• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಷ್ಯಾದ ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದ ಉಕ್ರೇನ್‌ನ ಡ್ರೋನ್‌; ಭಯಾನಕ ದಾಳಿಯ ವಿಡಿಯೊ ಇಲ್ಲಿದೆ

ಪ್ರತಿಧ್ವನಿ by ಪ್ರತಿಧ್ವನಿ
August 26, 2024
in Top Story, ಇತರೆ / Others, ದೇಶ
0
Share on WhatsAppShare on FacebookShare on Telegram

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಕೊನೆಗಾಣಿಸಲು ಹಲವು ದಿನಗಳಿಂದ ಪ್ರಯತ್ನ ನಡೆಯುತ್ತಲೇ ಇದೆ. ಈ ಮಧ್ಯೆ ಇಂದು (ಆಗಸ್ಟ್‌ 26) ರಷ್ಯಾದ ಬಹುಮಹಡಿ ಕಟ್ಟಡವೊಂದಕ್ಕೆ ಉಕ್ರೇನ್ ಡ್ರೋನ್‌ ಮೂಲಕ ದಾಳಿ ನಡೆಸಿದೆ (Drone Crashes). ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ADVERTISEMENT

ರಷ್ಯಾದ ಸರಟೋವ್‌ (Saratov)ನಲ್ಲಿರುವ 38 ಅಂತಸ್ತಿನ ವೋಲ್ಗಾ ಸ್ಕೈ ಅಪಾರ್ಟ್‌ಮೆಂಟ್‌ ಸಂಕೀರ್ಣ (Volga Sky apartment complex)ಕ್ಕೆ ಡ್ರೋನ್ ಅಪ್ಪಳಿಸಿದ್ದು, ಇಬ್ಬರು ಗಾಯಗೊಂಡು ಮನೆಗಳಿಗೆ ಹಾನಿಯಾಗಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಸದ್ಯ ಡ್ರೋನ್‌ ಕಟ್ಟಡಕ್ಕೆ ಅಪ್ಪಳಿಸುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

BREAKING: Watch the moment a drone crashes into the 38-story Volga Sky residential complex, the tallest building in the city

📌#Saratov | #Russia#Ukraine #Russia #drone #droneattack

🎥 : MASH pic.twitter.com/op17BFrqc0

— DISASTER TRACKER (@DisasterTrackHQ) August 26, 2024

ಸರಟೋವ್‌ನಲ್ಲಿರುವ 38 ಅಂತಸ್ತಿನ ವೋಲ್ಗಾ ಸ್ಕೈ ವಸತಿ ಸಂಕೀರ್ಣ ನಗರದ ಅತ್ಯಂತ ಎತ್ತರದ ಕಟ್ಟಡವಾಗಿದೆ. 2011ರ 9/11ರಂದು ಅಮೆರಿಕದಲ್ಲಿ ನಡೆದ ದಾಳಿಯನ್ನು ನೆನಪಿಸುವ ಈ ಘಟನೆ ಸದ್ಯ ಸಂಚಲನ ಮೂಡಿಸಿದೆ. ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳಿಂದ ನಾಶವಾದ ಡ್ರೋನ್‌ಗಳಿಂದ ಬಿದ್ದ ಅವಶೇಷಗಳಿಂದ ಸರಟೋವ್ ನಗರದ ವಸತಿ ಸಂಕೀರ್ಣಕ್ಕೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ರೋಮನ್ ಬಸುರ್ಗಿನ್ ತಿಳಿಸಿದ್ದಾರೆ. ‘ಘಟನೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಬಸುರ್ಗಿನ್ ಹೇಳಿದ್ದಾರೆ.

🇺🇦#Ukraine 🇷🇺#Russia #Saratov #Engels #UkraineRussiaWar️️ #UkraineWar #UAV

Russian media reports that at least twenty cars were damaged when a drone flew into the 38-story Volga Sky residential complex in the city of Engels in the Saratov region.

The attack began at… pic.twitter.com/S9eRX8dbxQ

— 🛰️ Wars and news 🍉 (@EUFreeCitizen) August 26, 2024

ರಷ್ಯಾ ಹೇಳಿದ್ದೇನು?ಉಕ್ರೇನ್ ಗಡಿಯಿಂದ ಸುಮಾರು 900 ಕಿಲೋ ಮೀಟರ್ ದೂರದಲ್ಲಿರುವ ಸರಟೋವ್ ಪ್ರದೇಶದ ಮೇಲೆ ಹಾರಾಡುತ್ತಿದ್ದ 9 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಸರಟೋವ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ ಎಂದು ರಷ್ಯಾದ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ. 2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್‌ ಯುದ್ದ ಆರಂಭವಾಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿವೆ.

Engels and Saratov were reportedly attacked by drones this morning. So far, reports indicate damaged buildings and at least 20 vehicles. One of the drones crashed into the tallest high-rise building in Saratov, falling about 12 kilometers short of the Engels military airfield. pic.twitter.com/cjsmedAqf3

— NOELREPORTS 🇪🇺 🇺🇦 (@NOELreports) August 26, 2024

ಉತ್ತರ, ಪೂರ್ವ ಮತ್ತು ದಕ್ಷಿಣ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಕನಿಷ್ಠ 4 ಮಂದಿ ಸಾವನ್ನಪ್ಪಿದ್ದಾರೆ ಮತ್ತು 37 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಮತ್ತು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ ನಂತರ ಇಂದು ಈ ಡ್ರೋನ್‌ ದಾಳಿ ನಡೆದಿವೆ.ರಷ್ಯಾದ ನ್ಯೂಸ್ ಶಾಟ್ ಚಾನೆಲ್ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ದಾಳಿಗೊಳಗಾದ ಸರಟೋವ್‌ನ ಎತ್ತರದ ವಸತಿ ಕಟ್ಟಡ ಸ್ಪಷ್ಟವಾಗಿ ಕಂಡು ಬಂದಿದ್ದು, ಹಾನಿಗೊಳಗಾದ ಭಾಗ ಮತ್ತು ಮೂರು ಮಹಡಿಗಳಲ್ಲಿ ಹಲವು ಕಿಟಕಿಗಳು ಹಾರಿಹೋಗುತ್ತಿರುವುದು ಗುರುತಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸದ್ಯ ಉಕ್ರೇನ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags: attacked by dronesEngels military airfield.Russian
Previous Post

ಅಪರಾಧಿಕ ಚೌಕಟ್ಟಿನಲ್ಲಿ ಲಿಂಗತ್ವ ಸೂಕ್ಷ್ಮತೆ ಹುಡುಕಾಟ

Next Post

‘ಪರಪ್ಪನ ಅಗ್ರಹಾರ’ ಜೈಲಿನಲ್ಲಿರುವ ಖೈದಿಗಳಿಗೆ ‘ಪಂಚತಾರ ವ್ಯವಸ್ಥೆ’ ಇದೆ: HDK ಗಂಭೀರ ಆರೋಪ

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
Next Post

'ಪರಪ್ಪನ ಅಗ್ರಹಾರ' ಜೈಲಿನಲ್ಲಿರುವ ಖೈದಿಗಳಿಗೆ 'ಪಂಚತಾರ ವ್ಯವಸ್ಥೆ' ಇದೆ: HDK ಗಂಭೀರ ಆರೋಪ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada