ಧಾರವಾಡ (Dharawada) ಕ್ಷೇತ್ರದಿಂದ ತಾವೇ ಖುದ್ದು ಅಖಾಡಕ್ಕಿಳಿಯೋದ್ರ ಮೂಲಕ ದಿಂಗಾಲೇಶ್ವರ ಶ್ರೀಗಳು ಬಿಜೆಪಿ ಮತ್ತು ಕಾಂಗ್ರೇಸ್ (BUP – Congress) ಎರಡೂ ಪಕ್ಷಗಳಿಗೂ ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗೆ ನಿರಂತರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (prahalad Joshi) ವಿರುದ್ಧ ಕಿಡಿ ಕಾರಿದ್ದ ದಿಂಗಾಲೇಶ್ವರ ಶ್ರೀಗಳು (Dingaleshwara sri), ನಿಮಗೆ ಪಾಠ ಕಲಿಸಲು ನಾನೊಬ್ಬನೇ ಸಾಕು ಎಂದಿದ್ರು. ಇದೀಗ ಜೋಷಿಗೆ ಪಾಠ ಕಲಿಸುವ ಇರಾದೆಯಲ್ಲಿ ಶ್ರೀಗಳೆ ಉನಾವಣೆಗೆ ನಿಲ್ಲಲು ಮುಂದಾಗಿದ್ದಾರೆ.

ಪ್ರಹ್ಲಾದ್ ಜೋಶಿ ಲಿಂಗಾಯತ ಸಮಾಜವನ್ನ (Lingayat community), ಲಿಂಗಾಯತ ನಾಯಕರನ್ನ ರಾಜಕೀಯವಾಗಿ ದುರ್ಬಲಗೊಳಿಸುವ, ತುಳಿಯುವ ಹುನ್ನಾರ ಮಾಡುತ್ತಲೇ ಬಂದಿದ್ದಾರೆ, ಮತ್ತು ಆ ಬಗ್ಗೆ ಧ್ವನಿ ಎತ್ತಿದ ಸ್ವಾಮೀಜಿಗಳನ್ನೂ ಟಾರ್ಗೆಟ್ (Target) ಮಾಡಿದ್ದಾರೆ. ಆದ್ರೆ ನಾನು ಇದ್ಯಾವುದಕ್ಕೂ ಹೆದರೋದಿಲ್ಲ, ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇನೆ ಎಂದು ಗುಡುಗಿದ್ದ ಶ್ರೀಗಳು ಈಗ ಎಲೆಕ್ಷನ್ (Election) ಗೆ ನಿಲ್ಲೋ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಶಕ್ ಕೊಟ್ಟಿದ್ದಾರೆ.

ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಲಿಂಗಾಯತ ಮತಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಒಂದು ವೇಳೆ ಭಾರಿ ಪ್ರಮಾಣದಲ್ಲಿ ಲಿಂಗಾಯತ ಮತಗಳನ್ನ ಚದುರಿಸುವಲ್ಲಿ ಶ್ರೀಗಳು ಸಫಲರಾದ್ರೆ ಇದು ಬಿಜೆಪಿಗೂ ಮತ್ತು ಕಾಂಗ್ರೇಸ್‌ಗೂ ದೊಡ್ಡ ಹೊಡೆತವನ್ನೇ ನೀಡಲಿದೆ. ಹೀಗಾಗಿ ಎರಡೂ ಪಕ್ಷದ ನಾಯಕರು ಶ್ರೀಗಳನ್ನ ಸಂಪರ್ಕಿಸಿ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂತಿಮವಾಗಿ ಶ್ರೀಗಳ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.