ಬೆಂಗಳೂರು: ವೈಟ್ ಫೀಲ್ಡ್ ನಲ್ಲಿ ಬಾಲಕಿ ಕೊಲೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಕೊಲೆ ಪ್ರಕರಣ ತನಿಖೆ ವೇಳೆ ಮೃತ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬಾಲಕಿಯನ್ನ ಕೊಲೆ ಮಾಡಿದ್ದ ಯುಸೂಫ್ ಮೀರ್ ನನ್ನ ವೈಟ್ ಫಿಲ್ಡ್ ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆ ವೇಳೆ ಬಾಲಕಿ ಮೇಲೆ ತಾನು ಅತ್ಯಾಚಾರ ನಡೆಸಿದ್ದೆ ಎಂಬ ವಿಚಾರವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.
ಬಾಲಕಿ ತಾಯಿ ಜೊತೆಗೆ ಜಗಳ ಮಾಡಿದ್ದ ಯೂಸಫ್
ನಂತರ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಪ್ಲಾಸ್ಟಿಕ್ ವೈರ್ ಬಳಸಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ. ಅಷ್ಟಲ್ಲದೇ
ಕೊಲೆ ಮಾಡಿ ಪ್ಲಾಸ್ಟಿಕ್ ಚೀಲ ಒಂದಕ್ಕೆ ಹಾಕಿ ರಸ್ತೆ ಬದಿ ಚರಂಡಿಗೆ ಬಿಸಾಕಿ ಎಸ್ಕೇಪ್ ಆಗಿದ್ದ. ಬಾಲಕಿ ನಾಪತ್ತೆಯಾಗಿ ಒಂದು ದಿನದ ಬಳಿಕ ಪೋಷಕರು ದೂರು ನೀಡಿದ್ದರು. ದೂರು ಪಡೆದು ಕೆಲವೇ ಘಂಟೆಗಳಲ್ಲಿ ಬಾಲಕಿ ಮೃತದೇಹ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಕೊಲೆ ಮಾತ್ರ ನಡೆದಿರುವುದು ಕಂಡುಬಂದಿತ್ತು. ಆದರೆ ತನಿಖೆ ವೇಳೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಬಯಲಾಗಿದೆ.
ಸದ್ಯ ಆರೋಪಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಿ ಕರೆತಂದು ವಿಚಾರಣೆ ನಡೆಸಲಾಗ್ತಿದೆ. ಇನ್ನು ವಿಚಾರಣೆ ವೇಳೆ ಈತನ ಮೇಲೆ ಪ.ಬಂಗಾಳದಲ್ಲಿ ಒಂದು ಪೋಕ್ಸೋ ಮತ್ತೊಂದು ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿರುವುದು ಗೊತ್ತಾಗಿದೆ.











