• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಡಿಕೆಶಿಗೆ ತಿರುಗೇಟು ಕೊಟ್ಟ ತುಮಕೂರು ಸಂಸದರು ಹಾಗು ಶಾಸಕ..!!

ಪ್ರತಿಧ್ವನಿ by ಪ್ರತಿಧ್ವನಿ
June 1, 2025
in ಇದೀಗ, ಕರ್ನಾಟಕ, ರಾಜಕೀಯ
0
ಡಿಕೆಶಿಗೆ ತಿರುಗೇಟು ಕೊಟ್ಟ ತುಮಕೂರು ಸಂಸದರು ಹಾಗು ಶಾಸಕ..!!
Share on WhatsAppShare on FacebookShare on Telegram
ADVERTISEMENT

ಹೇಮಾವತಿ ಲಿಂಕ್ ಕೆನಾಲ್ ವಿವಾದದ ಬಗ್ಗೆ ಬೀದರ್​ನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿ, ರೈತರ ಹಿತ ಕಾಪಾಡುತ್ತೇವೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ತುಮಕೂರು ಸಂಸದರೂ ಆಗಿರುವ, ಕೇಂದ್ರ ಸಚಿವ ವಿ.ಸೋಮಣ್ಣ, ಡಿಕೆ ಶಿವಕುಮಾರ್ ಪಾದಕ್ಕೆ ಕೋಟಿ‌ ನಮಸ್ಕಾರ ಮಾಡಿ ಬಿಡ್ತೀನಿ. ಶಿವಕುಮಾರ್ ಹೀಗ್ಯಾಕೆ ಆದ್ನೋ ಗೊತ್ತಿಲ್ಲ. ಯಾತಕ್ಕಾಗಿ ಈ ರೀತಿ ಗಂಟು ಬಿದ್ದಿದ್ದಾನೋ ಗೊತ್ತಿಲ್ಲ, ತುಮಕೂರು ಜನ ಮುಗ್ದರು. ನನಗೋಸ್ಕರ ಆದ್ರೂ ಅದನ್ನ ಬದಲಾವಣೆ ಮಾಡಿಕೊಳ್ಳುವಂತೆ ಹೇಳಿದ್ದೆ. ಬೇರೆಯವರು ಮಾಡಿದ್ದಾರೆ, ಅವರು ಹೆಸರು ಇರೋದಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ, ಹೀಗೆ ಆಗಬಾರದು ಎಂದಿದ್ದಾರೆ.

ಹೇಮಾವತಿ ಜಲಾಶಯದಿಂದ ತುಮಕೂರಿಗೆ 1200 ಕ್ಯೂಸೆಕ್ ನೀರನ್ನ ಹಂಚಿಕೆ ಮಾಡಿದ್ದು, ಜಿಲ್ಲೆಯ 5 ತಾಲ್ಲೂಕುಗಳಿಗೆ ಹಂಚಿಕೆಯಾಗಿದೆ. ತುಮಕೂರು ಜನ ಹೇಗೋ ನೆಮ್ಮದಿಯಿಂದ ಅವರ ಕೆಲಸ ಮಾಡ್ಕೊಂಡು ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ನಾವ್ಯಾಕೆ ಹುಳಿ ಹಿಂಡಬೇಕು..? ಎಂದು ಸಚಿವರು ಪ್ರಶ್ನಿಸಿದ್ದಾರೆ. ಇನ್ನೊಂದು ಹೊಸ ಲೈನ್ ಮಾಡ್ಕೊಂಡು ಹೋಗು ನೀನೇ ಮಹಾರಾಜ. ನೀನೇ ಉಪ ಮುಖ್ಯಮಂತ್ರಿ ಇದ್ದೀಯಾ, ಬೇಕಾದ್ರೆ ಇನ್ನೊಂದು ಚೇರ್ ಹಾಕಿಕೋ ಬೇಡ ಎನ್ನುವುದಿಲ್ಲ. ಆದ್ರೆ, ಬಡ ಜನರಿಗೆ ತೊಂದರೆ‌ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಹೇಮಾವತಿ, ಆಲಮಟ್ಟಿ, ಕೃಷ್ಣಾ ಯಾವುದಾದರಿಂದಾರೂ ನೀರು ತೆಗೆದುಕೊಂಡು ಹೋಗಿ ಎಂದಿರುವ ಸೋಮಣ್ಣ, ಈಗ ಮಾಡಿರುವುದಕ್ಕೆ ತೊಂದರೆ‌ ಕೊಡಬೇಡಿ ಅಂತಾ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ‌ ಕೈಮುಗಿದು ಮನವಿ ಮಾಡಿದ ಸಚಿವ ವಿ.ಸೋಮಣ್ಣ, ತುಮಕೂರು ಜನರಿಗೆ ತೊಂದರೆ ಮಾಡದಂತೆ ಮನವಿ ಮಾಡಿದ್ದಾರೆ.

ರಾಮನಗರದ ಮಾಗಡಿಗೆ ನೀರು ತೆಗೆದುಕೊಂಡು ಹೊಗುವ ವಿಚಾರವಾಗಿ ಗುಬ್ಬಿ ಶಾಸಕ ಶ್ರೀನಿವಾಸ್ ಮಾತನಾಡಿ, ಎಲ್ಲೆಲ್ಲಿಗೆ ಎಷ್ಟು ಎಷ್ಟು ಅಲೋಕೇಷನ್ ಆಗಿದೆಯೋ ಆ ವಿಚಾರವನ್ನು ಇಲ್ಲಿ ಮಾತನಾಡೊದು ಅಪ್ರಸ್ತುತ.. ನೀರು ತೆಗೆದುಕೊಂಡು ಹೋಗೊದಕ್ಕೆ ನಮಗೇನು ವಿರೋಧ ಇಲ್ಲ.. ಅಲ್ಲಿರೋರು ರೈತರು ನಮ್ಮವರೇ.. ಯೋಜನೆ ಮಾಡಿ ಬೇಡ ಎನ್ನೊಲ್ಲ.. ವ್ಯವಸ್ಥಿತವಾಗಿ ಯಾವ ರೀತಿ ಮಾಡಬೇಕೊ ಆ ರೀತಿ ಮಾಡಿ.. ಇರೋ ರೈತರಿಗೆಲ್ಲಾ ತೊಂದರೆ ಕೊಡೊದು ಸರಿಯಲ್ಲ.. ಪೈಪ್ ಲೇನ್ ಮುಂಖಾತರ ತಗೊಂಡು ಹೊಗೊದ್ರಿಂದ.. ಎಷ್ಟು ನೀರು ಡ್ರಾ ಆಗುತ್ತೇ ಅಂತ ಯಾರಿಗೂ ಗೊತ್ತಾಗೊದಿಲ್ಲ ಎಂದಿದ್ದಾರೆ.

ಅದರಿಂದ ಈ ಯೋಜನೆ ಮಾಡೊದು ಸರಿ ಇಲ್ಲ ಎಂದಿರುವ ಶಾಸಕ ಶ್ರೀನಿವಾಸ್​, ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು ಆಗಿರುವ ವಿಚಾರವಾಗಿ ಮಾತನಾಡಿ ನನಗೆ ಎಫ್ಐಆರ್ ಆಗೊದ್ರ ಬಗ್ಗೆ ಗೊತ್ತಿಲ್ಲ.. ಇದುವರೆಗೂ ನಾನು ತಿಳಿದುಕೊಳ್ಳಲು ಹೋಗಿಲ್ಲ.. ನಿನ್ನೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೊಗಿದ್ದೆ. ಅದಕ್ಕೆ ಇನ್ವಲ್ಮೆಂಟ್ ಆಗೊಕೆ ಆಗಿಲ್ಲ.. ಗೊರೂರ್ ಡ್ಯಾನಿಂದ ತುಮಕೂರಿನವರೆಗೆ ನೀರು ಹರಿಯುತ್ತೇ ಇನ್ನು ಮುಂದಕ್ಕೆ ಹರಿಯಲ್ವಾ..? ಇದರಲ್ಲಿ ಹಟಮಾಡೊದು ಒಳ್ಳೆದಲ್ಲ.. ಒಳ್ಳೆ ಬೆಳವಣಿಗೆಯಲ್ಲ.. ಯಾರ್ಯಾರು ಅಮಾಯಕ ರೈತರ ಮೇಲೆ ಎಫ್ಐಆರ್ ಆಗಿದೆಯೋ ಸರ್ಕಾರದ ಜೊತೆ ಮಾತನಾಡೋ ಪ್ರಯತ್ನ ಮಾಡ್ತಿನಿ ಎಂದಿದ್ದಾರೆ..

