• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ʻಉಂಡೆನಾಮʼ ಚಿತ್ರ ವಿಮರ್ಶೆ.. ಪ್ರೇಕ್ಷಕರನ್ನ ಮತ್ತೆ ನಗಿಸಲು ಬಂದ ಕೋಮಲ್‌..!  ‌

ಪ್ರತಿಧ್ವನಿ by ಪ್ರತಿಧ್ವನಿ
April 14, 2023
in ಸಿನಿಮಾ
0
ʻಉಂಡೆನಾಮʼ ಚಿತ್ರ ವಿಮರ್ಶೆ.. ಪ್ರೇಕ್ಷಕರನ್ನ ಮತ್ತೆ ನಗಿಸಲು ಬಂದ ಕೋಮಲ್‌..!  ‌
Share on WhatsAppShare on FacebookShare on Telegram

ಬಹಳ ವರ್ಷಗಳ ನಂತರ ಸ್ಯಾಂಡಲ್‌ವುಡ್‌ ನಟ ಕೋಮಲ್‌ ಕುಮಾರ್‌ ಅಭಿನಯದ ʻಉಂಡೆನಾಮʼ  ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ʻಉಂಡೆನಾಮʼ.. ಕಾಮಿಡಿ ಕಚಗುಳಿ ಜೊತೆಗೆ ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆ ಮೆಸೇಜ್‌ ಕೊಡುವ ಸಿನಿಮಾ.

ADVERTISEMENT

ಚಿತ್ರದ ಆರಂಭದಲ್ಲೇ  ಜೈಲು ಸೇರಿರುವ ನಾಯಕ.. ನಾಯಕ ಯಾಕೆ ಜೈಲು ಪಾಲಾದ ಅಂತ ಸಿನಿಮಾವನ್ನ ಕೊನೆಯ ಹಂತದವರೆಗೂ ನೋಡಲೇ ಬೇಕು.. ಚಿಕ್ಕ ವಯಸ್ಸಿನಲ್ಲಿ ಮಗನ ಬಾಯಿ ಮುಚ್ಚಿಸೋಕೆ ತಂದೆ ಹೇಳುವ  ಮಾತು, ಆತನನ್ನೇ ಗೋಜಿಗೆ ಸಿಲುಕಿಸುವಂತೆ ಮಾಡುತ್ತೆ. ನಾಯಕ ದೊಡ್ಡವನಾದ ಮೇಲೆ ತನ್ನ ತಂದೆ ಯಾಕೆ ಆ ರೀತಿ ಹೇಳಿದ್ರು ಅಂತ ಮಗನಿಗೆ ಅರಿವಾಗುವಷ್ಟರಲ್ಲಿ, ಆತನಿಗೆ ಮದುವೆಯಾಗಬೇಕೆಂಬ ಆಸೆ ಬಂದುಬಿಡುತ್ತೆ.

ಮಾತು ಮಾತಿಗೂ  ಅಪಶಕುನದ ಮಾತುಗಳ್ನಾಡೋ ತಾಯಿ ಜೊತೆ ಹೆಣ್ಣು ನೋಡೋ ಶಾಸ್ತ್ರಕ್ಕೆ ಹೋಗ್ತಾನೆ ನಾಯಕ.. ಇನ್ನೇನು ಎಲ್ಲಾ ಓಕೆ ಅನ್ನೋ ಅಷ್ಟರಲ್ಲೇ ಮದುವೆ ಕ್ಯಾನ್ಸಲ್‌.. ತನ್ನ ಮದುವೆ ಯಾಕೆ ಕ್ಯಾನ್ಸಲ್‌ ಆಗ್ತಿದೆ ಅಂತ ಕಾರಣ ಹುಡುಕಿಕೊಂಡು ಹೊರಟ ನಾಯಕನಿಗೆ ಅಲ್ಲೊಂದು ಶಾಕ್‌ ಕಾದಿರುತ್ತೆ.. ತಂದೆಗಾಗಿ ಮದುವೆಯಾಗೋ ಆಸೆಯನ್ನೇ ಬಿಡುವ ನಾಯಕ, ಅಡ್ಡದಾರಿ ಹಿಡಿಯಲು ಹೋಗ್ತಾನೆ.

ಇರಲಾರದೆ ಇರುವೆ ಬಿಟ್ಟುಕೊಂಡ್ರು ಅನ್ನೋ ಹಾಗೆ, ಯಾವೋದೋ ಆಸೆಗೆ ಬಿದ್ದು ಪಜೀತಿಗೆ ಸಿಕ್ಕಿಹಾಕಿಕೊಳ್ತಾನೆ.. ಎಂಜಾಯ್‌ಮೆಂಟ್‌ಗೆ ಅಂತ ಬಂದ ನಾಯಕನ ಫ್ರೆಂಡ್‌ ಕೂಡ ಆತನ ಜೊತೆ ಮನೆಯಲ್ಲೇ ಲಾಕ್‌ ಆಗ್ತಾನೆ.. ಕೊರೊನಾ ಲಾಕ್‌ಡೌನ್‌ ಟೈಮ್‌ ಹೇಗಿತ್ತು ಅನ್ನೋದನ್ನ ತೋರಿಸುವುದರ ಜೊತೆಗೆ ವೀಕ್ಷಕರಿಗೆ ಮುಜುಗರವಾಗುವಂತಹ ದೃಶ್ಯಗಳೂ ಕೂಡ ಈ ಚಿತ್ರದಲ್ಲಿವೆ.

ಅಲ್ಲಲ್ಲಿ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಇದ್ದರೂ, ಕೆಲ ಡೈಲಾಗ್‌ಗಳು ಸಿನಿಪ್ರೇಕ್ಷಕರ ಮೊಗದಲ್ಲಿ ಮುಗುಳ್ನಗೆ ತರಿಸಬಹುದು. ತಾನು ಮಾಡಿದ ಯಡವಟ್ಟಿನಿಂದ ಹೊರಗೆ ಬರೋದು ಹೇಗೆ ಅಂತ ಸಿಕ್ಕಾಪಟ್ಟೆ ಸರ್ಕಸ್‌ ಮಾಡೋ ನಾಯಕ ಕೊನೆಗೆ ತಾನಾಗಿಯೇ ಸರೆಂಡರ್‌ ಆಗ್ತಾನೆ.. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕೆಲಸವನ್ನ ನಿರ್ದೇಶಕರು ಮಾಡಿದ್ದಾರೆ.

ನಟ ಕೋಮಲ್‌ ಚಿತ್ರರಂಗಕ್ಕೆ ಕಮ್‌ಬ್ಯಾಕ್‌ ಮಾಡಿರೋ ಮೊದಲ ಸಿನಿಮಾ ಅಂತ, ಬಹಳ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಸಿನಿಮಾ ನೋಡಿದ್ಮೇಲೆ ತುಸು ಬೇಸರವಾಗೋದಂತೂ ಪಕ್ಕಾ.. ಒಟ್ನಲ್ಲಿ ಅರೆಬರೆ ಕಾಮಿಡಿ ಜೊತೆಗೆ ಒಂದೆಳ್ಳೆ ಮೆಸೇಜ್‌ ಸಾರುತ್ತಾ ʻಉಂಡೆನಾಮʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ ನಟ ಕೋಮಲ್‌ ಕುಮಾರ್‌.

Tags: #sandalwood #kannadafilmindustry #undenama #release #komalkumar #review #pratidhvani #pratidhvanidigital #pratidhvaninews
Previous Post

ಯಡಿಯೂರಪ್ಪ ಆಪ್ತನ ನಿವಾಸಕ್ಕೆ ವಿ.ಸೋಮಣ್ಣ ಬೇಟಿ : ವರುಣ ಗೆಲುವಿನ ಸಂಬಂಧ ಮಹತ್ವದ ಚರ್ಚೆ

Next Post

ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ BJP ಸರ್ಕಾರ ಕೈಗೊಂಡ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ ; ಸಿದ್ದರಾಮಯ್ಯ

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
ಸಿನಿಮಾ

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

by ಪ್ರತಿಧ್ವನಿ
May 25, 2026
0

ಕನ್ನಡದ ಸೂಪರ್‌ಹಿಟ್‌ಗೆ ಮತ್ತೊಂದು ಗರಿ; ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿಗೆ ಎಂಟ್ರಿ. ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಸು ಫ್ರಮ್‌ ಸೋ’ ಇದೀಗ ಮರಾಠಿ ಭಾಷೆಗೆ ರಿಮೇಕ್‌...

Read moreDetails
ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

May 21, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
Next Post
ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ BJP ಸರ್ಕಾರ ಕೈಗೊಂಡ ನಿರ್ಧಾರ  ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ ; ಸಿದ್ದರಾಮಯ್ಯ

ಮುಸ್ಲಿಂ ಮೀಸಲಾತಿ ರದ್ದತಿ ಬಗ್ಗೆ BJP ಸರ್ಕಾರ ಕೈಗೊಂಡ ನಿರ್ಧಾರ ‘ದೋಷಪೂರಿತ’ ಮತ್ತು ‘ತಪ್ಪು ಕಲ್ಪನೆ’ ; ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada