ಬೆಂಗಳೂರು:ಮಾ.18: ಗೋವಿಂದರಾಜ ನಗರ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ವಿಫ್ಟ್ ಕಾರಿನಲ್ಲಿ ಬಿಜೆಪಿ ಕಡೆಯವರು ಪೆಟ್ರೋಲ್ ತಂದಿದ್ದರು ಎಂಬ ಆರೋಪ ಕೇಳಿಬಂದಿದೆ.

ಎರಡು ಕಡೆಯ ಕಾರ್ಯಕರ್ತರ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆಯಲ್ಲಿ ವ್ಯಕ್ತಿಯೊಬ್ಬನು ಪೆಟ್ರೋಲ್ ಕ್ಯಾನ್ ಹಿಡಿದಿರುವ ದೃಶ್ಯ ಮೊಬೈನಲ್ಲಿ ಸೆರೆಯಾಗಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಲು ಪೆಟ್ರೋಲ್ ತಂದಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಸದ್ಯ ಗಲಾಟೆ ವೇಳೆ ಪೆಟ್ರೋಲ್ ತಂದಿದ್ದರು ಎಂಬುದಕ್ಕೆ ಇಂಬು ನೀಡುವ ವಿಡಿಯೋ ಒಂದು ಲಭ್ಯವಾಗಿದ್ದು, ಕಾರಿನಲ್ಲಿದ್ದ ಎರಡು ಪೆಟ್ರೋಲ್ ತುಂಬಿದ್ದ ಕ್ಯಾನ್ ಗಳಿದ್ದವು ಎಂದು ಆರೋಪಿಸಿದ್ದಾರೆ.. ಈ ಪೆಟ್ರೋಲ್ ಕ್ಯಾನ್ ಗಳು
ಯಾರಿಗೆ ಸೇರಿದ್ದು ತಿಳಿದು ಬಂದಿಲ್ಲ. ಗಲಾಟೆ ನಡೆಯುತ್ತಿರುವ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾನ್ ಹಿಡಿದು ಓಡಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ..