ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಕೈಗೊಂಡಿದ್ದ ವಿರೋಧ ಪಕ್ಷಗಳಾದ ಜೆಡಿಎಸ್ – ಬಿಜೆಪಿ ಮೈತ್ರಿ ನಾಯಕರು ಮೈಸೂರಿನಲ್ಲಿ ಸಮಾರೋಪ ಸಮಾರಂಭ ಮಾಡಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹಾಗು ಕೇಂದ್ರದ ಸಚಿವರಾದ ಕುಮಾರಸ್ವಾಮಿ ಗುಡುಗಿದ್ದಾರೆ. ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ ಪ್ರತಿಯಾಗಿ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.
ಆಗಸ್ಟ್ ಎರಡರಂದು ಕಾಂಗ್ರೆಸ್ನವರು ಜನಾಂದೋಲನ ಶುರು ಮಾಡಿದ್ರು. ರಾಮನಗರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರುಗಳು ನಮ್ಮ ಬಗ್ಗೆ ಮೈಸೂರಿನವರೆಗೆ ಪ್ರಶ್ನೆ ಇಡ್ತಾ ಹೋಗ್ತೇವೆ ಎಂದಿದ್ರು. ಅದಕ್ಕೆ ಉತ್ತರ ಕೊಡಬೇಕು ಅಂತಾನೂ ಹೇಳಿದ್ದರು. ಆ ಪ್ರಶ್ನೆಗಳಿಗೆ ನಾನು ಉತ್ತರ ಕೊಡ್ತೇನೆ. ಅದಕ್ಕು ಮುನ್ನ ನಿನ್ನೆ ಇದೇ ವೇದಿಕೆಯಿಂದ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರಲ್ಲ, ನಾವು ಈ ಹಿಂದೆ ಯಡಿಯೂರಪ್ಪ ಕುರಿತು ವೀಡಿಯೋ ತುಣುಕುಗಳನ್ನು ಇಟ್ಟಿದ್ದಾರೆ. ನಮ್ಮ ಮತ್ತು ಯಡಿಯೂರಪ್ಪ ನಡುವಿನ ಸಂಘರ್ಷದ ಬಗ್ಗೆ ವೇದಿಕೆ ಮೂಲಕ ಬಹಳ ಕೇಕೆ ಹಾಕೊಂಡು ಪ್ರದರ್ಶನ ಮಾಡಿದ್ದಾರೆ. ನೀವು ಏನ್ ಮಾಡಿದ್ದೀರಿ ಅನ್ನೋದನ್ನು ಮೊದಲು ನೋಡಿ ಎಂದು ವಿಡಿಯೋ ಪ್ರದರ್ಶನ ಮಾಡಿದ್ದಾರೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವ ನೈತಿಕತೆಯನ್ನು ನಾನು ಮತ್ತು ಯಡಿಯೂರಪ್ಪ ಉಳಿಸಿಕೊಂಡಿದ್ದೇವೆ. ನಾವು ಎಲ್ಲಿಯೂ ಪಲಾಯನ ಮಾಡಲ್ಲ. ಆದರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ, ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್ ವಾಗ್ದಾಳಿ, ಡಿ.ಕೆ ಶಿವಕುಮಾರ್ ಅರೆಸ್ಟ್ ಆಗಿದ್ದಾಗ ಸಿದ್ದರಾಮಯ್ಯ ವಿರುದ್ಧ ಶಿವಕುಮಾರ್ ತಾಯಿ ಕೆಂಪಮ್ಮ ಆಡಿದ್ದ ಮಾತುಗಳು, ರಮೇಶ್ ಕುಮಾರ್, ಉಗ್ರಪ್ಪ, ಸಲೀಂ ಅಹಮದ್ ನಡುವಿನ ಸಂಭಾಷಣೆ, ಡಿ.ಕೆ ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಜೊತೆಗಿರುವ ಕುರಿತ ಸ್ಟೋರಿ, ಡಿ.ಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ, ಶಿವಕುಮಾರ್ ಒದ್ದಾಟ, ಶಿವಕುಮಾರ್ ಅವರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆಯ ಕುರಿತ ಸ್ಟೋರಿ, ಶಿವಕುಮಾರ್ ತಿಹಾರ್ ಜೈಲಿನ ಕಥೆ, ಮಾಧ್ಯಮಗಳಲ್ಲಿ ಬಂದ ಸ್ಟೋರಿಗಳನ್ನು ಪ್ರದರ್ಶನ ಮಾಡಿದ್ರು.
ಡಿ.ಕೆ ಶಿವಕುಮಾರ್ ತೋರಿಸಿದಂತೆಯೇ ಎಲ್ಇಡಿ ಮೂಲಕ ವಿಡಿಯೋ ತೋರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ನನ್ನ ಹಾಗೂ ಯಡಿಯೂರಪ್ಪ ನಡುವೆ ಬಿರುಕು ಉಂಟು ಮಾಡಬೇಕೆಂದು ನಿನ್ನೆ ಏನೋ ವಿಡಿಯೋ ತೋರಿಸಿದ್ದಾರೆ. 2018ರಲ್ಲಿ ನನ್ನ ಮೇಲೆ ಒತ್ತಡ ಹಾಕಿ ಸಿಎಂ ಮಾಡಿದ್ದ ಸಂದರ್ಭ ಹಾಗು ಅಸೆಂಬ್ಲಿಯಲ್ಲಿ ರಾಜಕೀಯವಾಗಿ ಮಾತಾಡಿದ ವಿಡಿಯೋ ತೋರಿಸಿದ್ದಾರೆ. ಬಡ ಮಕ್ಕಳ ಆಸ್ತಿ ಲಪಾಟಿಯಿಸುವ ಶಿವಕುಮಾರ್ಗೆ ನಾನು ನಾಗರಹಾವು ಅಂತಾ ಯಡಿಯೂರಪ್ಪ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈಗ ಸಿದ್ದರಾಮಯ್ಯನ ಪರ ಕಲ್ಲುಬಂಡೆ ತರ ಡಿ.ಕೆ ಶಿವಕುಮಾರ್ ನಿಂತಿದ್ದಾರಂತೆ. 2018ರಲ್ಲಿ ಟ್ರಬಲ್ ಶ್ಯೂಟರ್ ಕಾಪಾಡಲು ಮುಂದಾದ ಕುಮಾರಸ್ವಾಮಿ ಅಂತಾ ಮಾಧ್ಯಮಗಳು ಸ್ಟೋರಿ ಮಾಡಿದ್ದವು. ಅವತ್ತು ಬಂಡೆ ತರ ನಾನು ನಿಂತಿದ್ದಕ್ಕೆ, ಇವತ್ತು ನಾನು ನನ್ನ ತಲೆ ಮೇಲೆ ಬಂಡೆ ಹಾಕೊಂಡಿದ್ದು ಎಂದು ವ್ಯಂಗ್ಯವಾಡಿದ್ದಾರೆ.
ಹತ್ತು ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಎಂದಿದ್ದೀರಲ್ಲ ಶಿವಕುಮಾರ್, ಸರ್ಕಾರ ತೆಗೆಯಲು ನಾವು ಹೋಗಲ್ಲ. ನೀವಾಗಿ ನೀವೇ ಸರ್ಕಾರ ತೆಗೆಯೋದು. ಬಂಡೆಯಾಗಿ ನಿಂತ್ಕೊತ್ತೇನೆ ಅಂದಿದ್ದಾರಲ್ಲ, ಬಂಡೆ ನಂಬಿಕೊಂಡು ಬಂಡೆ ಕೆಳಗೆ ಸಿದ್ದರಾಮಯ್ಯ ನಿಲ್ಲೋದು, ಆಗ ಆ ಬಂಡೆಯೇ ಸಿದ್ದರಾಮಯ್ಯನವರ ಮೇಲೆ ಬಿದ್ದರೆ ಅವರ ಪರಿಸ್ಥಿತಿ ಏನಾಗುತ್ತದೆ..? ಎಂದು ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ 50 ಡಿನೊಟಿಫೈ ಮಾಡಿದ್ದೀನಿ ಅಂದಲ್ಲಪ್ಪ, ಅದೇನು ತೆಗೀಯಪ್ಪ, ಅದೇನು ತನಿಖೆ ಮಾಡಿಸ್ತೀಯೋ ಮಾಡಿಸಪ್ಪ ನಾನು ನೋಡ್ತೀನಿ ಎಂದು ಸವಾಲು ಎಸೆದಿದ್ದಾರೆ.
ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡ್ತೀಯಪ್ಪ ಅಂತಾ ಕಾಂಗ್ರೆಸ್ ಪುಡಾರಿಗಳು ಕೇಳ್ತಾರಲ್ಲ, ನಾನು ಏನು ತಪ್ಪು ಮಾಡಿದ್ದೀನಪ್ಪ..? ಶಿವಕುಮಾರ್ ತರ ಭೂಮಿ ಲಪಾಟಿಯಿಸಿದ್ದೀನ..? ಕುಮಾರಸ್ವಾಮಿ ಮೇಲೆ ಕಣ್ಣು ಹಾಕಿದ್ರೆ ಶಿವಕುಮಾರ್ ಸರ್ವನಾಶ ಆಗುವ ಕಾಲ ದೂರ ಇಲ್ಲ, ಅರ್ಕಾವತಿ ಹಗರಣದ್ದು ಏನ್ ಆಯ್ತಪ್ಪ..? ಬಿಜೆಪಿ- ಜೆಡಿಎಸ್ ಒಂದಾಗಿ, ಈ ಭ್ರಷ್ಟ ಮತ್ತೆ ದರೋಡೆ ಸರ್ಕಾರ ತೆಗೆಯಲು ಒಂದಾಗಿದ್ದೇವೆ. ಡಿಸಿಎಂ ಸಾಹೇಬ ಬಂದು ನಮ್ಮ ಮೇಲೆ ಅಟ್ಯಾಕ್ ಮಾಡ್ತಾರೆ. ಅಷ್ಟು ಸುಲಭವಾಗಿ ನಾನು ಹೆದರುವುದಿಲ್ಲ. ಕೆಣಕಿದ್ದೀರಿ, ತೊಡೆ ತಟ್ಟಿದ್ದೀರಿ, ಮಿಸ್ಟರ್ ಡಿಕೆ, ನಿಮ್ಮ ಸವಾಲನ್ನು ಸ್ವೀಕಾರ ಮಾಡಿದ್ದೇನೆ ಎಂದು ಎಂದಿದ್ದಾರೆ.
ಕೃಷ್ಣಮಣಿ