
ಹೇಮಾವತಿ ಲಿಂಕ್ ಕೆನಾಲ್ ವಿವಾದದ ಬಗ್ಗೆ ಬೀದರ್ನಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿ, ರೈತರ ಹಿತ ಕಾಪಾಡುತ್ತೇವೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ತುಮಕೂರು ಸಂಸದರೂ ಆಗಿರುವ, ಕೇಂದ್ರ ಸಚಿವ ವಿ.ಸೋಮಣ್ಣ, ಡಿಕೆ ಶಿವಕುಮಾರ್ ಪಾದಕ್ಕೆ ಕೋಟಿ ನಮಸ್ಕಾರ ಮಾಡಿ ಬಿಡ್ತೀನಿ. ಶಿವಕುಮಾರ್ ಹೀಗ್ಯಾಕೆ ಆದ್ನೋ ಗೊತ್ತಿಲ್ಲ. ಯಾತಕ್ಕಾಗಿ ಈ ರೀತಿ ಗಂಟು ಬಿದ್ದಿದ್ದಾನೋ ಗೊತ್ತಿಲ್ಲ, ತುಮಕೂರು ಜನ ಮುಗ್ದರು. ನನಗೋಸ್ಕರ ಆದ್ರೂ ಅದನ್ನ ಬದಲಾವಣೆ ಮಾಡಿಕೊಳ್ಳುವಂತೆ ಹೇಳಿದ್ದೆ. ಬೇರೆಯವರು ಮಾಡಿದ್ದಾರೆ, ಅವರು ಹೆಸರು ಇರೋದಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ, ಹೀಗೆ ಆಗಬಾರದು ಎಂದಿದ್ದಾರೆ.

ಹೇಮಾವತಿ ಜಲಾಶಯದಿಂದ ತುಮಕೂರಿಗೆ 1200 ಕ್ಯೂಸೆಕ್ ನೀರನ್ನ ಹಂಚಿಕೆ ಮಾಡಿದ್ದು, ಜಿಲ್ಲೆಯ 5 ತಾಲ್ಲೂಕುಗಳಿಗೆ ಹಂಚಿಕೆಯಾಗಿದೆ. ತುಮಕೂರು ಜನ ಹೇಗೋ ನೆಮ್ಮದಿಯಿಂದ ಅವರ ಕೆಲಸ ಮಾಡ್ಕೊಂಡು ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ನಾವ್ಯಾಕೆ ಹುಳಿ ಹಿಂಡಬೇಕು..? ಎಂದು ಸಚಿವರು ಪ್ರಶ್ನಿಸಿದ್ದಾರೆ. ಇನ್ನೊಂದು ಹೊಸ ಲೈನ್ ಮಾಡ್ಕೊಂಡು ಹೋಗು ನೀನೇ ಮಹಾರಾಜ. ನೀನೇ ಉಪ ಮುಖ್ಯಮಂತ್ರಿ ಇದ್ದೀಯಾ, ಬೇಕಾದ್ರೆ ಇನ್ನೊಂದು ಚೇರ್ ಹಾಕಿಕೋ ಬೇಡ ಎನ್ನುವುದಿಲ್ಲ. ಆದ್ರೆ, ಬಡ ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಹೇಮಾವತಿ, ಆಲಮಟ್ಟಿ, ಕೃಷ್ಣಾ ಯಾವುದಾದರಿಂದಾರೂ ನೀರು ತೆಗೆದುಕೊಂಡು ಹೋಗಿ ಎಂದಿರುವ ಸೋಮಣ್ಣ, ಈಗ ಮಾಡಿರುವುದಕ್ಕೆ ತೊಂದರೆ ಕೊಡಬೇಡಿ ಅಂತಾ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೈಮುಗಿದು ಮನವಿ ಮಾಡಿದ ಸಚಿವ ವಿ.ಸೋಮಣ್ಣ, ತುಮಕೂರು ಜನರಿಗೆ ತೊಂದರೆ ಮಾಡದಂತೆ ಮನವಿ ಮಾಡಿದ್ದಾರೆ.
