ಆಪರೇಷನ್ ಹಸ್ತ ಸಂಬಂಧ ಕರ್ನಾಟಕ ಬಿಜೆಪಿ ಪಾಳಯದಲ್ಲಿ ಒಂದು ರೀತಿ ಭೀತಿ ಆವರಿಸಿದೆ. ಈ ಸಂಬಂಧ ಸೋಮವಾರ (ಆಗಸ್ಟ್ 21) ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ.
ಪಕ್ಷದಲ್ಲಿ ಇರುವವರು ಇರಲಿ, ಹೋಗುವವರು ಹೋಗಲಿ ಎಂಬ ನಿಲುವು ತಳೆದ ಬಿಜೆಪಿ. ಈ ಬಗ್ಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನೆ.
ಈ ನಡುವೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಆಪರೇಷನ್ ಹಸ್ತ. ಆಪರೇಷನ್ ಕಮಲವನ್ನು ಟೀಕಿಸುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷ.
ಇದೀಗ ಆಪರೇಷನ್ ಹಸ್ತಕ್ಕೆ ಮುಂದಾಗುವ ಮೂಲಕ ನಿಲುವು ಬದಲಿಸಿದ ಕಾಂಗ್ರೆಸ್. ಕಾಂಗ್ರೆಸ್ ಯುಟರ್ನ್ ನಿಂದ ಬಿಜೆಪಿಗೆ ಟ್ರಬಲ್.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಪರೇಷನ್ ಹಸ್ತಕ್ಕೆ ಚಾಲನೆ. ಬಿಜೆಪಿಯ ಕೆಲವು ಮಾಜಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ತೆಕ್ಕೆಗೆ. ಹಸ್ತದ ಹಸ್ತಕ್ಷೇಪದಿಂದ ಕಮಲ ಪಾಳಯ ಅಸ್ತವ್ಯಸ್ತ. ಆಪರೇಷನ್ ಹಸ್ತದ ಮೂಲಕ ಕೇಸರಿ ಪಾಳಯಕ್ಕೆ ಕೈ ಟಕ್ಕರ್. ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಗೀಗ ಕಾಂಗ್ರೆಸ್ ನಿಂದ ರಿವರ್ಸ್ ಆಪರೇಷನ್.
ತಾನೇ ಹುಟ್ಟು ಹಾಕಿದ ಆಪರೇಷನ್ ರಾಜಕಾರಣದಿಂದ ಅಡಕತ್ತರಿಗೆ ಸಿಲುಕಿರುವ ಬಿಜೆಪಿ. ವಿಪಕ್ಷ ನಾಯಕನಿಲ್ಲದೇ ದಿಕ್ಕೆಟ್ಟಂತಾಗಿರುವ ಬಿಜೆಪಿ ಶಾಸಕರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಆಪರೇಷನ್ ಹಸ್ತ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ಹೈಕಮಾಂಡ್. ಬಿಜೆಪಿ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ದಾಳ ಉರುಳಿಸುತ್ತಿರುವ ಕಾಂಗ್ರೆಸ್ ನಾಯಕರು.