ಸಿರೋಹಿ (ರಾಜಸ್ಥಾನ): ಸಿರೋಹಿ ಜಿಲ್ಲೆಯ ಪಿಂಡ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಂಟಲ್ ಗ್ರಾಮದ ಬಳಿ ಭಾನುವಾರ ರಾತ್ರಿ ಟ್ರಕ್ Truck)ಮತ್ತು ತೂಫಾನ್ ವಾಹನ ಮುಖಾಮುಖಿ ಡಿಕ್ಕಿ (collision)ಹೊಡೆದು ಏಳು ಪ್ರಯಾಣಿಕರು (Passengers)ಸಾವನ್ನಪ್ಪಿದ್ದಾರೆ ಮತ್ತು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಅಪಘಾತವು ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತತೆಯನ್ನು ಉಂಟುಮಾಡಿತು, ಸಾವಿರಾರು ಜನರ ದೊಡ್ಡ ಗುಂಪು ಸೇರಿ ಜನಜಂಗುಳಿ ಆಗಿತ್ತು. ನಂತರ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಲಾಯಿತು.
ಸಿಒ ಪಿಂಡ್ವಾರಾ CO Pindwara)ಭನ್ವರ್‌ಲಾಲ್ ಚೌಧರಿ ಘಟನೆಯನ್ನು ದೃಢಪಡಿಸಿದರು, ಎಸ್‌ಎಚ್‌ಒ ಹಮೀರ್ ಸಿಂಗ್ ಭಾಟಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತೂಫಾನ್ ಟ್ಯಾಕ್ಸಿಗೆ ತೀವ್ರ ಹಾನಿಯಾಗಿದ್ದು, ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು. ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಬಿಡಿಸಲು ಹರಸಾಹಸ ಪಟ್ಟಿದ್ದು, ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ಹಲವು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ನಂತರ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಭುದಯಾಳ್ ಧನಿಯಾ ಮತ್ತು ಪಿಂಡ್ವಾರಾ ಪೊಲೀಸ್ ಠಾಣಾಧಿಕಾರಿ ಹಮೀರ್ ಸಿಂಗ್ ಭಾಟಿ ಕೂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಗಾಯಾಳುಗಳಿಗೆ ಪಿಂಡ್ವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. ಅಪಘಾತದಲ್ಲಿ ಒಟ್ಟು ೮ ಜನರು ಗಾಯಗೊಂಡಿದ್ದಾರೆ.