
ಪೊನ್ನಂಪೇಟೆಯ ಗಣಪತಿ ನಗರದ ಸಮೀಪ ಇರುವ ಪ್ರಗತಿ ನಗರದಲ್ಲಿ ಇಂದು ಬೆಳಿಗ್ಗೆ ಮಾರುತಿ ಕಾರು ಹಾಗೂ ಬೈಕಿನಲ್ಲಿ 75 ಕೆಜಿ ಯಷ್ಟು ದನದ ಮಾಂಸವನ್ನು ತಂದು ಆ ಭಾಗದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಾರ್ವಜನಿಕರು ಅವರನ್ನು ಹಿಡಿದು ಪೊನ್ನಂಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರಿನಲ್ಲಿ ಅಂದಾಜು 60 ಕೆಜಿ ಹಾಗೂ ಬೈಕಿನಲ್ಲಿ 12 ಕೆಜಿ ದನದ ಮಾಂಸವನ್ನು, ಪತ್ತೆ ಹಚ್ಚಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಿರಾಜಪೇಟೆಯಿಂದ ಪೊನ್ನಂಪೇಟೆಗೆ ಈ ಗೋಮಾಂಸ ಸರಬರಾಜು ಆಗುತ್ತಿತ್ತು ಎಂದು ಹೇಳಲಾಗಿದೆ. ಪೊನ್ನಂಪೇಟೆ ಭಾಗದಲ್ಲಿ ಯಥೇಚ್ಛವಾಗಿ ದನದ ಮಾಂಸ ಮಾರಾಟ ಎಗಿಲ್ಲದೆ ನಡೆಯುತ್ತಿದೆ ಎಂದು ಸಾರ್ವಜನಿಕರು ಹಲವು ಬಾರಿ ಧೂರಿಕೊಂಡಿದ್ದರು.










