• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಣ್ಣ ಉಕ್ಕು ಕ್ಷೇತ್ರದ ಕ್ಷಮತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ

ಪ್ರತಿಧ್ವನಿ by ಪ್ರತಿಧ್ವನಿ
August 13, 2025
in Top Story, ಕರ್ನಾಟಕ, ರಾಜಕೀಯ
0
ಸಣ್ಣ ಉಕ್ಕು ಕ್ಷೇತ್ರದ ಕ್ಷಮತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ
Share on WhatsAppShare on FacebookShare on Telegram

2047ಕ್ಕೆ ವಾರ್ಷಿಕ 500 ದಶಲಕ್ಷ ಟನ್‌ ಉಕ್ಕು ಉತ್ಪಾದನೆ ಗುರಿ; ಸಣ್ಣ ಉಕ್ಕು ಕೈಗಾರಿಕೆಗಳ ಪಾತ್ರ ದೊಡ್ಡದು ಎಂದ ಕೇಂದ್ರ ಸಚಿವರು

ADVERTISEMENT

ಮೋದಿ ನೇತೃತ್ವದಲ್ಲಿ ಭಾರತವನ್ನು ಜಾಗತಿಕ ಉಕ್ಕು ಶಕ್ತಿಯನ್ನಾಗಿ ರೂಪಿಸುತ್ತೇವೆ; ಗ್ರೀನ್‌ ಹೈಡ್ರೋಜನ್, ಸ್ಕ್ರ್ಯಾಪ್ ಮರುಬಳಕೆಗೆ ಒತ್ತು

ನವದೆಹಲಿ: ಸಣ್ಣ ಪ್ರಮಾಣದ ಉಕ್ಕು ಉತ್ಪಾದಿತ ಕ್ಷೇತ್ರವು ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದು; 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಕಾರ್ಯಸೂಚಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲುಗಳ ಕುರಿತು ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Assembly Session: ಡಿಕೆಗೆ ಮುನಿರತ್ನ ಸವಾಲ್​- ಒಂದೇ ಮಾತಲ್ಲಿ ಮುನಿರತ್ನ ಬಾಯಿ ಮುಚ್ಚಿಸಿದ ಡಿಕೆ #pratidhvani

ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ ಶೇ.50ರಷ್ಟನ್ನು ಉತ್ಪಾದಿಸುತ್ತಿರುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದ ಅವರು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ವಲಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರಿಕೀಕರಣದ ಬೆನ್ನೆಲು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ. ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದು ಮಾತ್ರವಲ್ಲದೆ, ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತವನ್ನು ಶೂನ್ಯ ಇಂಗಾಲ ಬಿಡುಗಡೆ ಹಾಗೂ ಉಕ್ಕು ವಲಯದಲ್ಲಿ ಜಾಗತಿಕ ಸುಸ್ಥಿರ ರಾಷ್ಟ್ರವನ್ನಾಗಿ ಹೊರಹೊಮ್ಮಿಸಲು ನಾವು ದೃಢನಿಶ್ಚಯ ಮಾಡಿದ್ದೇವೆ ಎಂದು ಸಚಿವರು ಒತ್ತಿ ಹೇಳಿದರು.

2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್‌ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವುದು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಹೆಗ್ಗುರಿ ಆಗಿದೆ. ಈ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಣ್ಣ ಗಾತ್ರದ ಉಕ್ಕು ವಲಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ವಿಶೇಷ ಉಕ್ಕಿಗಾಗಿ PLI ಯೋಜನೆ, ಹಸಿರು ಉಕ್ಕು ಪ್ರಮಾಣೀಕರಣ ರೇಟಿಂಗ್ ವ್ಯವಸ್ಥೆ, ಹೈಡ್ರೋಜನ್ ಆಧರಿತ ಉಕ್ಕು ತಯಾರಿಕೆ ಯೋಜನೆಗಳು ಮತ್ತು ಉಕ್ಕಿನ ಸ್ಕ್ರ್ಯಾಪ್ ಮರುಬಳಕೆ ನೀತಿ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಸರಕಾರವು ಕೈಗೊಂಡಿದೆ ಎಂದು ಅವರು ವಿವರಿಸಿದರು.

ಸರಕಾರದ ಪೂರ್ವಭಾವಿ ಕ್ರಮಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು,”ಇಂಧನ ದಕ್ಷತೆಯು ಇನ್ನು ಮುಂದೆ ಐಚ್ಛಿಕವಲ್ಲ. ತ್ಯಾಜ್ಯ ಶಾಖ ಹೆಚ್ಚಳ, ಆತ್ಯಾಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಏಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು (MSME) ಉತ್ತೇಜಿಸುತ್ತೇವೆ ಎಂದು ಸಚಿವರು ನುಡಿದರು.

