ರಷ್ಯಾ Vs ಉಕ್ರೇನ್ ಬಿಕ್ಕಟ್ಟು ತಾರಕಕ್ಕೇರಿದ್ದು, ರಷ್ಯಾದ ಸೇನೆಯೂ ರಾಜಧಾನಿ KYIVಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಇತ್ತ ಉಕ್ರೇನ್ನ ಅಧ್ಯಕ್ಷ Volodymyr Zelenskyನಾವು ಆದಷ್ಟು ಬೇಗ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಉಕ್ರೇನ್ನ ಆರೋಗ್ಯ ಸಚಿವ ಮಾತನಾಡಿ ಇಲ್ಲಿಯವರೆಗೂ ಒಟ್ಟು 198 ನಾಗರೀಕರನ್ನು ರಷ್ಯಾ ಕೊಂದಿದೆ ಎಂದು ಹೇಳಿದ್ದಾರೆ.
ಇಲ್ಲಿದೆ ಪ್ರಮುಖ 10 ಅಂಶಗಳು
1) ಉಕ್ರೇನ್ ಮೇಲೆ ರಷ್ಯಾದ ಹಿಡಿತ ಜಾಸ್ತಿಯಾಗುತ್ತಿದ್ದು ಈ ಕುರಿತು ಫ್ರೆಂಚ್ ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರಾನ್ ಜೊತೆ ಉಕ್ರೇನ್ನ ಅಧ್ಯಕ್ಷ ಇಂದು ಬೆಳ್ಳಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬರುತ್ತಿವೆ ಮತ್ತು ಸೇನೆ ತನ್ನ ಕೆಲಸವನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
2) ಉಕ್ರೇನ್ ಮೇಲೆ ರಷ್ಯಾದ ಆಕ್ರಮನವನ್ನು ಖಂಡಿಸಿರುವ UN ಭದ್ರತಾ ಕರಡು ನಿರ್ಣಯದಿಂದ ಉಕ್ರೇನ್ ಮೇಲೆ ಮತ್ತಷ್ಟು ದಾಳಿ ತೀವ್ರವಾಗಬಹುದು. 15 ಸದಸ್ಯರ ಸಭೆಯಲ್ಲಿ ನಡೆದ ಮತದಾನದ ವೇಳೆ 11 ಮಂದಿ ಈ ನಿರ್ಣಯ ಅಂಗೀಕಾರಕ್ಕೆ ಮತ ಹಾಕಿದ್ದವು. ಚೀನಾ, UAE ಹಾಗೂ ಭಾರತ ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದವು.

3) ಮುಂಜಾನೆ ಉಕ್ರೇನ್ ರಾಜಧಾನಿ KYIVಯನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯಲು ರಷ್ಯಾದ ಸೇನೆ ಯತ್ನಿಸಿತ್ತು. ಆದರೆ, ಉಕ್ರೇನ್ ಸೈನಿಕರು ಶತ್ರು ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತ್ತು ಎಂದು ಉಕ್ರೇನ್ನ ಅಧ್ಯಕ್ಷ ಹೇಳಿದ್ದಾರೆ. ನಾಗರೀಕರು ಸಹ ರಷ್ಯಾದ ವಿರುದ್ದ ಯುದ್ದದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ದೇಶಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಮತ್ತು ರಷ್ಯಾದ ಬಂಡುಕೋರರು ಇಲ್ಲಿಯವರೆಗೂ 198 ನಾಗರೀಕರನ್ನು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.
4) ಉಕ್ರೇನ್ನ ಸೇನೆ ತೀವ್ರ ಪ್ರತಿರೋಧವನ್ನು ತೋರುತ್ತಿದೆ ಮತ್ತು ರಷ್ಯಾ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ಬರ್ಗ್ ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ.
5) ಉಕ್ರೇನಿನ ಅಧ್ಯಕ್ಷ ತಾವು ರಾಜಧಾನಿಯನ್ನು ಉಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. US ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ನಡೆಯನ್ನು ಖಂಡಿಸಿರುವ ಕುರಿತು ತೀವ್ರ ಸಂತಸವನ್ನು ವ್ಯಕ್ತ ಪಡಿಸಿರುವ ಅವರು ಜಗತ್ತು ಉಕ್ರೇನ್ನೊಂದಿಗೆ ಇದೆ ಮತ್ತು ಜಯ ನಮ್ಮದೆ ಆಗಿರುತ್ತದೆ ಎಂದು ಪುನರುಚ್ಚರಿಸಿದ್ದಾರೆ.
