• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

UPSC ಪೂರ್ವಭಾವಿ ಪರೀಕ್ಷಾ ದಿನಾಂಕ ಮುಂದೂಡಿಕೆ

by
May 5, 2020
in ದೇಶ
0
UPSC ಪೂರ್ವಭಾವಿ ಪರೀಕ್ಷಾ ದಿನಾಂಕ ಮುಂದೂಡಿಕೆ
Share on WhatsAppShare on FacebookShare on Telegram

ಮೇ 31 ರಂದು ನಡೆಯಬೇಕಿದ್ದ ನಾಗರಿಕ ಸೇವೆಯ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆಯೆಂದು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC) ತಿಳಿಸಿದೆ. ಎರಡನೇ ಹಂತದ ಲಾಕ್‌ಡೌನ್‌ ಪರಿಸ್ಥಿತಿಯನ್ನು ಪರಿಶೀಲಿಸಲು ಆಯೋಗ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

ಲಾಕ್‌ಡೌನ್ ವಿಸ್ತರಿಸಿರುವ ಈ ಸಂಧರ್ಭದಲ್ಲಿ ಪರೀಕ್ಷೆ ಮತ್ತು ಸಂದರ್ಶನವನ್ನು ಆರಂಭಿಸಲು ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಆಯೋಗ ಬಂದಿದೆ. ಮುಂದೂಡಲಾದ ಪರೀಕ್ಷೆಗಳು ನಡೆಯುವ ದಿನಾಂಕವನ್ನು ಅಭ್ಯರ್ಥಿಗಳಿಗೆ 30 ದಿನಗಳ ಮುಂಚಿತವಾಗಿ ತಿಳಿಸಲಾಗುವುದು ಎಂದು UPSC ಹೇಳಿದೆ.

ಪ್ರತಿವರ್ಷ ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿರುತ್ತಾರೆ. 2,500ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ಸರಿಸುಮಾರು 1.6 ಲಕ್ಷ ಮಂದಿ ಪರೀಕ್ಷೆ ನಡೆಸಲು ಭಾಗವಹಿಸುತ್ತಾರೆ.

ಪರೀಕ್ಷೆ ಮುಂದೂಡುವುದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬಗೊಳ್ಳಬಹುದು ಆದರೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದು UPSC ಮಾಜಿ ಅಧ್ಯಕ್ಷ ವಿಜಯ್ ಸಿಂಗ್ ಹಿಂದುಸ್ತಾನ್ ಟೈಮ್ಸ್ ಬಳಿ ಹೇಳಿಕೊಂಡಿದ್ದಾರೆ.

ಕರೋನಾ ಸೋಂಕು ಮತ್ತು ಲಾಕ್ಡೌನ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇ 20 ರ ಬಳಿಕ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು. ಪರೀಕ್ಷಾ ನಡೆಯಬೇಕಿದ್ದ ಕೇಂದ್ರಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿರುವುದರಿಂದ ಮೇ 31 ರಂದು ಪರೀಕ್ಷೆ ನಡೆಸಲು ಸಾಧ್ಯವಿರಲಿಲ್ಲ ಎಂದು UPSCಯ ಇನ್ನೋರ್ವ ಅಧಿಕಾರಿ ಪತ್ರಿಕೆಯ ಬಳಿ ಹೇಳಿಕೊಂಡಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

Tags: CIVIL SERVICEExamindia lockdownUPSC
Previous Post

ಕೋವಿಡ್‌-19: 67 BSF ಯೋಧರಲ್ಲಿ ಕರೋನಾ ಸೋಂಕು ಪತ್ತೆ

Next Post

E-Learning‌ ವ್ಯವಸ್ಥೆಗೆ ತೆರೆದುಕೊಳ್ಳಬೇಕಿದೆ ಭಾರತ; ಇದು ಲಾಕ್‌ಡೌನ್ ಕಲಿಸಿದ ಪಾಠ‌ 

Related Posts

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ
Top Story

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

by ಪ್ರತಿಧ್ವನಿ
August 20, 2026
0

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ದೆಹಲಿಯಲ್ಲಿ ನಿಧನರಾದರು. https://youtu.be/Ah4XCyz6goI?si=e8Kk4S1jxvCTF1TS ತಿಹಾರ್...

Read moreDetails
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

August 20, 2026
‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

August 20, 2026
ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

August 20, 2026
ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

August 19, 2026
Next Post
E-Learning‌ ವ್ಯವಸ್ಥೆಗೆ ತೆರೆದುಕೊಳ್ಳಬೇಕಿದೆ ಭಾರತ; ಇದು ಲಾಕ್‌ಡೌನ್ ಕಲಿಸಿದ ಪಾಠ‌ 

E-Learning‌ ವ್ಯವಸ್ಥೆಗೆ ತೆರೆದುಕೊಳ್ಳಬೇಕಿದೆ ಭಾರತ; ಇದು ಲಾಕ್‌ಡೌನ್ ಕಲಿಸಿದ ಪಾಠ‌ 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada