
ಲಕ್ನೋ:ದೇಶವೇ ತಲೆತಗ್ಗಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಸೋನಭದ್ರಾದಿಂದ ಬೆಳಕಿಗೆ ಬಂದಿದೆ.ಬುಡಕಟ್ಟು ಯುವಕನ್ನು ಗುಂಪೊಂದು ಅಮಾನುಷವಾಗಿ ಥಳಿಸಿ, ಆತನ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿರುವಂತಹ ಆಘಾತಕಾರಿ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್ ಆದ ಬಳಿಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲ್ಕದಾಡ್ ಎಂಬಲ್ಲಿ ನಡೆದಿದೆ. ಸೆಪ್ಟೆಂಬರ್ 26 ರಂದು ರಾತ್ರಿ 7 ಗಂಟೆ ಸುಮಾರಿಗೆ ತಡೆಗೋಡೆ ನಂಬರ್ ಒಂದರ ಬಳಿ ಪವನ್ ಖಾರ್ವಾರ್ ಎಂಬ ಯುವಕನನ್ನು ಅಂಕಿತ್ ಭಾರ್ತಿ ಮತ್ತು ಇತರ ಏಳೆಂಟು ಯುವಕರ ಗುಂಪು ಸುತ್ತುವರಿದು ಮನಬಂದಂತೆ ಥಳಿಸಿದ್ದಾರೆ.
युवक से मारपीट कर दबंगों ने किया पेशाब,
— MANOJ SHARMA LUCKNOW UP🇮🇳🇮🇳🇮🇳 (@ManojSh28986262) October 2, 2024
घटना का वीडियो सोशल मीडिया पर वायरल !!#यूपी के #सोनभद्र में साल में दूसरा पेशाब कांड आया सामने !!
सोशल साइट के जरिए पीड़ित के भाई ने की शिकायत, मामला संज्ञान में आने के बाद पुलिस हुई सक्रिय !!
पुलिस अधीक्षक ने गिरफ्तार करने के दिए… pic.twitter.com/GZdHeOlYZz
ಇದಾದ ಬಳಿಕ ಯುವಕನೊಬ್ಬ ಪವನ್ ಖಾರ್ವಾರ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.ಇತರ ಯುವಕರು ನಿಂತು ಅದನ್ನು ವಿಡಿಯೊ ಮಾಡಿದ್ದಾರೆ. ಈ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್ ತಿಳಿಸಿದ್ದಾರೆ.
घटना का वीडियो !! pic.twitter.com/4FAifEDixr
— MANOJ SHARMA LUCKNOW UP🇮🇳🇮🇳🇮🇳 (@ManojSh28986262) October 2, 2024
ಘಟನೆಯ ನಂತರ ಗಾಯಗೊಂಡ ಪವನ್ ಖಾರ್ವಾರ್ ತನ್ನ ಸಹೋದರ ಶಿವ ಕುಮಾರ್ ಖಾರ್ವಾರ್ ಅವರೊಂದಿಗೆ ಮಧ್ಯಪ್ರದೇಶದ ಬೈದಾನ್‌ಗೆ ಹೋಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ಮತ್ತೆ ಶಕ್ತಿನಗರಕ್ಕೆ ಬಂದ ಸಂತ್ರಸ್ತನ ಸಹೋದರ ಶಿವಕುಮಾರ್ ಘಟನೆಯ ಬಗ್ಗೆ ಟೀಟ್ ಮೂಲಕ ಪೊಲೀಸರಿಗೆ, ಅಧಿಕಾರಿಗಳು, ಪಿಎಂಒ ಮತ್ತು ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಮುಖ ಆರೋಪಿ ಅಂಕಿತ್ ಭಾರ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತರ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಘಟನೆ ಅತ್ಯಂತ ಅಮಾನವೀಯವಾಗಿದ್ದು, ಕಟ್ಟುನಿಟ್ಟಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.