ಪೊಲೀಸರಿಗೆ ಹೊಡೆದವರನ್ನು ಬಿಡಿ ಅಂತ ಹೇಳೊಕೆ ಆಗತ್ತಾ..? ಎಂದಿರುವ ಶಾಸಕರು ಡಿಕೆಶಿಗೆ ಹೆದರಿ ಜಿಲ್ಲಾ ಕಾಂಗ್ರೆಸ್​​ ಶಾಸಕರ ಮಾತು ಅನ್ನೋ ವಿಚಾರವಾಗಿ ಮಾತನಾಡಿದ ಶಾಸಕ ಶ್ರೀನಿವಾಸ್, ಯಾರಿಗೆ ಯಾರು ಯಾರು ಹೆದರಿಕೊಳ್ಳೊದಿಲ್ಲ.. ಅದರ ಪ್ರಶ್ನೆನೂ ಬರೊಲ್ಲ.. ಅವರವರ ಅಸ್ತಿತ್ವ.. ಅವರ ಕ್ಷೇತ್ರ ಹಿತ ಕಾಯೋದು ಮುಖ್ಯ ಆಗುತ್ತದೆ ಎಂದಿದ್ದಾರೆ. ರೈತರು, ಪ್ರತಿಭಟನಾಕಾರರು ಅವರು ಹೇಳ್ತಾರೆ.. ಎಲ್ಲೊ ಕುಳಿತುಕೊಂಡು ಹೇಳಿಕೆ ಕೊಡೊದಲ್ಲ ಎಂದಿದ್ದಾರೆ. ಇನ್ನು ಪ್ರತಿಭಟನೆಗೆ ನನ್ನ ಬೆಂಬಲ ಇದೆ ಎಂದು ಇದೇ ವೇಳೆ ಗುಬ್ಬಿ ಶಾಸಕ ಶ್ರೀನಿವಾಸ್​ ತಿಳಿಸಿದ್ದಾರೆ.

#watch  Suresh Gowda: 100 ಕೇಸ್‌ ಹಾಕಿ ನನ್ನ ಮೇಲೆ ನಾನು ಹೆದರುವುದಿಲ್ಲ ಶಾಸಕ ಸುರೇಶ್‌ ಗೌಡ..! #siddaramaiah
Tags: BJPbjpmlabsureshgowdacongressDKShivakumarHemavathi DamHemavatiLinkCanalHemavatiwatersiddaramaiahtumkurruralvsimanna
Previous Post

ಟ್ರಾಫಿಕ್​ ಪೊಲೀಸರಿಗೆ ಆಯುಕ್ತರಿಂದ ಕಟ್ಟುನಿಟ್ಟಿನ ಆದೇಶ.. ತಪಾಸಣೆಗೆ ಬ್ರೇಕ್​..

Next Post

ಜೂನ್ 27ಕ್ಕೆ ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರ ಅದ್ದೂರಿ ಬಿಡುಗಡೆ

Related Posts

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ
Top Story

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢ ನಾಪತ್ತೆ

by ಪ್ರತಿಧ್ವನಿ
August 22, 2026
0

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಹಾಗೂ ಎಂಎಸ್‌ಎಂಇ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ....

Read moreDetails
ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್: ಇಲ್ಲಿದೆ ಸಂಪೂರ್ಣ ಮಾಹಿತಿ..!

August 22, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -4

August 22, 2026
ಮಂಗಳೂರಿಗೆ ರೈಲ್ವೇ ಗುಡ್‌ನ್ಯೂಸ್: ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆ

ಮಂಗಳೂರಿಗೆ ರೈಲ್ವೇ ಗುಡ್‌ನ್ಯೂಸ್: ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆ

August 22, 2026
500 KPS ಶಾಲೆಗಳ ಅಭಿವೃದ್ಧಿಗೆ  1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

August 21, 2026
Next Post
ಜೂನ್ 27ಕ್ಕೆ ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರ ಅದ್ದೂರಿ ಬಿಡುಗಡೆ

ಜೂನ್ 27ಕ್ಕೆ ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರ ಅದ್ದೂರಿ ಬಿಡುಗಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada