ಗಾಂಧಿನಗರ: ಮೂರು ಮಗು ಹೆತ್ತಿದ್ದಕ್ಕೆ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು ಅನರ್ಹಗೊಂಡಿರುವ ಘಟನೆ ನಡೆದಿದೆ.
ಗುಜರಾತ್‌ನ (Gujrat) ಅಮೇಲಿ ಜಿಲ್ಲೆಯ ದಾಮ್ ನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು ಅನರ್ಹಗೊಂಡಿರುವವರು. ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅನರ್ಹಗೊಂಡ ಬಿಜೆಪಿ ಸದಸ್ಯರು ಎನ್ನಲಾಗಿದೆ. ಗುಜರಾತ್ ಮುನ್ಸಿಪಾಲಿಟಿ ಆಕ್ಟ್ 1963 (Gujarat Municipalities Act, 1963) ನ್ನು ಉಲ್ಲಂಘಿಸಿ ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ಅಮ್ರೇಲಿ ಜಿಲ್ಲಾಧಿಕಾರಿ ಅಜಯ್ ದಹಿಯಾ ಕಚೇರಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಅಮೇಲಿ ಜಿಲ್ಲಾಧಿಕಾರಿಗೆ ಈ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ಸಂಗ್ರಹಿಸಿ, ಕ್ರಮ ಕೈಗೊಂಡಿದ್ದಾರೆ.
2005-06 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು (Narendra Modi) 1963ರ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಿದ್ದರು.