ಇಂಡೋ – ನೇಪಾಳ ಇನ್ವಿಟೇಷನಲ್ ಇಂಟರ್ನಾಷನಲ್ ತ್ರೋಬಾಲ್ ಚಾಂಪಿಯನ್ಶಿಪ್ 2024 – 2025 ಆವೃತ್ತಿ ನೆರೆಯ ನೇಪಾಳದಲ್ಲಿ, 28 ಡಿಸೆಂಬರ್ 2024 ರಿಂದ 2 ಜನವರಿ 2025 ವರೆಗೆ ನಡೆಸಾಲಾಗಿತ್ತು. ಈ ಟೂರ್ನಿಯಲ್ಲಿ 5 ಏಷ್ಯಾ ತಂಡಗಳು ಭಾಗವಹಿಸಿದ್ದು ಭಾರತದ ತಂಡವು ಒಂದಾಗಿತ್ತು.
ಇಲ್ಲಿ ಭಾರತದ 19 ವಯೋಮಿತಿಯ ಒಳಗಿನ ಬಾಲಕಿಯರ ತಂಡ, ಉಳಿದ ಎಲ್ಲಾ ತಂಡಗಳ ವಿರುದ್ಧ ಲೀಗ್ ಕಮ್ ನಾಕೌಟ್ ಮಾದರಿಯ ಟೂರ್ನಿಯಲ್ಲಿ ಆಟವಾಡಿ ಪ್ರಥಮ (ಚಿನ್ನ)ಸ್ಥಾನವನ್ನು ಪಡೆದು ಪಂದ್ಯಾವಳಿಯನ್ನು ಜಯಿಸಿದೆ.
ಈ ಸರಣಿಯುದ್ದಾಕೂ ಭಾರತೀಯ ಹುಡುಗಿಯರ ತಂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು. ಈ ಹಿಂದೆ ಇಂಟರ್ನಾಷನಲ್ ತ್ರೋಬಾಲ್ ಚಾಂಪಿಯನ್ಶಿಪ್ ಸೆಮಿಫೈನಲ್ ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಗೆಲುವು ಸಾಧಿಸಿ, ಆ ಮೂಲಕ ಗರ್ಲ್ಸ್ ಟೀಮ್ ಫೈನಲ್ ಮ್ಯಾಚ್ ಗೆ ಲಗ್ಗೆ ಇಟ್ಟಿತ್ತು.
ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾಮಣಿಗಳ ತಂಡ ಈ ಚೀನಾವನ್ನು ಎದುರಿಸಲು ಮುಂದಾಗಿದ್ದರು.ಇದರ ಜೊತೆಗೆ ಇಂಡೋ-ನೇಪಾಳ ಇಂಟರ್‌ನ್ಯಾಶನಲ್ ಚಾಂಪಿಯನ್‌ಶಿಪ್ 2024 ನಲ್ಲಿ 16 ವರ್ಷದೊಳಗಿನ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಜಯಶಾಲಿಯಾಗಿದ್ದಾರೆ.
ಇದೀಗ ಫೈನಲ್ ಗೆದ್ದ ವೇಳೆ ಸಂತಸ ವ್ಯಕ್ತಪಡಿಸಿದ್ದ ಕ್ರೀಡಾಪಟುಗಳು ತಮ್ಮ ತರಬೇತುದಾರರಾದ ಮಲ್ಲೇಶ್ ಸರ್ ಮತ್ತು ಮುನಿರಾಜ್ ಸರ್ ಅವರ ಅತ್ಯುತ್ತಮ ಮಾರ್ಗದರ್ಶನಕ್ಕಾಗಿ ವಿಶೇಷ ಧನ್ಯವಾದ ತಿಳಿಸಿದ್ದಾರೆ.