ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿ ಅರಮನೆ ಮೈದಾನದಲ್ಲಿ ಇಂದು ಯೋಗಾಭ್ಯಾಸ ಮಾಡಿ ನಂತರ ಮೈಸೂರು ರಾಜಮನೆತನದ ಜೊತೆ ಪ್ರಧಾನಿ ಮೋದಿ ಅರಮನೆಯಲ್ಲಿ ಉಪಹಾರ ಸೇವನೆ ಮಾಡಿ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಹೌದು, ಇಂದು ಬೆಳಿಗ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಮೈದಾನದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದ್ದಾರೆ. ಬಳಿಕ ಮೈಸೂರಿನ ವಸ್ತು ಸಂಗ್ರಹಾಲ ಕೇಂದ್ರ ಉದ್ಘಾಟನೆ ಮಾಡಿದ್ದಾರೆ. ಬಳಿಕ ಅರಮನೆಯಲ್ಲಿ ರಾಜವಂಶಸ್ತರ ಜೊತೆ ಉಪಾಹಾರ ಸೇವನೆ ಮಾಡಿ ಏರ್ ಪೋರ್ಟ್ ಗೆ ತೆರಳಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ತನ್ನ ಎರಡು ದಿನಗಳ ಕರ್ನಾಟಕ ಪ್ರವಾಸ ಮುಗಿಸಿ ಇಂದು ದೆಹಲಿಗೆ ಹೊರಟಿದ್ದಾರೆ.