6) ಇದಕ್ಕೂ ಮೊದಲು ಉಕ್ರೇನ್ನ ಅಧ್ಯಕ್ಷರು ಹಾಗೂ ರಷ್ಯಾದ ಅಧ್ಯಕ್ಷ ಇಬ್ಬರು ಮಾತುಕತೆಗೆ ಸಿದ್ದರಿದ್ದು ಸ್ಥಳ ಮತ್ತು ಸಮಯದ ಕುರಿತು ಚರ್ಚಿಸುತ್ತಿದ್ದಾರೆ ಎಂದು ಉಕ್ರೇನ್ನ ಅಧ್ಯಕ್ಷರ ವಕ್ತಾರ ನೈಕಿಪೊರೊವ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
7) ಕ್ರೆಮ್ಲಿನ್ ಶುಕ್ರವಾರದಂದು ಬೆಲರೂಸಿಯನ್ ರಾಜಧಾನಿ MINSKನಲ್ಲಿ ಉಭಯ ದೇಶದ ಅಧಿಕಾರಿಗಳು ಭೇಟಿ ಮಾಡಲು ಇಚ್ಚಿಸಿದ್ದಾರೆ. ಆದರೆ, ಉಕ್ರೇನ್ Warsawವನ್ನು ಬದಲಿ ಸ್ಥಳವನ್ನಾಗಿ ಪ್ರಸ್ತಾಪಿಸಿದೆ ಇದರ ಪರಿಣಾಮವಾಗಿ ಉಭಯ ದೇಶಗಳ ನಡುವಿನ ಕಂದಕ ಮತ್ತಷ್ಟು ಜಾಸ್ತಿಯಾಗತೊಡಗಿದೆ. ಉಕ್ರೇನ್ ಶಾಂತಿಯ ಕಾಪಾಡುವುದಕ್ಕೆ ಸಿದ್ದವಿದೆ ಎಂದು ನೈಕಿಪೊರೊವ್ ತಿಳಿಸಿದ್ದಾರೆ.

8) US ವಕ್ತಾರ ನೆಡ್ಪ್ರೈಸ್ ಮಾತನಾಡಿ ರಷ್ಯಾದ ಜೊತೆಗೆ ಉಕ್ರೇನ್ನ ರಾಜತಾಂತ್ರಿಕ ಮಾತುಕತೆ “at the barrel of a gun” ಎಂದು ಬಣ್ಣಿಸಿದ್ದಾರೆ. ಮಾತುಕತೆ ಬಗ್ಗೆ ರಷ್ಯಾ ಗಂಭೀರವಾಗಿ ಚಿಂತೆ ನಡೆಸಿದ್ದರೆ ಮೊದಲು ತನ್ನ ಸೇನೆಯನ್ನು ಆಕ್ರಮಣ ಮಾಡದಂತೆ ಸೂಚಿಸುತ್ತಿತ್ತು ಎಂದು ಹೇಳಿದ್ದಾರೆ.
9) ಉಕ್ರೇನ್ ಮೇಲೆ ಆಕ್ರಮಣದಿಂದಾಗಿ ರಷ್ಯಾದ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವರನ್ನು US ಹಾಗೂ ಯೂರೋಪಿಯನ್ ಯೂನಿಯನ್ ಕಪ್ಪುಪಟ್ಟಿಗೆ ಸೇರಿಸಿದ್ದು ಅವರುಗಳು ಕ್ಲೆಮಿನ್ ಮೇಲೆ ಒತ್ತಡ ತಂತ್ರವನ್ನ ಹೆಚ್ಚಿಸಲು ಯತ್ನಿಸುತ್ತಿದ್ದಾರೆ.
10) ಇದುವರೆಗೂ ಉಕ್ರೇನ್ ತೋರಿರುವ ಪ್ರತಿರೋಧದಲ್ಲಿ ರಷ್ಯಾದ 1,000 ಮಂದಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಹೇಳಿದೆ. ಆದರೆ, ರಷ್ಯಾದ ವತಿಯಿಂದ ಯಾವುದೇ ಅಂಕಿ ಅಂಶ ಇನ್ನು ಬಿಡುಗಡೆಯಾಗಿಲ್ಲ. ರಷ್ಯಾದ 25 ನಾಗರೀಕರು ಸಾವನಪ್ಪಿದ್ದು, 102 ಮಂದಿ ಗಾಯಗೊಂಡಿದ್ದಾರೆ. ರಷ್ಯಾವು ಅಂಕಿ ಅಂಶಗಳ ವಿಷಯಕ್ಕೆ ಬಂದರೆ ಕಡಿಮೆ ತೋರಿಸುತ್ತದೆ ಎಂದು US ಅಂದಾಜಿಸಿದೆ.