ್ಮಾದ ಹೆಚ್ಚಾಗಿದೆ. ಒಮಾನ್ ಕರಾವಳಿಯಲ್ಲಿ ಇರಾನ್ ಹಲವಾರು ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡ ನಂತರ ಅಮೆರಿಕದ ಮಿಲಿಟರಿ ಪಡೆಯು ವಿವಿಧ ಮಿಲಿಟರಿ ತಾಣಗಳು ಮತ್ತು ಬಂದರುಗಳ ಮೇಲೆ ದಾಳಿದೆ. ಇದು ಇರಾನ್‌ ಮತ್ತಷ್ಟು ಆಕ್ರೋಶಿತವಾಗಲು ಕಾರಣವಾಗಿದೆ.

ಈ ಹಿಂದೆ ನಡೆದ ದಾಳಿಗಳಿಗಿಂತ ಇರಾನ್‌ ಇಂದು ನಡೆಸಿದ ದಾಳಿಗಳು ಅತ್ಯಂತ ಪ್ರಬಲವಾಗಿವೆ. ಅಮೆರಿಕ ನೌಕಾಪಡೆಯ 5 ನೇ ಫ್ಲೀಟ್ ಪ್ರಧಾನ ಕಚೇರಿಯ ನೆಲೆಯಾಗಿರುವ ಬಹ್ರೇನ್‌ನಲ್ಲಿ ಎರಡು ಬಾರಿ ಸೈರನ್‌ಗಳು ಮೊಳಗಿವೆ. ಇರಾನ್‌ ದಾಳಿಯ ಹೊಡೆತಕ್ಕೆ ಮೂರು ಗಲ್ಫ್, ಅರಬ್ ದೇಶಗಳಲ್ಲಿ ಅಪಾರ ಹಾನಿಯಾಗಿದ್ದು, ಕುವೈತ್‌ನ ಸೇನೆಯು ಒಳಬರುವ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಸಕ್ರಿಯವಾಗಿ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.  ಅಲ್ಲದೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಬಹ್ರೇನ್ ಮತ್ತು ಕುವೈತ್ ಮೇಲೆ ದಾಳಿಗಳನ್ನು ನಡೆಸಿರುವುದಾಗಿ ಒಪ್ಪಿಕೊಂಡಿದೆ.

ಇದನ್ನೂ ಓದಿ : ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆಗೆ ಎನ್‌ಎಸ್‌ಯುಐ ಮನವಿ

ಇನ್ನೂ ಅಮೆರಿಕವು ಮುಸ್ಲಿಂ ರಾಷ್ಟ್ರ ಇರಾನ್‌ನಾದ್ಯಂತ 90 ಸ್ಥಾನಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕದ ಮಿಲಿಟರಿಯ ಕೇಂದ್ರ ಕಮಾಂಡ್ ಹೇಳಿದೆ. ವಿಮಾನ ನಿಲ್ದಾಣದ ರನ್‌ವೇ ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ದಾಳಿ ಮಾಡಿದಂತೆ ಕಾಣುವ ಕಪ್ಪು-ಬಿಳುಪಿನ ದೃಶ್ಯಗಳನ್ನು ಬಿಡುಗಡೆ ಮಾಡಿ ದಾಳಿಯ ಮಾಹಿತಿ ಹಂಚಿಕೊಂಡಿದೆ. ಇದಲ್ಲದೆ ಯಾವುದೇ ಕ್ಷಣದಲ್ಲೂ ನಾವು ಜಾಗರೂಕರಾಗಿರುತ್ತೇವೆ, ನಮ್ಮ ದಾಳಿಯು ಮಾರಕವಾಗಿರುತ್ತವೆ ಮತ್ತು ಕಮಾಂಡರ್ ಇನ್ ಚೀಫ್ ಹೇಳಿದ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಸಿದ್ಧವಾಗಿದ್ದೇವೆ ಎಂದು ಅಮೆರಿಕ ಸೇನೆ ಹೇಳಿದೆ.

ಪ್ರಮುಖವಾಗಿ ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ತೈಲ ವ್ಯಾಪಾರದ ವಿಚಾರಕ್ಕೆ ಪ್ರಾರಂಭವಾಗಿವೆ ಎಂದು ಹೇಳಿಕೊಂಡಿದ್ದವು. ಈ ಯುದ್ಧವು ವಿಶ್ವಕ್ಕೆ ಅತ್ಯಧಿಕ ಪ್ರಮಾಣದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ವಹಿವಾಟನ್ನು ನಡೆಸುವ ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ತಡೆ ಹಿಡಿದಿದ್ದಕ್ಕಾಗಿ ನಡೆಯುತ್ತಿದೆ ಎಂದು ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಸಮರ ಸಾರಿದ್ದವು. 

