
ವೈದ್ಯಕೀಯ ಶಿಕ್ಷಣ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಹೆಚ್ಚಳ ಬೆನ್ನಲ್ಲೇ ಬಡ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟ್ರೀಟ್ಮೆಂಟ್ ದುಬಾರಿಯಾಗಲಿದೆ. ಪ್ರಾಥಮಿಕ ಆರೊಗ್ಯ ಕೇಂದ್ರಗಳ ಚಿಕಿತ್ಸಾ ವೆಚ್ಚ ಶೇಕಡಾ 15ರಿಂದ 20ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಚಿಕಿತ್ಸಾ ದರ ಪರಿಷ್ಕರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದರ ಏರಿಕೆಯನ್ನು ARS ಕಮೀಟಿ ತೀರ್ಮಾನ ಮಾಡುತ್ತದೆ. ಆಸ್ಪತ್ರೆ ಆದಾಯ ಹೆಚ್ಚು ಮಾಡಿಕೊಳ್ಳಲು ದರ ಏರಿಕೆ ಮಾಡಿದ್ದಾರೆ. ಬಿಜೆಪಿಯವರು ಗ್ಯಾರಂಟಿ ಮೇಲೆ ಹೇಳ್ತಾರೆ. ಆದರೆ ದರ ಏರಿಕೆಗೆ ಗ್ಯಾರಂಟಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಈ ದರ ಏರಿಕೆಯಿಂದ ಸಂಗ್ರಹ ಆಗುವ ಹಣ ಆಸ್ಪತ್ರೆಗೆ ಹೋಗುವ ಹಣ. ಈ ಹಣ ಸರ್ಕಾರದ ಕ್ಕೆಗೆ ಬರುವುದಿಲ್ಲ. ಸುಮಾರು ವರ್ಷಗಳಿಂದ ಇರುವುದು 10 ರೂಪಾಯಿ ಇರುವುದು 20 ರೂಪಾಯಿ, 30 ರೂಪಾಯಿ ಇರುವುದು 40 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಹೆಚ್ಚಳ ಏನು ದೊಡ್ಡ ವಿಚಾರ ಅಲ್ಲ ಎಂದಿದ್ದಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ, ಚಿಕಿತ್ಸಾ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ. ದುರುವಾರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಲಿದ್ದಾರೆ. ನಾಳೆ ಮಧ್ಯಾಹ್ನ 12:30 ಕ್ಕೆ ವಿಕ್ಟೊರಿಯಾ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದಾರೆ.














