ಚಿತ್ರ ವಿಚಿತ್ರ ಉಡುಗೆಗಳನ್ನ ಧರಿಸಿ ಫೇಮಸ್ ಆಗಿರೋ ನಟಿ ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿರ್ತಾರೆ. ಅವರ ವಿಚಿತ್ರ ಉಡುಗೆಗಳ ಬಗ್ಗೆ ಜನ ಟೀಕೆ ಮಾಡಿದ್ರೂ ಕ್ಯಾರೆ ಅನ್ನದ ಉರ್ಫಿ, ನಾನು ಇರೋದೇ ಹೀಗೆ ಅಂತ ಪದೇ ಪದೇ ಸಾಬೀತು ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ಉರ್ಫಿ ಜಾವೇದ್ ಹೊಸ ಅವತಾರ ತಾಳಿದ್ದು, ಮಲ್ಲಿಗೆ ಹೂವಿನಿಂದಲೇ ಬಟ್ಟೆ ಮಾಡಿ ಧರಿಸಿಕೊಂಡಿದಾರೆ. ಉರ್ಫಿ ಅವತಾರ ನೋಡಿ, ಅನೇಕರು ಟೀಕೆ ಮಾಡಿ, ಹೀಯಾಳಿಸುತ್ತಿದ್ದಾರೆ. ಆದರೆ ಉರ್ಫಿ ಇದ್ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಂಡಿಲ್ಲ.

ಸಿಕ್ಕ ಸಿಕ್ಕ ಐಟಂಗಳನ್ನ ಬಟ್ಟೆ ಮಾಡಿಕೊಳ್ಳುವ ಉರ್ಫಿ, ತಮ್ಮ ವೆರೈಟಿ ಉಡುಗೆಗಳಿಂದಲೇ ಚಿರಪರಿಚಿತ. ದಿನ ಕಳೆದ ಉರ್ಫಿ ಅವರ ವಿಚಿತ್ರ ಉಡುಗೆಗಳ ಹಾವಳಿ ಹೆಚ್ಚಾಗುತ್ತಿದೆ. ಉರ್ಫಿ ಅಶ್ಲೀಲತೆ ಮೆರೆಯುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯ. ಆದ್ರೆ ಉರ್ಫಿ ಮಾತ್ರ ಈ ರೀತಿ ಮಾಡೋದನ್ನ ನಿಲ್ಲಿಸಿಲ್ಲ.

ಅವರ ಚಿತ್ರ ವಿಚಿತ್ರ ಬಟ್ಟೆಗಳನ್ನ ನೋಡಿ ಜನರಂತೂ ರೋಸಿ ಹೋಗಿದ್ಧಾರೆ. ಇದೀಗ ಉರ್ಫಿ ಮಲ್ಲಿಗೆ ಅವತಾರ ನೋಡಿ, ಅನೇಕರು ಬೆರಗಾಗಿದ್ದು, ʻರಂಜಾನ್ ತಿಂಗಳಲ್ಲಾದರೂ ಸರಿಯಾದ ಬಟ್ಟೆ ಹಾಕಿʼ ಅಂತ ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಲ್ಲಿಗೆ ಹೂವಿನ ಅಂದ ಹಾಳು ಮಾಡ್ಬೇಡಿ ಅಂತ ಬರೆದುಕೊಂಡಿದ್ಧಾರೆ