CM DK Shivakumar : ಪ್ರಪಂಚಕ್ಕೆ ಏನ್ಬೇಕು ಅದು Bengaluruನಿಂದ ಕೋಡ್ಬೇಕು #pratidhvani

ಮುಖ್ಯವಾಗಿ ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರದ ನೆಲೆಯಾಗಿರುವ ಬುಶೆಹರ್ ಮತ್ತು ದಕ್ಷಿಣ ಬಂದರು ನಗರಗಳಾದ ಚಬಹಾರ್, ಕೊನಾರಕ್, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿದೆ. 

ಇನ್ನೂ ಇಂದು ಇರಾನ್‌ ಸರ್ವೋಚ್ಚ ನಾಯಕರಾಗಿದ್ಧ ಅಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲು ಅಧಿಕಾರಿಗಳು ಯೋಜಿಸಿರುವ ಮಶಾದ್‌ಗೆ ತೆರಳುವ ಮಾರ್ಗದಲ್ಲಿ ಬರುವ ಎರಡು ಸೇತುವೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈ ಯುದ್ಧದ ಪರಿಣಾಮ ಹಾರ್ಮುಜ್‌ ಜಲಸಂಧಿಯಲ್ಲಿ ಹಡುಗಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದ್ದು, ಮತ್ತೆ ವಿಶ್ವದಲ್ಲಿ ಇಂಧನ ಅಭಾವ ಉಂಟಾಗುವ ಸಾಧ್ಯತೆಗಳನ್ನು ಅಂತರಾಷ್ಟ್ರೀಯ ಮಾಧ್ಯಮಗಳು ತಿಳಿಸಿವೆ.

Tags: America PresidentAyotullah ali KhameneiBaharainChabahar BandarDonald TrumpIran Revolutionary GuardsIran Supreme LeaderIRGSNuclear ProjectPratidhvaniTeharanUS Vs Iran
Previous Post

ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆಗೆ ಎನ್‌ಎಸ್‌ಯುಐ ಮನವಿ

Next Post

RBI 10 ವರ್ಷ ನಿಯಮಕ್ಕೆ ಹೈಕೋರ್ಟ್ ತಡೆ ಇಲ್ಲ: ಡಿಸಿಸಿ, ಅರ್ಬನ್ ಬ್ಯಾಂಕ್ ನಿರ್ದೇಶಕರಿಗೆ ಹಿನ್ನಡೆ

Related Posts

ಬೆಳಗಾವಿ ಜಿಲ್ಲೆ ವಿಭಜನೆ ಅಪ್ರಸ್ತುತ ವಿಚಾರ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Top Story

ಬೆಳಗಾವಿ ಜಿಲ್ಲೆ ವಿಭಜನೆ ಅಪ್ರಸ್ತುತ ವಿಚಾರ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

by ಪ್ರತಿಧ್ವನಿ
July 9, 2026
0

ಬೆಳಗಾವಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿರುವುದು ಉತ್ತರ ಕರ್ನಾಟಕದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎಂದು ಮಾಜಿ ಸಚಿವೆ...

Read moreDetails
RBI 10 ವರ್ಷ ನಿಯಮಕ್ಕೆ ಹೈಕೋರ್ಟ್ ತಡೆ ಇಲ್ಲ: ಡಿಸಿಸಿ, ಅರ್ಬನ್ ಬ್ಯಾಂಕ್ ನಿರ್ದೇಶಕರಿಗೆ ಹಿನ್ನಡೆ

RBI 10 ವರ್ಷ ನಿಯಮಕ್ಕೆ ಹೈಕೋರ್ಟ್ ತಡೆ ಇಲ್ಲ: ಡಿಸಿಸಿ, ಅರ್ಬನ್ ಬ್ಯಾಂಕ್ ನಿರ್ದೇಶಕರಿಗೆ ಹಿನ್ನಡೆ

July 9, 2026
ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆಗೆ ಎನ್‌ಎಸ್‌ಯುಐ ಮನವಿ

ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆಗೆ ಎನ್‌ಎಸ್‌ಯುಐ ಮನವಿ

July 9, 2026
ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

July 9, 2026
ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

July 8, 2026
Next Post
RBI 10 ವರ್ಷ ನಿಯಮಕ್ಕೆ ಹೈಕೋರ್ಟ್ ತಡೆ ಇಲ್ಲ: ಡಿಸಿಸಿ, ಅರ್ಬನ್ ಬ್ಯಾಂಕ್ ನಿರ್ದೇಶಕರಿಗೆ ಹಿನ್ನಡೆ

RBI 10 ವರ್ಷ ನಿಯಮಕ್ಕೆ ಹೈಕೋರ್ಟ್ ತಡೆ ಇಲ್ಲ: ಡಿಸಿಸಿ, ಅರ್ಬನ್ ಬ್ಯಾಂಕ್ ನಿರ್ದೇಶಕರಿಗೆ ಹಿನ್ನಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada