ಬೆಂಗಳೂರು : 2026 ರ ಜಾಗತಿಕ ಜಿಡಿಪಿ ಕೊಡುಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಅಂಕಿಅಂಶಗಳ ವರದಿಯೊಂದು ಪ್ರಕಟವಾಗಿದೆ, ಇದೇ ವಿಚಾರಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ವಿದೇಶಗಳಲ್ಲಿ ನಿಂತು ಭಾರತವನ್ನು ಟೀಕಿಸುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿವಿದಿದ್ದಾರೆ. ಭಾರತದ ವಿಚಾರದಲ್ಲಿ ಮಸ್ಕ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಸರ್ಕಾರವನ್ನು ಟೀಕಿಸುವಾಗ ಭಾರತವನ್ನು ಅವಹೇಳನ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಅಧಿಕಾರದ ಸಮತೋಲನದಲ್ಲಿ ಬದಲಾಗುತ್ತಿದೆ. ಚೀನಾ ಮತ್ತು ಭಾರತ ಒಟ್ಟಾಗಿ ಜಾಗತಿಕ ಬೆಳವಣಿಗೆಗೆ ಶೇ.43.6 ರಷ್ಟು ಕೊಡುಗೆ ನೀಡುತ್ತಿವೆ ಎಂದು ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ರೀಪೋಸ್ಟ್ ಮಾಡುವ ಮೂಲಕ ಸತ್ತ ಆರ್ಥಿಕತೆಯ ಹೇಳಿಕೆ ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ : CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು
ಇನ್ನೂ ರಾಷ್ಟ್ರೀಯ ಸಾಧನೆಯ ಕುರಿತು ಉತ್ತಮವಾದ ವಿಷಯವನ್ನು ತಿಳಿಸಲು ಮಾತ್ರ ನಾನು ಎಲೋನ್ ಮಸ್ಕ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದೇನೆ. “ನಾನು ಸಾಮಾನ್ಯವಾಗಿ ಭಾರತೀಯರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸರ್ಕಾರವನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು, ಭಾರತವನ್ನು ಕೀಳಾಗಿ ನೋಡಬೇಡಿ ಮತ್ತು ಭಾರತದ ಸಾಧನೆಯನ್ನು ಎಂದಿಗೂ ಕಡಿಮೆ ಮಾಡಬೇಡಿ ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸಲು ಎಲೋನ್ ಮಸ್ಕ್ ಅವರ ಬಗ್ಗೆ ಹೇಳುತ್ತಿದ್ದೇನೆ ಹೆಮ್ಮೆಯ ಭಾರತೀಯರಾಗಿರಿ” ಎಂದು ರಿಜಿಜು ರಾಹುಲ್ ಗಾಂಧಿಗೆ ತೀಕ್ಷ್ಣವಾಗಿಯೇ ರಾಷ್ಟ್ರೀಯತೆಯ ಪಾಠ ಮಾಡಿದ್ದಾರೆ.
ಎಲಾನ್ ಮಸ್ಕ್ (Elon Musk) ಹಂಚಿಕೊಂಡ ಪೋಸ್ಟ್‌ನಲ್ಲಿ ಐಎಂಎಫ್ (IMF) ಡೇಟಾವನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ 2026 ರಲ್ಲಿ ಜಾಗತಿಕ ಜಿಡಿಪಿ (GDP) ಬೆಳವಣಿಗೆಗೆ ಟಾಪ್ 10 ದೇಶಗಳು ಮತ್ತು ಅವುಗಳ ಕೊಡುಗೆಯನ್ನು ಪಟ್ಟಿ ಮಾಡಲಾಗಿದೆ. ಏಷ್ಯಾದ-ಪೆಸಿಫಿಕ್ ಪ್ರದೇಶವು ಒಟ್ಟು ಜಾಗತಿಕ ಬೆಳವಣಿಗೆಯ ಸುಮಾರು ಶೇ.50% ರಷ್ಟಿದೆ ಎಂದು ಎಲಾನ್ ಮಸ್ಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಈ ಪಟ್ಟಿಯು ಭಾರತವು ಶೇ.17% ರಷ್ಟು ಜಿಡಿಪಿ ಕೊಡುಗೆಯ ವಿಚಾರದಲ್ಲಿ ಅಮೆರಿಕಕ್ಕಿಂತ ಮುಂದಿದೆ. ಇಂಡೋನೇಷ್ಯಾ, ಅಮೆರಿಕ, ಚೀನಾ ಮತ್ತು ಜರ್ಮನಿಯಂತಹ ಇತರ ದೇಶಗಳು ಕ್ರಮವಾಗಿ ಶೇ.3.8%, ಶೇ.9.9%, ಶೇ.26.6% ಮತ್ತು ಶೇ.0.9% ರಷ್ಟಿವೆ. ಜನವರಿಯಲ್ಲಿ, ಐಎಂಎಫ್ 2025-26ರ ಆರ್ಥಿಕ ವರ್ಷದಲ್ಲಿ (Financial Year) ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 7.3 ಕ್ಕೆ ಮತ್ತು 2026-27ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.4 ಕ್ಕೆ ಹೆಚ್ಚಿಸಿತ್ತು.
ರಾಹುಲ್ ಗಾಂಧಿ ಟೀಕೆಗಳೇನು..?
ಇನ್ನೂ ಕಳೆದ ವರ್ಷ ಜುಲೈನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ “ಡೆಡ್ ಎಕಾನಮಿ” ಹೇಳಿಕೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು ಮತ್ತು ಆರ್ಥಿಕತೆಯನ್ನು ನಿರ್ವಹಿಸುವ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದರು.

ಅಲ್ಲದೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ, ರಾಹುಲ್ ಗಾಂಧಿ, ಸರ್ಕಾರವು ನಿರ್ಲಕ್ಷಿಸಿದ ಪ್ರಮುಖ ವಿಷಯಗಳೆಂದು ವಿವರಿಸಿ ಪಟ್ಟಿ ಹಂಚಿಕೊಂಡಿದ್ದರು. ಯುವಜನರಿಗೆ ಉದ್ಯೋಗವಿಲ್ಲ. ಉತ್ಪಾದನೆ ಕುಸಿಯುತ್ತಿದೆ. ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಮನೆಯ ಉಳಿತಾಯ ಕುಸಿಯುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜಾಗತಿಕ ಆಘಾತಗಳು – ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ. ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸದೆ, ದಾರಿ ಸುಧಾರಿಸಿಕೊಳ್ಳುವುದರಲ್ಲಿಯೂ ವಿಫಲವಾದ ಬಜೆಟ್ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.