ರಾಮನಗರದ ಮಾಗಡಿಗೆ ನೀರು ತೆಗೆದುಕೊಂಡು ಹೊಗುವ ವಿಚಾರವಾಗಿ ಗುಬ್ಬಿ ಶಾಸಕ ಶ್ರೀನಿವಾಸ್ ಮಾತನಾಡಿ, ಎಲ್ಲೆಲ್ಲಿಗೆ ಎಷ್ಟು ಎಷ್ಟು ಅಲೋಕೇಷನ್ ಆಗಿದೆಯೋ ಆ ವಿಚಾರವನ್ನು ಇಲ್ಲಿ ಮಾತನಾಡೊದು ಅಪ್ರಸ್ತುತ.. ನೀರು ತೆಗೆದುಕೊಂಡು ಹೋಗೊದಕ್ಕೆ ನಮಗೇನು ವಿರೋಧ ಇಲ್ಲ.. ಅಲ್ಲಿರೋರು ರೈತರು ನಮ್ಮವರೇ.. ಯೋಜನೆ ಮಾಡಿ ಬೇಡ ಎನ್ನೊಲ್ಲ.. ವ್ಯವಸ್ಥಿತವಾಗಿ ಯಾವ ರೀತಿ ಮಾಡಬೇಕೊ ಆ ರೀತಿ ಮಾಡಿ.. ಇರೋ ರೈತರಿಗೆಲ್ಲಾ ತೊಂದರೆ ಕೊಡೊದು ಸರಿಯಲ್ಲ.. ಪೈಪ್ ಲೇನ್ ಮುಂಖಾತರ ತಗೊಂಡು ಹೊಗೊದ್ರಿಂದ.. ಎಷ್ಟು ನೀರು ಡ್ರಾ ಆಗುತ್ತೇ ಅಂತ ಯಾರಿಗೂ ಗೊತ್ತಾಗೊದಿಲ್ಲ ಎಂದಿದ್ದಾರೆ.

ಅದರಿಂದ ಈ ಯೋಜನೆ ಮಾಡೊದು ಸರಿ ಇಲ್ಲ ಎಂದಿರುವ ಶಾಸಕ ಶ್ರೀನಿವಾಸ್, ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು ಆಗಿರುವ ವಿಚಾರವಾಗಿ ಮಾತನಾಡಿ ನನಗೆ ಎಫ್ಐಆರ್ ಆಗೊದ್ರ ಬಗ್ಗೆ ಗೊತ್ತಿಲ್ಲ.. ಇದುವರೆಗೂ ನಾನು ತಿಳಿದುಕೊಳ್ಳಲು ಹೋಗಿಲ್ಲ.. ನಿನ್ನೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೊಗಿದ್ದೆ. ಅದಕ್ಕೆ ಇನ್ವಲ್ಮೆಂಟ್ ಆಗೊಕೆ ಆಗಿಲ್ಲ.. ಗೊರೂರ್ ಡ್ಯಾನಿಂದ ತುಮಕೂರಿನವರೆಗೆ ನೀರು ಹರಿಯುತ್ತೇ ಇನ್ನು ಮುಂದಕ್ಕೆ ಹರಿಯಲ್ವಾ..? ಇದರಲ್ಲಿ ಹಟಮಾಡೊದು ಒಳ್ಳೆದಲ್ಲ.. ಒಳ್ಳೆ ಬೆಳವಣಿಗೆಯಲ್ಲ.. ಯಾರ್ಯಾರು ಅಮಾಯಕ ರೈತರ ಮೇಲೆ ಎಫ್ಐಆರ್ ಆಗಿದೆಯೋ ಸರ್ಕಾರದ ಜೊತೆ ಮಾತನಾಡೋ ಪ್ರಯತ್ನ ಮಾಡ್ತಿನಿ ಎಂದಿದ್ದಾರೆ..
ಪೊಲೀಸರಿಗೆ ಹೊಡೆದವರನ್ನು ಬಿಡಿ ಅಂತ ಹೇಳೊಕೆ ಆಗತ್ತಾ..? ಎಂದಿರುವ ಶಾಸಕರು ಡಿಕೆಶಿಗೆ ಹೆದರಿ ಜಿಲ್ಲಾ ಕಾಂಗ್ರೆಸ್ ಶಾಸಕರ ಮಾತು ಅನ್ನೋ ವಿಚಾರವಾಗಿ ಮಾತನಾಡಿದ ಶಾಸಕ ಶ್ರೀನಿವಾಸ್, ಯಾರಿಗೆ ಯಾರು ಯಾರು ಹೆದರಿಕೊಳ್ಳೊದಿಲ್ಲ.. ಅದರ ಪ್ರಶ್ನೆನೂ ಬರೊಲ್ಲ.. ಅವರವರ ಅಸ್ತಿತ್ವ.. ಅವರ ಕ್ಷೇತ್ರ ಹಿತ ಕಾಯೋದು ಮುಖ್ಯ ಆಗುತ್ತದೆ ಎಂದಿದ್ದಾರೆ. ರೈತರು, ಪ್ರತಿಭಟನಾಕಾರರು ಅವರು ಹೇಳ್ತಾರೆ.. ಎಲ್ಲೊ ಕುಳಿತುಕೊಂಡು ಹೇಳಿಕೆ ಕೊಡೊದಲ್ಲ ಎಂದಿದ್ದಾರೆ. ಇನ್ನು ಪ್ರತಿಭಟನೆಗೆ ನನ್ನ ಬೆಂಬಲ ಇದೆ ಎಂದು ಇದೇ ವೇಳೆ ಗುಬ್ಬಿ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.