“ಮನೆ, ಬೃಹತ್‌ ಕಟ್ಟಡ, ಹೆದ್ದಾರಿ, ಸೇತುವೆ, ರೇಲ್ವೆ, ವಿಮಾನ, ರಾಕೆಟ್‌ ಸೇರಿದಂತೆ ರಾಷ್ಟ್ರದ ಭವ್ಯ ಇತಿಹಾಸವನ್ನು ನಿರ್ಮಿಸುವ ಉಕ್ಕು ಕ್ಷೇತ್ರವನ್ನು ನಾವು ಮತ್ತಷ್ಟು ಸಶಕ್ತಗೊಳಿಸಬೇಕಿದೆ. ನೀತಿ, ಉದ್ದೇಶ ಮತ್ತು ನಮ್ಮ ಜನರ ಉತ್ಸಾಹದೊಂದಿಗೆ ನಾವು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಸಚಿವರು ಪಣ ತೊಟ್ಟರು.

ಇದೇ ವೇಳೆ ಜಾಗತಿಕವಾಗಿ ಭಾರತದ ಉಕ್ಕು ಉದ್ಯಮಕ್ಕೆ ಏಕೀಕೃತ ಗುರುತನ್ನು ಸಂಕೇತಿಸುವ ಭಾರತ್‌ ಸ್ಟೀಲ್ ಲೋಗೋ ಮತ್ತು ಭಾರತ್ ಸ್ಟೀಲ್ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದ ಸಚಿವರು; ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸೂವಿಕೆಯನ್ನು ಕನಿಷ್ಠ ಮಟ್ಟಕ್ಕೆ ತಂದಿರುವ ಹಾಗೂ ಉಕ್ಕು ಉತ್ಪಾದನಾ ಮಾನದಂಡಗಳ ಗುರಿಯನ್ನು ಸಾಧಿಸಿದ ಉದ್ಯಮದ ನಾಯಕರಿಗೆ ಗೌರವಿಸಿದರು.

Tags: # hdkumaraswamyBJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕರ್ನಾಟಕ ಸರ್ಕಾರದ ವಿನೂತನ ಯೋಜನೆ, ತೆರೆಯಲಿದೆ ಜಾಗತಿಕ ಶಿಕ್ಷಣದ ಹೆಬ್ಬಾಗಿಲು

Next Post

ಜಸ್ಟ್ ಮ್ಯಾರೀಡ್” ಟ್ರೇಲರ್ ಬಿಡುಗಡೆಯಲ್ಲಿ ಮದುವೆಮನೆ ಸಡಗರ. .

Related Posts

ನಾಯಿಯ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ: ಕಾರಣವೇನು
Top Story

ನಾಯಿಯ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ: ಕಾರಣವೇನು

by ಪ್ರತಿಧ್ವನಿ
August 19, 2026
0

ವಿರುದ್ಧ ಸಾಮಾನ್ಯವಾಗಿ ಪ್ರತಿಭಟನೆ, ಧರಣಿ, ರಸ್ತೆ ತಡೆ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸುವುದನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶಿಷ್ಟ ಪ್ರತಿಭಟನೆಯೊಂದು...

Read moreDetails
ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡ ಮೊದಲ ಪತಿ ಸಂಜಯ್ ಸಿಂಗ್ ನಿಧನ

ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡ ಮೊದಲ ಪತಿ ಸಂಜಯ್ ಸಿಂಗ್ ನಿಧನ

August 19, 2026
ಮಕ್ಕಳು, ಪ್ರವಾಸಿಗರಿಗೆ ಗುಡ್‌ನ್ಯೂಸ್‌ ಕೊಟ್ಟ ಕೆ.ಜೆ.ಜಾರ್ಜ್; ಹೇಳಿದ್ದೇನು?

ಮಕ್ಕಳು, ಪ್ರವಾಸಿಗರಿಗೆ ಗುಡ್‌ನ್ಯೂಸ್‌ ಕೊಟ್ಟ ಕೆ.ಜೆ.ಜಾರ್ಜ್; ಹೇಳಿದ್ದೇನು?

August 19, 2026
ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ ಏನು?

ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ ಏನು?

August 19, 2026
ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

August 19, 2026
Next Post
ಜಸ್ಟ್ ಮ್ಯಾರೀಡ್” ಟ್ರೇಲರ್ ಬಿಡುಗಡೆಯಲ್ಲಿ ಮದುವೆಮನೆ ಸಡಗರ. .

ಜಸ್ಟ್ ಮ್ಯಾರೀಡ್" ಟ್ರೇಲರ್ ಬಿಡುಗಡೆಯಲ್ಲಿ ಮದುವೆಮನೆ ಸಡಗರ. .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada