ಪಂಜಾಬ್ : ರೈತ ದೇಶದ ಬೆನ್ನೆಲುಬು ಅನ್ನೋದ್ರಲ್ಲಿ ಎರಡು ಮಾತಿಲ್ಲ.ಇಲ್ಲಿ ಇಬ್ಬರು ರೈತರ ಹೆಣ್ಣು ಮಕ್ಕಳು ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಒಂದೇ ದಿನ ಇಬ್ಬರು ರೈತರ ಪುತ್ರಿಯರು ಐಎಎಫ್ಗೆ ನೇಮಕಗೊಂಡಿರೋದು ವಿಶೇಷವಾಗಿದೆ.
ಮೊಹಾಲಿಯಲ್ಲಿರುವ ಬಾಲಕಿಯರ ಮೈ ಭಾಗೋ ಆರ್ಮ್ಡ್ ಫೋರ್ಸಸ್ ಪ್ರಿಪರೇಟರಿ ಇನ್ಸ್ಟಿಟ್ಯೂಟ್ನ ಹಳೆಯ ವಿದ್ಯಾರ್ಥಿಗಳಾದ ಇವ್ರಾಜ್ ಕೌರ್ ಹಾಗೂ ಫ್ರಭಾಸಿಮ್ರಾನ್ ಕೌರ್ರನ್ನು ದುಂಡಿಗಲ್ ಮತ್ತು ಹೈದರಬಾದ್ನಲ್ಲಿರುವ ಏರ್ಫೋರ್ಸ್ ಅಕಾಡೆಮಿಯಿಂದ ಫ್ಲೈಯಿಂಗ್ ಆಫೀಸರ್ಗಳಾಗಿ ನಿಯೋಜಿಸಲಾಗಿದೆ.
ಪಂಜಾಬ್ನ ರೂಪನಗರ ಜಿಲ್ಲೆಯ ರೈತ ಜಸ್ಪ್ರಿತ್ ಸಿಂಗ್ರ ಪುತ್ರಿ ಫ್ಲೈಯಿಂಗ್ ಆಫೀಸರ್ ಇವ್ರಾಜ್ ಹೆಲಿಕಾಪ್ಟರ್ ಪೈಲಟ್ ಆಗಿ ಫ್ಲೈಯಿಂಗ್ ಬ್ರಾಂಚ್ಗೆ ಸೇರಿದ್ದಾರೆ, ಇತ್ತ ಗುರುದಾಸ್ಪುರ ಜಿಲ್ಲೆಯ ರೈತ ಪರಮ್ಜಿತ್ ಸಿಂಗ್ ಪುತ್ರಿ ಫ್ಲೈಯಿಂಗ್ ಆಫೀಸರ್ ಪ್ರಭಾಸಿಮ್ರಾನ್ ಐಎಎಫ್ನ ಶಿಕ್ಷಣ ಶಾಖೆಗೆ ಸೇರಿದ್ದಾರೆ.