ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi adityanath) ಪ್ರಯಾಗರಾಜ್ ನಲ್ಲಿ ನಿನ್ನೆ ನಡೆದ ದುರಂತದ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಭಕ್ತಾದಿಗಳಿಗೆ ತೊಂದರೆಯಾಗ ರೀತಿಯಲ್ಲಿ, ಪ್ರಯಾಗರಾಜ್ ನ (Prayagaraj) ಮಹಾಕುಂಭಮೇಳದಲ್ಲಿ (Mahakumbha mela) ಜನರ ಟ್ರಾಫಿಕ್ ನಿಲ್ಲಬಾರದು ಎಂಬ ಸೂಚಮೆ ನೀಡಿದ್ದಾರೆ.

ಈ ಬಗ್ಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.ಸ್ಪೆಷಲ್ ಟ್ರೇನ್, ಸ್ಪೆಷಲ್ ಬಸ್ ವ್ಯವಸ್ಥೆ ಮುಂದುವರಿಸಲು ಕೂಡ ನಿರ್ದೇಶನ ನೀಡಲಾಗಿದೆ.
ಇನ್ನು ಪ್ರಯಾಗರಾಜ್ ಸುತ್ತಲಿನ ಏಳೆಂಟು ಜಿಲ್ಲೆಗಳ ಅಧಿಕಾರಿಗಳು ಆಲರ್ಟ್ ಸ್ಥಿತಿಯಲ್ಲಿರಲು ಸೂಚನೆ ನೀಡಿದ್ದು,ಮೇಳಕ್ಕೆ ಬಂದ ಸ್ಪೆಷಲ್ ಟ್ರೇನ್, ಬಸ್ ಮೂಲಕ ವಾಪಾಸಾಗಲು ವ್ಯವಸ್ಥೆ ಇರಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
ಅಯೋಧ್ಯೆ, ವಾರಾಣಾಸಿ, ಚಿತ್ರಕೂಟ ಜಿಲ್ಲೆಗಳ ಅಧಿಕಾರಿಗಳು ಆಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದ್ದು ಇನ್ಯಾವುದೇ ದುರಂತಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದೆ.