• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೈಲುಗಳ ಟಿಕೆಟ್ ದರ ಪರಿಷ್ಕರಣೆ ಮಾಡ್ತೇವೆ: ವಿ ಸೋಮಣ್ಣ..!

ಪ್ರತಿಧ್ವನಿ by ಪ್ರತಿಧ್ವನಿ
June 29, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ವಂದೇ ಭಾರತ್ (Vande Bharat) ಸೇರಿದಂತೆ ಎಲ್ಲಾ ರೈಲುಗಳ (All Trains) ಟಿಕೆಟ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ (Railway Minister V Somanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡ, ಮಧ್ಯಮ ವರ್ಗದ ಜನ ವಂದೇ ಭಾರತ್ ರೈಲಿನಲ್ಲಿ ಓಡಾಡುವಂತೆ ಟಿಕೆಟ್‌ ದರ ಪರಿಷ್ಕರಣೆ ಮಾಡುತ್ತೇವೆ. ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ(Narendra Modi) ಜೊತೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.

ADVERTISEMENT

ಬೆಂಗಳೂರು ಜನ ಪ್ರತಿನಿಧಿಗಳು ಹಾಗೂ ರಾಜ್ಯ ರೈಲ್ವೆ ಇಲಾಖೆಯ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇನೆ. ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್(Ashwini Vaishnav) ಅವರ ಅನುಭವ ಇನ್ನಷ್ಟು ಹುಮ್ಮಸ್ಸು ಕೊಡುತ್ತಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿಯ ಮಿಲಿಟರಿ ಇದ್ದಂತೆ. ದೇಶದಲ್ಲಿ ಮೊದಲು ಮಿಲಿಟರಿ ಪಡೆ ಆದರೆ, ಎರಡನೇ ಹಂತದಲ್ಲಿ ರೈಲ್ವೆ ಇಲಾಖೆ ಇದೆ. ಅದೇ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ.

ಬಾಕಿ ಹಣದ ಬಗ್ಗೆ ಈಗ ಏನೂ ಮಾತಾಡಲ್ಲ, ರಾಜ್ಯದ ಬಾಕಿ ಹಣ ಬರಬೇಕಿದೆ. ರಾಜ್ಯ, ಕೇಂದ್ರಸರ್ಕಾರಗಳು ಒಗ್ಗಟ್ಟಿನಲ್ಲಿ, ಸಹಕಾರದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ರೈಲ್ವೆ ಅಂಡರ್​ಪಾಸ್(Railway Underpass), ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಬೇಕು. ಕೇಂದ್ರ ಸರ್ಕಾರ(Central Govt), ರಾಜ್ಯ ಸರ್ಕಾರ ಸಮಪಾಲು ಹಣ ನೀಡಬೇಕಾಗುತ್ತದೆ. ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್(Contonment Railway Station)​ ಯೋಜನಾ ಮೊತ್ತ 485 ಕೋಟಿ ರೂ. ಯಶವಂತಪುರ ನಿಲ್ದಾಣದ(Yeshwanthpur Railway Station) ಯೋಜನಾ ಮೊತ್ತ 387 ಕೋಟಿ ರೂ ಎಂದರು.

ಯಶವಂತಪುರ-ಚನ್ನಸಂದ್ರ (Yeshwanthpur-Channasandra) ನಡುವೆ 25 ಕಿ.ಮೀ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು(Byappanahalli-Hosur) ನಡುವೆ 48 ಕಿ.ಮೀ. ಹಳಿ ಡಬ್ಲಿಂಗ್​ ಯೋಜನೆಗೆ 814 ಕೋಟಿ ರೂಪಾಯಿ ವೆಚ್ಚವಾಗಲಿದೆ. ರೈಲ್ವೆ ಓವರ್ ಬ್ರಿಡ್ಜ್(Railway Over Bridge), ಅಂಡರ್​ಪಾಸ್​ನಲ್ಲಿ ತೊಂದರೆ ಆಗಲು ಬಿಡಲ್ಲ. ಕರ್ನಾಟಕದಲ್ಲಿ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಹೊಂದಲಿದೆ. ಹಿಂದೆ ರೈಲ್ವೆ ಅಂಡರ್ ಪಾಸ್ ಮತ್ತು ಮೇಲ್ಸೇತುವೆಗಳಿಗೆ ಕೇಂದ್ರ ಮತ್ತು ರಾಜ್ಯ ಸಹಯೋಗ ಇರುತ್ತಿತ್ತು. ಇದು ಎಷ್ಟರ ಮಟ್ಟಿಗೆ ಕಾರ್ಯೋನ್ಮುಖ ಆಗುತ್ತಿತ್ತೋ ಗೊತ್ತಿಲ್ಲ. ರೈಲುಗಳು ಬಂದಾಗ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು ಎಂದು ಹೇಳಿದ್ದಾರೆ.

Tags: BJPCongress PartyNDARailwayministervsomannaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಆತ್ಮೀಯ ಗೆಳೆಯನನ್ನು ನೋಡಲು ಜೈಲಿಗೆ ಬಂದ ರಕ್ಷಿತಾ ಪ್ರೇಮ್‌

Next Post

ಸಚಿವ ಮಧು ಮುಂದೆನೇ ಮೊಬೈಲ್ ಎಸೆದ BJP MLA ಚನ್ನಬಸಪ್ಪ

Related Posts

ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?
Top Story

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ: ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

by ಪ್ರತಿಧ್ವನಿ
August 30, 2026
0

ಬೆಂಗಳೂರು: ಅಮೆರಿಕದಲ್ಲಿ ಹಿಂದೂತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ತೀವ್ರ ಪ್ರತಿಕ್ರಿಯಿಸಿರುವ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್...

Read moreDetails
Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

August 30, 2026
ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

August 30, 2026
ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

August 30, 2026
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

August 30, 2026
Next Post

ಸಚಿವ ಮಧು ಮುಂದೆನೇ ಮೊಬೈಲ್ ಎಸೆದ BJP MLA ಚನ್ನಬಸಪ್ಪ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada