ಬೆಂಗಳೂರು : ಜಿಂಬಾಬ್ವೆಯ ಪರಾರೆಯಲ್ಲಿ ನಡೆದ ಅಂಡರ್-19 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಇಂದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಯುವ ಭಾರತ ತಂಡ ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಇಂಗ್ಲೆಂಡ್ ತಂಡವನ್ನು 100 ರನ್ಗಳಿಂದ ಸೋಲಿಸುವ ಮೂಲಕ ಆಯುಷ್ ಮಾತ್ರೆ ನೇತೃತ್ವದ ತಂಡ ಇಂಗ್ಲೆಂಡ್ಗೆ ದೊಡ್ಡ ಆಘಾತ ನೀಡಿದೆ.

ಭಾರತ ಪರ ನಾಯಕ ಆಯುಷ್ ಮ್ಹಾತ್ರೆ 53 ರನ್ ಗಳಿಸಿದರೇ, ಅಭಿಗ್ಯಾನ್ ಕುಂಡು 40, ಕನಿಷ್ಕ್ ಚೌಹಾಣ್ ಅಜೇಯ 37 ಮತ್ತು ವೇದಾಂತ್ ತ್ರಿವೇದಿ 32 ರನ್ ಗಳಿಸಿದರು. ಜೇಮ್ಸ್ ಮಿಂಟೊ ಇಂಗ್ಲೆಂಡ್ ಪರ ಮೂರು ವಿಕೆಟ್ ಪಡೆದರು.
ಇದನ್ನೂ ಓದಿ : ನನ್ನ ಹೃದಯ ಒಡೆದು ಹೋಗಿದೆ ಎಂದ ಶಶಿ ತರೂರ್ ಪುತ್ರ: ಆಗಿದ್ದಾದರೂ ಏನು ?
ಟೀಮ್ ಇಂಡಿಯಾದ ಯಂಗ್ ಟೈಗರ್ ವೈಭವ್ ಸೂರ್ಯವಂಶಿ ಫೈನಲ್ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತನ್ನ ನಿಗದಿತ 50 ಓವರ್ಗಳಲ್ಲಿ ಒಂಬತ್ತು ವಿಕೆಟ್ಗಳ ನಷ್ಟಕ್ಕೆ 411 ರನ್ ತೆಕ್ಕೆಗೆ ಪಡೆಯಿತು. ಇದಕ್ಕೆ ಪ್ರತಿಯಾಗಿ, ಇಂಗ್ಲೆಂಡ್ ತಂಡ 40.2 ಓವರ್ಗಳಲ್ಲಿ 311 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ 100 ರನ್ಗಳ ಬೃಹತ್ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿದೆ.






