“ಕರೋನ ಕರ್ಫ್ಯೂ ಉಲ್ಲಂಘಿಸಿದ ಕಾರಣಕ್ಕಾಗಿ 17 ವರ್ಷದ ಬಾಲಕನನ್ನು ಉತ್ತರ ಪ್ರದೇಶ ರಾಜ್ಯದ ಉನ್ನಾವೊ ಜಿಲ್ಲೆಯ ಪೋಲಿಸರು ಥಳಿಸಿದ ಬೆನ್ನಲ್ಲೇ ಶುಕ್ರವಾರ ಆ ಬಾಲಕ ಸಾವನ್ನಪ್ಪಿಪ್ಪಿದ್ದಾನೆ”. ನಂತರ ಪ್ರಕರಣಕ್ಕೆ ಸಂಭಂದಿಸಿದ ಪೋಲಿಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ ಅಮಾನತುಗೊಂಡಿದ್ದ ಗೃಹರಕ್ಷಕರನ್ನು ಸಹ ಈಗ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉನ್ನಾವೊದ ಬಂಗರ್ಮೌ ಪಟ್ಟಣದಲ್ಲಿ ಬಾಲಕ ತನ್ನ ಮನೆಯ ಹೊರಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದ ಎಂದು ವರದಿಯಾಗಿದೆ. ಈ ವೇಳೆ ಆತನನ್ನು ಪೋಲಿಸರು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಅಮಾನುಷವಾಗಿ ಥಳಿಸಿದ ನಂತರ ಬಾಲಕನ ಸ್ಥಿತಿ ಹದಗೆಟ್ಟಿದೆ ಮತ್ತು ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಬಾಲಕನ ಕುಟುಂಬ ಆರೋಪಿಸಿದೆ.
ಪೊಲೀಸ ವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಕ್ನೋ ರಸ್ತೆ ಕ್ರಾಸಿಂಗ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಗೃಹರಕ್ಷಕರನ್ನು ಅಮಾನತುಗೊಳಿಸಲಾಗಿದೆ ಮತ್ತು ಇಡೀ ವಿಷಯವನ್ನು ತನಿಖೆ ಮಾಡಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರೋನ ವೈರಸ್ ಹರಡುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರ ಮೇ 24 ಬೆಳಿಗ್ಗೆ 7 ಗಂಟೆಯವರೆಗೂ ಕರೋನಾ ಕರ್ಫ್ಯೂ ವಿಧಿಸಿದೆ.